ಮದುವೆಯಾಗಿದ್ದರೂ ಮತ್ತೊಬ್ಬ ವಿವಾಹಿತೆ ಮೇಲೆ ಲವ್​: ಮಹಿಳೆ ಇರಿದು ಕೊಂದವ ಜೈಲು ಪಾಲು

ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ವಿವಾಹಿತೆ ಮಹಿಳೆ ಹತ್ಯೆ ಪ್ರಕರಣ ಸಂಬಂಧ ಆರೋಪಿಯ ಬಂಧನವಾಗಿದೆ. ಮದುವೆಯಾಗಿದ್ದರೂ ಮತ್ತೊಬ್ಬ ವಿವಾಹಿತೆ ಜೊತೆ ಸಂಬಂಧ ಹೊಂದಿದ್ದಆರೋಪಿ, ಆಕೆಯ ಸಂಪರ್ಕ ಕಡಿತವಾದ ಕಾರಣ ಮಹಿಳೆಯನ್ನು ಇರಿದು ಕೊಲೆ ಮಾಡಿದ್ದಾನೆ. ಇಬ್ಬರ ಸಂಪರ್ಕ ಸಂಬಂಧ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ರಾಜಿ ಮಾಡಿಕೊಂಡಿದ್ದರೂ, ಮಹಿಳೆಯನ್ನು ಆತ ಭೀಕರವಾಗಿ ಹತ್ಯೆ ಮಾಡಿರೋದು ಗೊತ್ತಾಗಿದೆ. ಚಂದ್ರಾಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮದುವೆಯಾಗಿದ್ದರೂ ಮತ್ತೊಬ್ಬ ವಿವಾಹಿತೆ ಮೇಲೆ ಲವ್​: ಮಹಿಳೆ ಇರಿದು ಕೊಂದವ ಜೈಲು ಪಾಲು
ಕೊಲೆ ಆರೋಪಿ ಬಂಧನ
Image Credit source: Tv9 Kannada
Edited By:

Updated on: Mar 20, 2026 | 1:44 PM

ಬೆಂಗಳೂರು, ಮಾರ್ಚ್​​ 20: ಗಂಗೊಂಡನಹಳ್ಳಿಯಲ್ಲಿ ಇಬ್ಬರು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕನೋರ್ವ ಆಕೆಯನ್ನು ಡ್ಯಾಗರ್​ನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿ ಹಫೀಜ್​​ನ ಚಂದ್ರಾಲೇಔಟ್​ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಫೀರ್ದೋಸ್ ಬಾನು ಎಂಬಾಕೆಯನ್ನು ಈತ ಹತ್ಯೆಗೈದಿದ್ದು, ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಫೀಜ್ನ ಅರೆಸ್ಟ್​​ ಮಾಡಲಾಗಿದೆ.  ಮಹಿಳೆ ಆರೋಪಿಯನ್ನು ದೂರ ಮಾಡಿದ್ದೇ ಕೊಲೆಗೆ ಕಾರಣವಾಗಿದ್ದು, ಫೀರ್ದೋಸ್ ಬಾನುಗೆ ಆರೋಪಿ ಹಫೀಜ್ ಜತೆ ಸಂಪರ್ಕ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಮೃತ ಫೀರ್ದೋಸ್ ಬಾನು ಮತ್ತು ಆರೋಪಿ ಹಫೀಜ್ ಇಬ್ಬರು ಚೆನ್ನಾಗಿಯೇ ಇದ್ದರು. ಈ ವಿಚಾರ ಮಹಿಳೆ ಕುಟುಂಬಕ್ಕೂ ಗೊತ್ತಿತ್ತು. ಈ ನಡುವೆ ಫೀರ್ದೋಸ್​ಗೆ ಕುಟುಂಬದವರು ಬುದ್ಧಿವಾದ ಹೇಳಿದ್ದರು. ಆ ಬಳಿಕ ಫೆ.28ರಂದು ಮಹಿಳೆ ಜತೆ ಹಫೀಜ್ ಗಲಾಟೆ ಮಾಡಿದ್ದ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸರಿಗೆ ಫೀರ್ದೋಸ್ ಬಾನು ಕುಟುಂಬ ದೂರು ನೀಡಿತ್ತು. ಪ್ರಕರಣ ಸಂಬಂಧ ಆರೋಪಿ ಹಫೀಜ್​ನನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಲಾಗಿತ್ತು. ಜೊತೆಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡಿಕೊಂಡಿದ್ದರು. ಕೇಸ್ ಬೇಡ ಮುಚ್ಚಳಿಕೆ ಬರೆಸಿಕೊಡಿ ಎರಡೂ ಕಡೆಯವರು ಎಂದಿದ್ದರು. ಆದರೆ ನಿನ್ನೆ ಸಂಜೆ ಮನೆಗೆ ತೆರಳುವ ದಾರಿಯಲ್ಲಿ ಫೀರ್ದೋಸ್​​ನ ಹಫೀಜ್​​ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಬಂಧಿಸಿರುವ ಚಂದ್ರಾಲೇಔಟ್ ಠಾಣೆಯ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ; ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತೆ ಬಲಿ

ಇನ್ನು ಪ್ರಕರಣ ಮಾಹಿತಿ ನೀಡಿರುವ ಪಶ್ಚಿಮ ವಲಯ ಡಿಸಿಪಿ ಯತೀಶ್, ಆರೋಪಿ ಹಫೀಜ್​ ಮತ್ತು ಕೊಲೆಯಾಗಿರುವ ಫಿರ್ದೋಸ್ ಬಾನು ಇಬ್ಬರಿಗೂ ಪ್ರತ್ಯೇಕ ಮದುವೆಯಾಗಿ ಮಕ್ಕಳಿದ್ದಾರೆ. ಆರೋಪಿ ಯಾವುದೇ ‌ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಹಿಳೆ ನಿನ್ನೆ ಕೆಲಸಕ್ಕೆ ಹೋಗಿ ಬರುವಾಗ ಹಿಂಬಾಲಿಸಿಕೊಂಡು ಬಂದಿದ್ದ ಆತ, ಸುಮಾರು ಆರೇಳು ಬಾರಿ ಚಾಕುವಿನಿಂದ ಇರಿದ್ದಿದ್ದಾನೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us