ಹೊಸ ವರ್ಷದ ಹೆಸರಲ್ಲಿ ಬಿಬಿಎಂಪಿ ದುಂದುವೆಚ್ಚ: ಬ್ಯಾರಿಕೇಡ್, ಲೈಟಿಂಗ್​​ಗೆ ಬರೋಬ್ಬರಿ 25 ಲಕ್ಷ ಬಿಲ್!

ಎಂಜಿ ರಸ್ತೆ, ಇಂದಿರಾನಗರದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿಸೋದು, ಪೆಂಡಾಲ್ ಹಾಕೋದು, ಟೇಬಲ್, ಕುರ್ಚಿ ಹಾಕೋ ಜವಾಬ್ದಾರಿಯನ್ನ ಪಾಲಿಕೆಗೆ ನೀಡಿತ್ತು. ಜೊತೆಗೆ ಹೆಚ್ಚುವರಿಯಾಗಿ ಬ್ಯಾರಿಕೇಡ್, ಲೈಟ್ ಬೇಕು ಅಂತಾ ಸೂಚಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಪಾಲಿಕೆ ಬರೋಬ್ಬರಿ 25ಲಕ್ಷ ರೂಪಾಯಿ ಲೆಕ್ಕ ತೋರಿಸಿದೆ.

ಹೊಸ ವರ್ಷದ ಹೆಸರಲ್ಲಿ ಬಿಬಿಎಂಪಿ ದುಂದುವೆಚ್ಚ: ಬ್ಯಾರಿಕೇಡ್, ಲೈಟಿಂಗ್​​ಗೆ ಬರೋಬ್ಬರಿ 25 ಲಕ್ಷ ಬಿಲ್!
ಹೊಸ ವರ್ಷದ ಹೆಸರಲ್ಲಿ ಬಿಬಿಎಂಪಿ ದುಂದುವೆಚ್ಚ: ಬ್ಯಾರಿಕೇಡ್, ಲೈಟಿಂಗ್​​ಗೆ ಬರೋಬ್ಬರಿ 25 ಲಕ್ಷ ಬಿಲ್!
Follow us
TV9 Web
| Updated By: Ganapathi Sharma

Updated on: Jan 02, 2024 | 6:52 AM

ಬೆಂಗಳೂರು, ಜನವರಿ 2: 2023 ಕಳೆದು ಹೊಸ ವರ್ಷ (New Year) ಆರಂಭವಾದದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕೆಲ ಅಧಿಕಾರಿಗಳು ಮಾತ್ರ ಹಳೇ ಚಾಳಿ ಬಿಟ್ಟಂತೆ ಕಾಣಿಸುತ್ತಿಲ್ಲ. ಒಂದೆಡೆ ಡಿಸೆಂಬರ್ 31ರ ರಾತ್ರಿ ಭರ್ಜರಿಯಾಗಿ ನ್ಯೂ ಇಯರ್ ವೆಲ್ ಕಮ್ ಮಾಡೋ ಮೂಲಕ ಬೆಂಗಳೂರು (Bengaluru) ಗಮನ ಸೆಳೆದರೆ, ಅತ್ತ ನೂತನ ವರ್ಷಾಚಚರಣೆಯಲ್ಲೂ ಪಾಲಿಕೆ ಅಧಿಕಾರಿಗಳು ಬಿಲ್ ಗೋಲ್ ಮಾಲ್ ಮಾಡಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.

ಡಿಸೆಂಬರ್ 31ರ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರದಲ್ಲಿ ನ್ಯೂ ಇಯರ್ ಆಚರಣೆ ಸಂಭ್ರಮದಿಂದ ನಡೆದಿದೆ. ಅದ್ರೆ ಈ ಆಚರಣೆಗೆ ಪಾಲಿಕೆ ಖರ್ಚು ಮಾಡಿರೋ ಹಣ ಕೇಳಿದ್ರೆ ಶಾಕ್ ಆಗಬೇಕು! ಬರೀ ಒಂದೇ ಒಂದು ರಾತ್ರಿಗೆ ಬ್ಯಾರಿಕೇಡ್, ಲೈಟಿಂಗ್ಸ್​​​ಗೆ ಪಾಲಿಕೆ ಬರೋಬ್ಬರಿ 25 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದು, ಪಾಲಿಕೆ ಅಧಿಕಾರಿಗಳು ಎಷ್ಟರಮಟ್ಟಿಗೆ ತೆರಿಗೆ ಹಣ ಪೋಲು ಮಾಡಿದ್ದಾರೆ ಅನ್ನೋದನ್ನು ಅನಾವರಣಮಾಡಿದೆ

ಹೊಸ ವರ್ಷಾಚರಣೆಗೆ ನಗರದಲ್ಲಿ ಪೊಲೀಸ್ ಇಲಾಖೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿತ್ತು. ಇತ್ತ ಎಂಜಿ ರಸ್ತೆ, ಇಂದಿರಾನಗರದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿಸೋದು, ಪೆಂಡಾಲ್ ಹಾಕೋದು, ಟೇಬಲ್, ಕುರ್ಚಿ ಹಾಕೋ ಜವಾಬ್ದಾರಿಯನ್ನ ಪಾಲಿಕೆಗೆ ನೀಡಿತ್ತು. ಜೊತೆಗೆ ಹೆಚ್ಚುವರಿಯಾಗಿ ಬ್ಯಾರಿಕೇಡ್, ಲೈಟ್ ಬೇಕು ಅಂತಾ ಸೂಚಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಪಾಲಿಕೆ ಬರೋಬ್ಬರಿ 25ಲಕ್ಷ ರೂಪಾಯಿ ಲೆಕ್ಕ ತೋರಿಸಿದೆ. ಕೋಳಿಗಿಂತ ಮಸಾಲೆ ರೇಟ್ ಜಾಸ್ತಿಯಾಯ್ತು ಅನ್ನೋ ಹಾಗೇ ಆಗಿದೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್​​ರನ್ನ ಕೇಳಿದ್ರೆ, ಝೋನಲ್ ಕಮಿಷನರ್​​ಗೆ ಅವಕಾಶ ನೀಡಿದ್ವಿ, ಅಷ್ಟು ಖರ್ಚು ಆಗಿರಬಹುದು ಎಂದಿದ್ದಾರೆ.

ಇದನ್ನೂ ಓದಿ: ಮಾಲ್​ ಆಫ್​ ಏಷ್ಯಾಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ: ಪೊಲೀಸ್ ಕಮಿಷನರ್ ಬಿ ದಯಾನಂದ ಭೇಟಿ

ಒಟ್ಟಿನಲ್ಲಿ ಹೊಸ ವರ್ಷಾಚರಣೆಯಲ್ಲೂ ಪಾಲಿಕೆಯು ಜನರ ತೆರಿಗೆ ಹಣವನ್ನು ಪೋಲು ಮಾಡಿದೆಯಾ ಅನ್ನೋ ಅನುಮಾನ ಉಂಟಾಗಿದೆ. ಜತೆಗೆ, ಪಾಲಿಕೆಯ ದುದುವೆಚ್ಚಗಳಿಗೆ ಯಾವಾಗ ಬ್ರೇಕ್ ಬೀಳುತ್ತೆ ಅಂತಾ ಜನ ಪ್ರಶ್ನಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?