AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ನಮ್ಮ ಯಾತ್ರಿ ಆ್ಯಪ್​ ಮೂಲಕ ಕೋಟಿ ಕೋಟಿ ಹಣ ಗಳಿಸಿದ ಆಟೋರಿಕ್ಷಾ ಚಾಲಕರು

ನಗರದ ಆಟೋರಿಕ್ಷಾ ಚಾಲಕರು ಮಧ್ಯವರ್ತಿಗಳ ಕಾಟವಿಲ್ಲದೆ ಕೋಟ್ಯಾಂತರ ರೂ. ಹಣ ಸಂಪಾದಿಸುವ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಹೌದು ಆಟೋರಿಕ್ಷಾ ಚಾಲಕರ ಸಂಘ ನವೆಂಬರ್​ 2022 ರಲ್ಲಿ "ನಮ್ಮ ಯಾತ್ರಿ" ಎಂಬ ಆ್ಯಪ್​​ನ್ನು ತಯಾರಿಸಿದ್ದಾರೆ.

Bengaluru: ನಮ್ಮ ಯಾತ್ರಿ ಆ್ಯಪ್​ ಮೂಲಕ ಕೋಟಿ ಕೋಟಿ ಹಣ ಗಳಿಸಿದ ಆಟೋರಿಕ್ಷಾ ಚಾಲಕರು
ಆಟೋರಿಕ್ಷಾ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Mar 07, 2023 | 9:30 AM

Share

ಬೆಂಗಳೂರು: ನಗರದ ಆಟೋರಿಕ್ಷಾ ಚಾಲಕರು (Auto Rrickshaw) ಮಧ್ಯವರ್ತಿಗಳ ಕಾಟವಿಲ್ಲದೆ ಕೋಟ್ಯಾಂತರ ರೂ. ಹಣ ಸಂಪಾದಿಸುವ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಹೌದು ಆಟೋರಿಕ್ಷಾ ಚಾಲಕರ ಸಂಘ ನವೆಂಬರ್​ 2022 ರಲ್ಲಿ “ನಮ್ಮ ಯಾತ್ರಿ” (Namma Yatri) ಎಂಬ ಆ್ಯಪ್​​ನ್ನು ತಯಾರಿಸಿದ್ದಾರೆ. ಈ ಆ್ಯಪ್​ ಮೂಲಕ ಪ್ರಯಾಣಿಕರು ಆಟೋ ರಿಕ್ಷವನ್ನು ಬುಕ್​ ಮಾಡಹುದಾಗಿದೆ. ನವೆಂಬರ್​​​ನಿಂದ ಇಲ್ಲಿಯವರಗೆ ಆ್ಯಪ್ ಮೂಲಕ ರಿಕ್ಷಾ ಚಾಕಲರು ಸುಮಾರು 5.6 ಕೋಟಿ ರೂ. ಹಣ ಸಂಪಾದಿಸಿದ್ದಾರೆ. ಆ್ಯಪ್​ನಿಂದ ದೊರೆತ ಮಾಹಿತಿ ಪ್ರಕಾರ 41,112 ರಿಕ್ಷಾ ಚಾಲಕರು ಮತ್ತು 3.35,653 ಬಳಕೆದಾರರು ಆ್ಯಪ್​​ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಮಾರ್ಚ್​​ 6ರವರೆಗು ಚಾಲಕರು 3,37,762 ಟ್ರೀಪ್​​ಗಳನ್ನು ಪೂರ್ಣಗೊಳಿಸಿದ್ದು, ಮಾರ್ಚ್​​ 5ರ ವರೆಗೆ 9 ಲಕ್ಷ ಹಣ ಗಳಸಿದ್ದಾರೆ.

ಆಟೋರಿಕ್ಷಾ ಚಾಲಕರ ಸಂಘ ಈ ಆ್ಯಪ್​ನ್ನು ಪರಿಚಯಿಸಿದ್ದು, ಈ ಆ್ಯಪ್​ ಮೂಲಕ ಪಾರದರ್ಶಕತೆ ಮತ್ತು ವಸ್ತುನಿಷ್ಠತೆಯಿಂದ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಆ್ಯಪ್​ನಲ್ಲಿ ಸಮಯ, ಚಾಲಕರ ಲಭ್ಯತೆ ಡ್ಯಾಶ್‌ಬೋರ್ಡ್ ಚಾಲಕರ ಲಭ್ಯತೆ, ಟ್ರಿಪ್‌ಗಳ ವಿವರ, ಹೆಚ್ಚಿನ ರೈಡರ್‌ಶಿಪ್ ಹೊಂದಿರುವ ಬೆಂಗಳೂರಿನ ಪ್ರಮುಖ ಐದು ಪ್ರದೇಶಗಳ ನೈಜ-ಸಮಯದ ಡೇಟಾವನ್ನು ಸಹ ತೋರಿಸುತ್ತದೆ ಎಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದ್ದಾರೆ.

ಸಾಯಂಕಾಲ 6:30ರ ಹೊತ್ತಿಗೆ ಮಹದೇವಪುರ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ಈ ಐದು ಪ್ರದೇಶಗಳಲ್ಲಿ ಹೆಚ್ಚಿನ ಜನರು ನಮ್ಮ ಯಾತ್ರಿ ಆ್ಯಪ್​ ಮೂಲಕ ಸಂಚರಿಸುತ್ತಾರೆ. ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 9,000 ಟ್ರಿಪ್‌ಗಳು ಪೂರ್ಣಗೊಳ್ಳುತ್ತವೆ. ಆ್ಯಪ್​​ನ ಡ್ಯಾಶ್‌ಬೋರ್ಡ್‌ನಲ್ಲಿ ನೈಜ-ಸಮಯದ ಅಂಕಿಅಂಶ ಕಾಣುತ್ತದೆ. ಆದರೆ ಸ್ಥಳದ ನಿಖರತೆಯ ವಿಷಯದಲ್ಲಿ ನಾವು ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ, ಅದನ್ನು ಈಗ ಬಹುತೇಕ ಪರಿಹರಿಸಲಾಗಿದೆ ಎಂದು ಹೇಳಿದರು.

ಸರ್ಕಾರದ ನಿಯಮಗಳ ಪ್ರಕಾರ, ಮೊದಲ 2 ಕಿಮೀಗೆ ರೂ 30 ಮತ್ತು ನಂತರದ ಕಿಲೋಮೀಟರ್‌ಗಳಿಗೆ ರೂ 15 ಶುಲ್ಕ ವಿಧಿಸುತ್ತದೆ. ಅಪ್ಲಿಕೇಶನ್ ಪ್ರತಿ ಬುಕಿಂಗ್‌ಗೆ ರೂ 10 ಪಿಕಪ್ ದರವನ್ನು ವಿಧಿಸುತ್ತದೆ. ಆದಾಗ್ಯೂ, ಡೆವಲಪರ್‌ಗಳು 3 ಕಿಮೀ ವ್ಯಾಪ್ತಿಯೊಳಗೆ 55 ರೂ. (ಪಿಕಪ್ ಶುಲ್ಕ ರೂ 10 ಸೇರಿದಂತೆ) ದರ ನಿಗದಿಪಡಿಸಲಾಗಿದೆ. ಇನ್ನು 2 ಕಿಮೀ ವ್ಯಾಪ್ತಿಯೊಳಗೆ ಮೆಟ್ರೋ ನಿಲ್ದಾಣದಿಂದ ಮನೆಗೆ ಡ್ರಾಪ್​ ಮಾಡಲು 40 ರೂ (ರೂ. 10 ರ ಪಿಕಪ್ ಶುಲ್ಕ ಸೇರಿದಂತೆ) ದರ ವಿಧಿಸಲು ಯೋಚಿಸಲಾಗುತ್ತಿದೆ. ಆಸ್ಪತ್ರೆಯಿಂದ ಮನೆಗೆ ಪಿಕ್​ಅಪ್​ ಮತ್ತು ಡ್ರಾಪ್ ಸೇವೆಗಳನ್ನು ಸಹ ಇದೇ ರೀತಿ ಹೊರತರಲಾಗುವುದು ಎಂದು ತಿಳಿಸಿದರು.

ಸುರಕ್ಷತಾ ದೃಷ್ಟಿಯಿಂದ ವೈಟ್ ಬೋರ್ಡ್ ದ್ವಿಚಕ್ರ ಟ್ಯಾಕ್ಸಿಗಳನ್ನು ನಿಷೇಧಿಸಬೇಕು ಎಂದು ಆಟೋರಿಕ್ಷಾ ಚಾಲಕರ ಸಂಘವು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ಮಂಜುಳಾ ಅವರಿಗೆ ಪತ್ರ ಬರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 am, Tue, 7 March 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ