Bengaluru Traffic Asvisory: ಇಂದು, ನಾಳೆ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಬೆಂಗಳೂರು ಸಂಚಾರ ಸಲಹೆ: ಧಾರ್ಮಿಕ ಕಾರ್ಯಕ್ರಮಗಳ ಕಾರಣ ಬೆಂಗಳೂರಿನ ನಿರ್ದಿಷ್ಟ ಪ್ರದೇಶವೊಂದರಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸಂಚಾರ ಪೊಲೀಸರು ಸೂಚಿಸಿದ್ದಾರೆ. ವಾಹನ ನಿಲುಗಡೆ ಬಗ್ಗೆಯೂ ಟ್ರಾಫಿಕ್ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿದ ವಿವರ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 9: ಪುಲಕೇಶಿನಗರ (Pulikeshi Nagar) ಸಂಚಾರ ಪೊಲೀಸ್ (Bangalore Traffic Police) ಠಾಣಾ ವ್ಯಾಪ್ತಿಯ ಸೆಪ್ಪಿಂಗ್ಸ್ ರಸ್ತೆಯಲ್ಲಿರುವ ಮುತ್ಯಾಲಮ್ಮ ದೇವಿ ದೇವಸ್ಥಾನದ ವತಿಯಿಂದ ಮುತ ಮುತ್ಯಾಲಮ್ಮ ದೇವಿಯವರ ರಥೋತ್ಸವ (Muthyalamma Festival) ಮತ್ತು ದೇವರ ಪಲ್ಲಕ್ಕಿಗಳ ಉತ್ಸವದ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರದಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೂರ್ವ, ಉಪ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮೂಲಕ ಅವರು ವಿವರಗಳನ್ನು ಹಂಚಿಕೊಂಡಿದ್ದಾರೆ.
ಇಂದು (ಏಪ್ರಿಲ್ 9) ಬೆಳಗ್ಗೆ 11 ಗಂಟೆಯಿಂದ ಗುರುವಾರ ಮಧ್ಯಾಹ್ನ 2 ಗಂಟೆಯ ವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ.
ಯಾವೆಲ್ಲ ರಸ್ತೆಯಲ್ಲಿ ಸಂಚಾರ ನಿರ್ಬಂಧ?
- ಕೋಲ್ಡ್ ಪಾರ್ಕ್ ಜಂಕ್ಷನ್‌ನಿಂದ ಸೆಪ್ಪಿಂಗ್ ರಸ್ತೆ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. (ಎರಡೂ ದಿಕ್ಕಿನಲ್ಲೂ)
- ಸೆಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಯಿಂದ ನಾರಾಯಣ ಪಿಳ್ಳೆ ಸ್ಟ್ರೀಟ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. (ಎರಡೂ ದಿಕ್ಕಿನಲ್ಲೂ)
- ವಾರ್ ಮೆಮೋರಿಯಲ್ ಜಂಕ್ಷನ್ ಕಡೆಯಿಂದ ಸೆಂಟ್ ಜಾನ್ಸ್ ಚರ್ಚ್ ರಸ್ತೆ (ಹೇನ್ ಜಂಕ್ಷನ್ ವರೆಗೆ) ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಪರ್ಯಾಯ ಮಾರ್ಗ ವಿವರ
- ಕೋಲ್ಡ್ ಪಾರ್ಕ್ ಜಂಕ್ಷನ್ ಹಾಗೂ ನಾರಾಯಣ ಪಿಳ್ಳೆ ಸ್ಟ್ರೀಟ್ ಜಂಕ್ಷನ್‌ನಿಂದ ಸೆಪ್ಪಿಂಗ್ ರಸ್ತೆ ಮೂಲಕ ಶಿವಾಜಿನಗರ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಸೆಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿ ನೇರವಾಗಿ ಚಲಿಸಿ ಹೇನ್ಸ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಜುಮ್ಮಾ ಮಸೀದಿ ರಸ್ತೆ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ.
- ವಾರ್ ಮೆಮೋರಿಯಲ್ ಜಂಕ್ಷನ್ ನಿಂದ ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನ ಚಾಲಕರು/ಸವಾರರು ವಾರ್ ಮೆಮೋರಿಯಲ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಅಸ್ಸಯೇ ರಸ್ತೆಯಲ್ಲಿ ನೇರವಾಗಿ ಚಲಿಸಿ ಸಿಂಧಿ ಕಾಲೋನಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕೋಲ್ಡ್ ರಸ್ತೆಯಲ್ಲಿ ಬಲತಿರುವು ಪಡೆದು ಕೋಲ್ಸ್ ರಸ್ತೆಯಲ್ಲಿ ನೇರವಾಗಿ ಚಲಿಸಿ ಹೇನ್ಸ್ ರಸ್ತೆಯಲ್ಲಿ ಎಡತಿರುವು ಪಡೆದು ಹೇನ್ಸ್ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಪಾರ್ಕಿಂಗ್ ನಿಷೇಧ ಎಲ್ಲೆಲ್ಲಿ?
- ನಾರಾಯಣ ಪಿಳ್ಳೆ ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ನಾಲಾ ರಸ್ತೆ. ತಿಮ್ಮಯ್ಯ ರಸ್ತೆ, ಹೇನ್ಸ್ ರಸ್ತೆ, ಎ.ಎಂ.ರಸ್ತೆ ಹಾಗೂ ಸೆಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧ ಮಾಡಲಾಗಿರುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 am, Wed, 9 April 25