AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್ ಊಟ-ತಿಂಡಿ ತಿನ್ನೋರಿಗೆ ಶಾಕ್! ತಿಂಡಿ-ತಿನಿಸು, ಕಾಫಿ-ಚಹಾ ದರ ಮತ್ತೆ ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 3,154 ರೂ.ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ದರ ಶೇ 20ರಷ್ಟು ಹೆಚ್ಚಳವಾಗಿದೆ. ಊಟ, ದೋಸೆ ಹಾಗೂ ಕಾಫಿ-ಟೀ ಬೆಲೆಗಳಲ್ಲಿ 5 ರಿಂದ 20 ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದ್ದು, ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೋಟೆಲ್ ಉದ್ಯಮಿಗಳು ತಿಳಿಸಿದ್ದಾರೆ.

ಹೋಟೆಲ್ ಊಟ-ತಿಂಡಿ ತಿನ್ನೋರಿಗೆ ಶಾಕ್! ತಿಂಡಿ-ತಿನಿಸು, ಕಾಫಿ-ಚಹಾ ದರ ಮತ್ತೆ ಏರಿಕೆ
ಸಾಂದರ್ಭಿಕ ಚಿತ್ರImage Credit source: tv9
Vinay Kashappanavar
| Edited By: |

Updated on: May 05, 2026 | 7:44 AM

Share

ಬೆಂಗಳೂರು, ಮೇ 5: ಬೆಂಗಳೂರಿನ (Bengauru) ಹೋಟೆಲ್ ಊಟ-ತಿಂಡಿ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಧ್ಯಪ್ರಾಚ್ಯ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ವಾಣಿಜ್ಯ ಎಲ್‌ಪಿಜಿ (Commercial LPG) ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಹೋಟೆಲ್ ಆಹಾರ ಪದಾರ್ಥಗಳ ಮೇಲೆ ಬೀರಿದೆ.

ಬೆಂಗಳೂರಿನಲ್ಲಿ ಸಿಲಿಂಡರ್ ದರ ಎಷ್ಟಿದೆ?

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ. ಏರಿಕೆಯಾಗಿದ್ದು, 19 ಕೆಜಿ ತೂಕದ ಸಿಲಿಂಡರ್ ದರ ಈಗ 3,154 ರೂ. ತಲುಪಿದೆ. ಇಂಧನ ಬೆಲೆಯ ಈ ಬೃಹತ್ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು, ಅನಿವಾರ್ಯವಾಗಿ ತಿಂಡಿ, ಊಟ ಹಾಗೂ ಕಾಫಿ-ಟೀ ದರಗಳನ್ನು ಶೇ. 20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ.

ಉದಾಹರಣೆಗೆ, ಬೆಂಗಳೂರಿನ ಗಾಂಧಿನಗರದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾದ ‘ರಸಪಾಕ’ದಲ್ಲಿ ಈಗಾಗಲೇ ದರ ಏರಿಕೆ ಜಾರಿಗೆ ಬಂದಿದೆ.

  • ಊಟ: 100 ರೂ. ನಿಂದ 120 ರೂ. ಗೆ ಏರಿಕೆ
  • ದೋಸೆ: 75 ರೂ. ನಿಂದ 85 ರೂ. ಗೆ ಏರಿಕೆ
  • ಪೂರಿ: 60 ರೂ. ನಿಂದ 75 ರೂ. ಗೆ ಏರಿಕೆ
  • ಟೀ: 20 ರೂ. ನಿಂದ 25 ರೂ. ಗೆ ಏರಿಕೆ

ಗ್ರಾಹಕರು ಮತ್ತು ಸಂಘದ ಪ್ರತಿಕ್ರಿಯೆ ಏನು?

ಕೆಲಸದ ನಿಮಿತ್ತ ಹೊರಗಡೆ ಬಂದಾಗ ಹೋಟೆಲ್ ಆಹಾರವೇ ನಮಗೆ ಆಧಾರ. ಹೀಗೆ ಪದೇ ಪದೇ ಬೆಲೆ ಏರಿಸುತ್ತಿದ್ದರೆ ಸಾಮಾನ್ಯ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬೀಳಲಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಬೆಲೆ ಏರಿಕೆ ಮಾಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಯುದ್ಧದ ಎಫೆಕ್ಟ್ ಈಗ ಬೆಂಗಳೂರಿಗರ ತಟ್ಟೆಯ ಮೇಲೆ ಪ್ರಭಾವ ಬೀರಿದೆ.

ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ