AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಿಂದೆ ತುಮಕೂರಿನಲ್ಲಿ ಯಡಿಯೂರಪ್ಪ ಕೊಟ್ಟಿದ್ದ ಕವರ್ ಕಾಣಿಕೆಯನ್ನ ತಿರಸ್ಕರಿಸಿದ್ದೆ: ಜಯ ಮೃತ್ಯುಂಜಯ ಸ್ವಾಮೀಜಿ

ಒಬ್ಬರ ಪರವಾಗಿ ಸ್ವಾಮೀಜಿಗಳು ಬ್ಯಾಟ್ ಬೀಸಿದ್ದು ಪ್ರಜಾಪ್ರಭುತ್ವದಲ್ಲಿ ಮಾರಕ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯ ಮೃತ್ಯುಂಜಯ ಸ್ವಾಮೀಜಿ, ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸಿರಿಗೆರೆ ಶ್ರೀಗಳು ಮಠಕ್ಕೆ ಕರೆದು ಸಲಹೆಗಳನ್ನು ಕೊಡುತ್ತಿದ್ದರು.

ಈ ಹಿಂದೆ ತುಮಕೂರಿನಲ್ಲಿ ಯಡಿಯೂರಪ್ಪ ಕೊಟ್ಟಿದ್ದ ಕವರ್ ಕಾಣಿಕೆಯನ್ನ ತಿರಸ್ಕರಿಸಿದ್ದೆ: ಜಯ ಮೃತ್ಯುಂಜಯ ಸ್ವಾಮೀಜಿ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ
TV9 Web
| Updated By: sandhya thejappa|

Updated on: Jul 24, 2021 | 2:23 PM

Share

ಬೆಂಗಳೂರು: ಮುಖ್ಯಮಂತ್ರಿ ನಿವಾಸದಲ್ಲಿ ಮಠಾಧೀಶರು ಕವರ್ ಪಡೆದ ವಿಚಾರಕ್ಕೆ ಸಂಬಂಧಿಸಿ ಕವರ್ನಲ್ಲಿ ಏನಿತ್ತೆಂದು ಗೊತ್ತಿಲ್ಲ ಅಂತ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪುರಾಣ ಪುಸ್ತಕವಿತ್ತೋ, ವಚನ ಪುಸ್ತಕವಿತ್ತೋ ಗೊತ್ತಿಲ್ಲವೆಂದು ಹೇಳಿಕೆ ನೀಡಿದ ಸ್ವಾಮೀಜಿ, ಈ ಹಿಂದೆ ತುಮಕೂರಿನಲ್ಲಿ ಯಡಿಯೂರಪ್ಪ ಕೊಟ್ಟಿದ್ದ ಕಾಣಿಕೆ ತಿರಸ್ಕರಿಸಿದ್ದೆ. ಈಗ ಸ್ವಾಮೀಜಿಗಳಿಗೆ ಕೊಟ್ಟಿದ್ದ ಕವರ್ ಬಗ್ಗೆ ನನಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.

ಒಬ್ಬರ ಪರವಾಗಿ ಸ್ವಾಮೀಜಿಗಳು ಬ್ಯಾಟ್ ಬೀಸಿದ್ದು ಪ್ರಜಾಪ್ರಭುತ್ವದಲ್ಲಿ ಮಾರಕ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯ ಮೃತ್ಯುಂಜಯ ಸ್ವಾಮೀಜಿ, ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸಿರಿಗೆರೆ ಶ್ರೀಗಳು ಮಠಕ್ಕೆ ಕರೆದು ಸಲಹೆಗಳನ್ನು ಕೊಡುತ್ತಿದ್ದರು. ಆ ರೀತಿ ನಮ್ಮಲ್ಲಿ ಬಂದರೆ ಸಲಹೆ ಕೊಡುತ್ತೇನೆ. ಆದರೆ ನಾನು ಒಬ್ಬರ ಪರವಾಗಿ ಈ ರೀತಿ ಹೋಗೋದಿಲ್ಲ ಅಂತಾ ಹೇಳಿದರು.

ಮಠಾಧೀಶರಿಗೆ ಸಿಎಂ ಬದಲು ಮಾಡುವ ಶಕ್ತಿ ಇಲ್ಲ. ಅದನ್ನ ದೇಶದ ಪ್ರಧಾನಿ ನಿರ್ಣಯಿಸುತ್ತಾರೆ. ಅದನ್ನ ನಾವೆಲ್ಲರು ಸ್ವಾಗತಿಸಬೇಕು ಅಂತಾ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ

ಪಂಚಮಸಾಲಿ ಸಮುದಾಯದ 17 ಶಾಸಕರು ಇದ್ದಾರೆ; ಪಂಚಮಸಾಲಿಯವರಿಗೇ ಸಿಎಂ ಸ್ಥಾನ ಕೊಡಬೇಕು: ಬಸವಜಯ ಮೃತ್ಯುಂಜಯಶ್ರೀ

ಯಡಿಯೂರಪ್ಪರನ್ನು ಬದಲಾವಣೆ ಮಾಡಿದ್ರೆ ಕೋಟಾ ಶ್ರೀನಿವಾಸ ಪೂಜಾರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು: ಪ್ರಣವಾನಂದ ಸ್ವಾಮೀಜಿ ಒತ್ತಾಯ

(Basava Jaya mruthunjaya says that i rejected the cover offered by BS Yediyurappa in Tumkur)