AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Art For All: ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಚಿತ್ರಕಲಾ ಕೃತಿಗಳ ಉತ್ಸವ, 93 ವರ್ಷದ ಹಿರಿಯ ಭಾಗಿ

ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ 15 ನೇ ಆವೃತ್ತಿಯ ಕಲರ್‌ಥಾನ್ ಆಯೋಜಿಸಲಾಗಿದ್ದು ಯಾವ ವಯಸ್ಸಿನ ಮಿತಿ ಇಲ್ಲದೆ ಹಿರಿಯರಿಂದ-ಕಿರಿಯರವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಡ್ರಾಯಿಂಗ್, ಕಲರಿಂಗ್, ಸ್ಕೆಚಿಂಗ್, ಪೈಟಿಂಗ್ ಮಾಡಿ ಸಂಭ್ರಮಿಸಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಬಾರಿಯ ಕಲರ್‌ಥಾನ್​ನಲ್ಲಿ 93 ವರ್ಷದ ಹಿರಿಯರು ಕೂಡ ಭಾಗಿಯಾಗಿದ್ದರು.

Art For All: ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಚಿತ್ರಕಲಾ ಕೃತಿಗಳ ಉತ್ಸವ, 93 ವರ್ಷದ ಹಿರಿಯ ಭಾಗಿ
ಚಿತ್ರಕಲಾ ಕೃತಿಗಳ ಉತ್ಸವದಲ್ಲಿ ಭಾಗಿಯಾಗಿದ್ದ ಬಾಲಕಿ
TV9 Web
| Edited By: ಆಯೇಷಾ ಬಾನು|

Updated on: Sep 04, 2023 | 4:38 PM

Share

ಬೆಂಗಳೂರು, ಸೆ.04: ಭಾನುವಾರ ಬೆಳಿಗ್ಗೆ 5,000 ಕ್ಕೂ ಹೆಚ್ಚು ಮಂದಿ ಒಟ್ಟಿಗೆ ಕೂತು ಚಿತ್ರಕಲೆ ಪ್ರದರ್ಶಿಸಿದ್ದಾರೆ. ತಮ್ಮ ನೆಚ್ಚಿನ ಚಿತ್ರ ಬಿಡಿಸಿ, ಬಣ್ಣ ತುಂಬಿ ಖುಷಿ ಪಟ್ಟಿದ್ದಾರೆ. ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ 15 ನೇ ಆವೃತ್ತಿಯ ಕಲರ್‌ಥಾನ್(Colorothon) ಆಯೋಜಿಸಲಾಗಿದ್ದು ಯಾವ ವಯಸ್ಸಿನ ಮಿತಿ ಇಲ್ಲದೆ ಹಿರಿಯರಿಂದ-ಕಿರಿಯರವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಡ್ರಾಯಿಂಗ್, ಕಲರಿಂಗ್, ಸ್ಕೆಚಿಂಗ್, ಪೈಟಿಂಗ್ ಮಾಡಿ ಸಂಭ್ರಮಿಸಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಬಾರಿಯ ಕಲರ್‌ಥಾನ್​ನಲ್ಲಿ 93 ವರ್ಷದ ಹಿರಿಯರು ಕೂಡ ಭಾಗಿಯಾಗಿದ್ದರು.

ಅಮೀರ್ ಖಾನ್ ನಟಿಸಿರುವ ಬಾಲಿವುಡ್​ನ ‘ತಾರೆ ಜಮೀನ್ ಪರ್‌’ ಚಿತ್ರದಿಂದ ಪ್ರೇರಿತರಾದ ಕಿಶೋರ್ ಜೋಸೆಫ್ ಅವರು ವಿವಿಧ ವಯೋಮಾನದವರನ್ನು ಒಂದೇ ಸೂರಿನಡಿ ತಂದು ಕಲೆಯ ಮೂಲಕ ಎಲ್ಲರಿಗೂ ಕೆಲ ಎಂಬ ಸಂದೇಶವನ್ನು ಸಾರಿದ್ದಾರೆ. ಕಲರ್‌ಥಾನ್ ಆರಂಭವಾಗಿದ್ದು 2014ರಲ್ಲಿ. ಭಾನುವಾರ ಆಯೋಜಿಸಲಾಗಿದ್ದ 15 ನೇ ಆವೃತ್ತಿಯ ಕಲರ್‌ಥಾನ್​ನಲ್ಲಿ ಹಿರಿಯರಿಂದ-ಕಿರಿಯರವರೆಗೂ ಎಲ್ಲಾ ವಯಸ್ಸಿನವರು ಭಾಗಿಯಾಗಿದ್ದರು. ತಮ್ಮ ಸೃಜನಶೀಲ ಕೌಶಲ್ಯಗಳನ್ನು ಚಿತ್ರದ ಮೂಲಕ ಪ್ರದರ್ಶಿಸಿದರು.

ಇದನ್ನೂ ಓದಿ: Drawing Day 2023: ಭಾಷೆಯನ್ನೂ ಮೀರಿ, ಭಾವನೆಗಳಿಗೆ ಬಣ್ಣ ನೀಡೋ ಚಿತ್ರಕಲೆ ದಿನವನ್ನು ಆಚರಿಸಿ, ಕಲಾವಿದರಿಗೆ ಪ್ರೋತ್ಸಾಹಿಸಿ

ಇದು ಎಲ್ಲರನ್ನೂ ಒಳಗೊಂಡ ಕಾರ್ಯಕ್ರಮವಾಗಿದೆ. ಪೆನ್ಸಿಲ್ ಹಿಡಿಯಬಲ್ಲ ಯಾರಾದರೂ ಕಲೆಯ ಹಬ್ಬದಲ್ಲಿ ಭಾಗವಹಿಸಬಹುದು. 3 ವರ್ಷದಿಂದ 90 ವರ್ಷದೊಳಗಿನ ವಯೋಮಾನದವರು ಕಲರ್‌ಥಾನ್​ನಲ್ಲಿ ಭಾಗಿಯಾಗಿ ಹೊಸ ಬೆಂಚ್ ಮಾರ್ಕ್ ಸೃಷ್ಟಿಸಿದ್ದಾರೆ ಎಂದು ಕಲರ್‌ಥಾನ್ ಸಂಸ್ಥಾಪಕ ಜೋಸೆಫ್ ತಿಳಿಸಿದರು.

‘ತಾರೆ ಜಮೀನ್ ಪರ್’ ಸಿನಿಮಾ ವೀಕ್ಷಿಸಿದಾಗ, ಕಲರ್‌ಥಾನ್ ಕಾರ್ಯಕ್ರಮ ಮಾಡಬೇಕೆಂಬ ಆಸೆ ಹುಟ್ಟಿತು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕುಟುಂಬದೊಂದಿಗೆ ಇರಲು ಸಮಯವನ್ನು ಹೆಚ್ಚಾಗಿ ಕೊಡುವುದಿಲ್ಲ. ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಸಮಯವನ್ನು ಕೊಟ್ಟರೂ ಸಹ, ವಿವಿಧ ರೀತಿಯಲ್ಲಿ ಅದನ್ನು ಕಳೆಯುತ್ತಾರೆ. ಆದರೆ ಯಾರೂ ಕೂಡ ಸೃಜನಾತ್ಮಕವಾಗಿ ಏನನ್ನೂ ಮಾಡುತ್ತಿಲ್ಲ. ಇದನ್ನೇ ನಾನು ಬದಲಾಯಿಸಲು ಬಯಸುತ್ತೇನೆ. ಇಲ್ಲಿಯವರೆಗೆ, ಕಲರ್‌ಥಾನ್ ಚಿತ್ರಕಲೆ ಉತ್ಸವದಲ್ಲಿ ದೇಶಾದ್ಯಂತ 1,65,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ನವದೆಹಲಿ, ಲಕ್ನೋ, ಚೆನ್ನೈ, ಹೈದರಾಬಾದ್, ಮುಂಬೈ, ಗುವಾಹಟಿ ಮತ್ತು ಬೆಂಗಳೂರಿನಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜೋಸೆಫ್ ಹೇಳಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್