ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡ ಯಶವಂತಪುರ ಮಾರುಕಟ್ಟೆಯ 32 ಅಂಗಡಿಗಳಿಗೆ ಬೀಗ

ಬೆಂಗಳೂರಿನಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಾಲೀಕರಿಗೆ, ಸುಸ್ತಿದಾರರಿಗೆ ಬಿಬಿಎಂಪಿ ಬಿಸಿ ಮುಟ್ಟಿಸುತ್ತಾ ಇದೆ. ಅತಿ ಹೆಚ್ಚು ಟ್ಯಾಕ್ಸ್ ಬಾಕಿ ಉಳಿಸಿಕೊಂಡಿರುವ ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಹೊಡೆದಿದೆ. ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಅಂಗಡಿಗಳಿಗೆ ಬೀಗ ಹಾಕುವ ಅಭಿಯಾನ ಮುಂದುವರೆಯಲಿದ್ದು, ಸೋಮವಾರ ಯಶವಂತಪುರದ ಆರ್‌ಟಿಒ ರಸ್ತೆಯಲ್ಲಿರುವ ಅಂಗಡಿಗಳಿಗೆ ಪಾಲಿಕೆ ಬೀಗ ಜಡಿದಿದೆ.

ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡ ಯಶವಂತಪುರ ಮಾರುಕಟ್ಟೆಯ 32 ಅಂಗಡಿಗಳಿಗೆ ಬೀಗ
ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡ ಯಶವಂತಪುರ ಮಾರುಕಟ್ಟೆಯ 32 ಅಂಗಡಿಗಳಿಗೆ ಬೀಗ
Follow us
Vinayak Hanamant Gurav
| Updated By: Ganapathi Sharma

Updated on: Nov 05, 2024 | 6:52 AM

ಬೆಂಗಳೂರು, ನವೆಂಬರ್ 5: ಬೆಂಗಳೂರಿನಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿಗಳಿಗೆ ಬೀಗ ಹಾಕುವ ಕೆಲಸವನ್ನು ಬಿಬಿಎಂಪಿ ಚುರುಕುಗೊಳಿಸಿದೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲೂ ಈ ಅಭಿಯಾನ ನಡೆಯುತ್ತಿದ್ದು ಸೋಮವಾರ ಪಶ್ಚಿಮ ವಲಯದ ಯಶವಂತಪುರ ಆರ್‌ಟಿಒ ಕಚೇರಿ ಮುಂಭಾಗದ ಮಾರ್ಕೆಟ್​ನಲ್ಲಿ ಇರುವ 32 ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್​ 32 ಅಂಗಡಿಗಳಿಗೆ ಬೀಗ

ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಒಟ್ಟು 42 ಅಂಗಡಿಗಳು ಟ್ಯಾಕ್ಸ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವು. ಈ ಪೈಕಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್​ಗೆ ಸೇರಿದ 32 ಅಂಗಡಿಗಳಿಗೆ ಸೇರಿದಂತೆ ಇನ್ನುಳಿದ ಅಂಗಡಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ ಟ್ಯಾಕ್ಸ್ ಪಾವತಿ ಮಾಡಿರಲಿಲ್ಲ. ಒಂದೂವರೆ ಕೋಟಿ ರೂಪಾಯಿ ಬಾಕಿ ಇದ್ದರೂ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ ಸೆಂಟ್ರಲ್ ಮುಸ್ಲಿಂ ಅಸೊಸಿಯೇಷನ್‌ಗೆ ಸೇರಿದ 32 ಅಂಗಡಿಗಳಿಗೆ ಸೀಲ್ ಹಾಕಲಾಗಿದೆ. ಇನ್ನುಳಿದ ಅಂಗಡಿಗಳು ಖಾಸಗಿ ಒಡೆತನದ್ದಾಗಿರುವುದರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲಾಗಿದ್ದು, ಆ ಅಂಗಡಿಗಳಿಗೆ ಸೀಲ್ ಹಾಕಿಲ್ಲ.

ಆದರೆ ‌ಎಸ್‌ಎಂ‌ಎಗೆ ಸೇರಿದ ಅಂಗಡಿಗಳ ಮಾಲೀಕರು ಈ ನವೆಂಬರ್ ತಿಂಗಳೊಳಗಾಗಿ ತೆರಿಗೆ ಪಾವತಿಸದಿದ್ದರೆ ಮೂರು ಪಟ್ಟು ಹಣ ಕಟ್ಟಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿ ಪಟಾಕಿ ಸಂಭ್ರಮಕ್ಕೆ ಮನುಷ್ಯ ಮಾತ್ರವಲ್ಲ ಹದ್ದುಗಳು ವಿಲವಿಲ

ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್​ಗೆ ಸೇರಿದ ಅಂಗಡಿಯ ಬಾಡಿಗೆದಾರರು ತಿಂಗಳು, ತಿಂಗಳು ಬಾಡಿಗೆ ಕಟ್ಟಿಕೊಂಡು ಹೋಗುತ್ತಿದ್ದಾರಂತೆ. ಆದರು ಕೂಡ ಎಸ್‌ಎಂಎ ಟ್ಯಾಕ್ಸ್ ಕಟ್ಟದೇ ನಿರ್ಲಕ್ಷ ವಹಿಸಿರುವುದರಿಂದ 32 ಕುಟುಂಬಗಳು ಬೀದಿಗೆ ಬಿದ್ದಿವೆ.

ತೆರಿಗೆ ಕಟ್ಟದೇ ಇರುವ ಅಂಗಡಿಗಳಿಗೆ ಬೀಗ ಹಾಕುವ ಕೆಲಸವನ್ನು ಬಿಬಿಎಂಪಿ ಮಾಡುತ್ತಾ ಇದ್ದು ತೆರಿಗೆ ಪಾವತಿಸಿದ ಬಳಿಕ ಸೀಲ್ ಓಪನ್ ಮಾಡಲಿದೆ. ಪಶ್ಚಿಮ ವಲಯದಲ್ಲಿ ಸಾಕಷ್ಟು ಅಂಗಡಿಗಳಿಗೆ ಬೀಗ ಹಾಕಿ ಬಿಸಿ ಮುಟ್ಟಿಸಲು ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ