ಕರ್ನಾಟಕದಲ್ಲಿ ಮಳೆಯ ಕೃಪೆಯಿಂದ ಶುದ್ಧವಾದ ಗಾಳಿ: ನಿಮ್ಮ ಜಿಲ್ಲೆಯ ವಾಯು ಗುಣಮಟ್ಟ ಎಷ್ಟಿದೆ ಗೊತ್ತಾ?
ಮುಂಗಾರು ಮಳೆಯ ಸಕ್ರಿಯತೆಯಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ (AQI) 'ಉತ್ತಮ' ಅಥವಾ 'ಸಾಧಾರಣ' ಮಟ್ಟದಲ್ಲಿದೆ. PM2.5 ಮತ್ತು PM10 ಕಣಗಳ ಪ್ರಮಾಣ ತಗ್ಗಿ, ಉಸಿರಾಟಕ್ಕೆ ಶುದ್ಧ ವಾತಾವರಣವಿದೆ. ಸಾರ್ವಜನಿಕರು ಮತ್ತು ಹಿರಿಯ ನಾಗರಿಕರಿಗೆ ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ. Karnataka AQI Good: Clean Air Returns to Bengaluru and State as Monsoons Clear Pollution ಮುಂಗಾರು ಮಳೆಯ ಸಕ್ರಿಯತೆಯಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ (AQI) 'ಉತ್ತಮ' ಅಥವಾ 'ಸಾಧಾರಣ' ಮಟ್ಟದಲ್ಲಿದೆ. PM2.5 ಮತ್ತು PM10 ಕಣಗಳ ಪ್ರಮಾಣ ತಗ್ಗಿ, ಉಸಿರಾಟಕ್ಕೆ ಶುದ್ಧ ವಾತಾವರಣವಿದೆ. ಸಾರ್ವಜನಿಕರು ಮತ್ತು ಹಿರಿಯ ನಾಗರಿಕರಿಗೆ ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ.

ಬೆಂಗಳೂರು, ಜು.23: ಮುಂಗಾರು ಮಳೆಯ ಸಕ್ರಿಯ ಸಂಚಾರ ಹಾಗೂ ವಾತಾವರಣದಲ್ಲಾದ ಬದಲಾವಣೆಗಳಿಂದಾಗಿ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇಂದಿನ (ಜುಲೈ 23) ವಾಯು ಗುಣಮಟ್ಟ ಸೂಚಿ (Air Quality Index – AQI) ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಶುದ್ಧತೆಯು ‘ಉತ್ತಮ’ ಹಾಗೂ ‘ಸಾಧಾರಣ’ ಮಟ್ಟದಲ್ಲಿ ದಾಖಲಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ವಾತಾವರಣವಿರುವುದರಿಂದ ಗಾಳಿಯಲ್ಲಿ ತೂಗಾಡುವ ಸೂಕ್ಷ್ಮ ಧೂಳಿನ ಕಣಗಳಾದ PM2.5 ಹಾಗೂ PM10 ಮಟ್ಟ ಗಣನೀಯವಾಗಿ ತಗ್ಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI 46 ರಿಂದ 56 ರಷ್ಟಿದ್ದು, ಉಸಿರಾಟಕ್ಕೆ ಸೂಕ್ತವಾದ ಶುದ್ಧ ವಾತಾವರಣ ಕಂಡುಬಂದಿದೆ.
ಸ್ತುತ ವಾಯು ಗುಣಮಟ್ಟದ ಆಧಾರದ ಮೇಲೆ, ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಹೊರಾಂಗಣ ಸಂಚಾರ ಮತ್ತು ವಾಯುವಿಹಾರಕ್ಕೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಮಳೆ ಮತ್ತು ಸಮುದ್ರ ಗಾಳಿಯ ಕಾರಣದಿಂದ ವಾಯು ಗುಣಮಟ್ಟವು ಉತ್ತಮವಾಗಿದ್ದು, ಆರೋಗ್ಯಕ್ಕೆ ಸುರಕ್ಷಿತವಾಗಿದೆ. ಉಡುಪಿಯಲ್ಲಿ ಗಾಳಿಯಲ್ಲಿ ಕಲಿಲು ಕಣಗಳ (PM2.5) ಪ್ರಮಾಣವು ಕಡಿಮೆಯಿದ್ದು, ವಾತಾವರಣವು ಸ್ವಚ್ಛ ಮತ್ತು ಆರೋಗ್ಯಕರವಾಗಿದೆ.
ಇದನ್ನೂ ಓದಿ: ಮತ್ತೆ ಮುಂಗಾರು ಚುರುಕು; ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ
ಇನ್ನು ಚಿಕ್ಕಮಗಳೂರು ಸೇರಿದಂತೆ ಸಮೃದ್ಧ ಅರಣ್ಯ ಮತ್ತು ಬೆಟ್ಟಗುಡ್ಡಗಳ ವಾತಾವರಣವಿರುವುದರಿಂದ ಮಲೆನಾಡು ಭಾಗದಲ್ಲಿ ವಾಯು ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿದೆ. ಬೆಳಗಾವಿಯಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾದ ಸ್ವಚ್ಛ ವಾತಾವರಣವಿದೆ. ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದ್ದು, ಗಾಳಿಯ ಗುಣಮಟ್ಟ ಉತ್ತಮವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




