
ಬೆಂಗಳೂರು, ಫೆಬ್ರವರಿ 08: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 46% ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ ಮಾಡಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಿದೆ. ಈ ಕುರಿತಾಗಿ ಬಿಎಂಆರ್ಸಿಎಲ್ ಅಧಿಕೃತ ಆದೇಶ ಹೊರಡಿಸಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದಲೇ ಪರಿಷ್ಕೃತ ದರ ಜಾರಿ ಆಗಲಿದೆ.
ಮೆಟ್ರೋ ರೈಲ್ವೆ 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ, ಕೇಂದ್ರ ಸರ್ಕಾರ 2024 ಅಕ್ಟೋಬರ್ 7ರಂದು ಹೈಕೋರ್ಟ್ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಗಿತ್ತು. ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ಡಿಸೆಂಬರ್ 16ರಂದು ಸಲ್ಲಿಸಲಾಗಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ನಲ್ಲಿ ದುಪ್ಪಟ್ಟು ಹಣ ವಸೂಲಿ, ಎಲ್ಲಿ ಹೆಚ್ಚಾಗಿದೆ ಇಲ್ಲಿದೆ ಮಾಹಿತಿ
ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 37ರ ಕಾಯ್ದೆ ಪ್ರಕಾರ ದರ ಪರಿಷ್ಕರಣೆ ಸಮಿತಿಯು ಮಾಡಿದ ಶಿಫಾರಸುಗಳು ಮೆಟ್ರೋ ರೈಲ್ವೆ ಆಡಳಿತದ ಮೇಲೆ ಬದ್ಧವಾಗಿದೆ. ಅದರಂತೆ, ಬಿಎಂಆರ್ಸಿಎಲ್ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ, ಪರಿಷ್ಕೃತ ದರ ನಾಳೆ ಜಾರಿಗೆ ಬರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಪರಿಷ್ಕೃತ ದರ ಹೀಗಿದೆ
ಸ್ಮಾರ್ಟ್ ಕಾರ್ಡ್ನ ಮೇಲೆ 5 ರೂ. ರಿಯಾಯ್ತಿ ಮುಂದುವರಿಕೆ ಆಗಿದೆ. ಸ್ಮಾರ್ಟ್ ಕಾರ್ಡ್ನಲ್ಲಿ 50 ರೂ. ಮಿನಿಮಮ್ ಹಣ ಇರಬೇಕಿತ್ತು. ಆದರೆ ಈಗ ಮಿನಿಮಮ್ 90 ರೂ. ಇರಲೇಬೇಕು. ಆ ಮೂಲಕ 40 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಆಫ್-ಪೀಕ್ ಸಮಯದಲ್ಲಿ ಪ್ರಯಾಣಕ್ಕಾಗಿ ಮೆಟ್ರೋ ವ್ಯವಸ್ಥೆಗೆ ಪ್ರವೇಶಿಸುವ ಸಮಯವನ್ನು ಆಧರಿಸಿ, ಪೀಕ್ ಸಮಯದಲ್ಲಿ ಪ್ರಯಾಣಿಕರಿಗೆ 5+5 ಶೇ.10ರಷ್ಟು ರಿಯಾಯ್ತಿ ನೀಡಲಾಗಿದೆ. ಒಟ್ಟು ಶೇ 10 ರಿಯಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು
ಆಫ್-ಪೀಕ್ ಸಮಯ: ವಾರದ ದಿನಗಳಲ್ಲಿ, ಬೆಳಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ 12 ಗಂಟೆಯಿಂದ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರೆಗೆ. ಎಲ್ಲಾ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗ ಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 02) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Sat, 8 February 25