AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್​ನಲ್ಲಿ ಬರುವ APK ಲಿಂಕ್ ಮೇಲೆ ಕ್ಲಿಕ್ ಮಾಡುವ ಮುನ್ನ ಎಚ್ಚರ! ಕ್ಷಣಾರ್ಧದಲ್ಲಿ ನಿಮ್ಮ ಅಕೌಂಟ್ ಖಾಲಿ ಮಾಡ್ತಾರೆ ಕದೀಮರು

ವಾಟ್ಸಾಪ್‌ಗೆ ಬಂದ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆಯ ನಕಲಿ ಎಪಿಕೆ (.APK) ಲಿಂಕ್ ಕ್ಲಿಕ್ ಮಾಡಿದ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಕೇವಲ ಅರ್ಧ ಗಂಟೆಯಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸ್ನೇಹಿತನ ಅಕೌಂಟ್ ಹ್ಯಾಕ್ ಮಾಡಿ ವಂಚಕರು ನಡೆಸಿದ ಈ ಡಿಜಿಟಲ್ ದರೋಡೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ವಾಟ್ಸಾಪ್​ನಲ್ಲಿ ಬರುವ APK ಲಿಂಕ್ ಮೇಲೆ ಕ್ಲಿಕ್ ಮಾಡುವ ಮುನ್ನ ಎಚ್ಚರ! ಕ್ಷಣಾರ್ಧದಲ್ಲಿ ನಿಮ್ಮ ಅಕೌಂಟ್ ಖಾಲಿ ಮಾಡ್ತಾರೆ ಕದೀಮರು
ಸಾಂದರ್ಭಿಕ ಚಿತ್ರ Image Credit source: gettyimages.com
ಭಾವನಾ ಹೆಗಡೆ
|

Updated on: Jul 20, 2026 | 12:18 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಆಮಂತ್ರಣ ಪತ್ರಿಕೆಯ ಲಿಂಕ್ ಕ್ಲಿಕ್ ಮಾಡಿ ಹತ್ತು ಲಕ್ಷ ಕಳೆದುಕೊಂಡಿದ್ದಾರೆ.
  • ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಬಲಿಯಾಗಿದ್ದಾರೆ.
  • ವಾಟ್ಸಾಪ್ ಮೂಲಕ ಬಂದ ಎಪಿಕೆ ಫೈಲ್ ಕ್ಲಿಕ್ ಮಾಡದಂತೆ ಪೊಲೀಸರ ಎಚ್ಚರಿಕೆ.

ಬೆಂಗಳೂರು, ಜುಲೈ 20: ನಿಮ್ಮ ವಾಟ್ಸಾಪ್‌ಗೆ ಸ್ನೇಹಿತರಿಂದ ಅಥವಾ ಆತ್ಮೀಯರಿಂದ ಮದುವೆ ಇಲ್ಲವೇ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆಯ ಲಿಂಕ್ ಅಥವಾ ಫೈಲ್ ಬಂದಿದೆಯೇ? ಹಾಗಿದ್ದರೆ ಅದನ್ನು ಓಪನ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ, ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಕೇವಲ ಒಂದು ಕ್ಲಿಕ್‌ನಿಂದಾಗಿ ಬರೋಬ್ಬರಿ 10 ಲಕ್ಷ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ.

ನಡೆದಿದ್ದೇನು?

ಯಶವಂತಪುರ ನಿವಾಸಿಯಾದ, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ (DRFO) ರಮೇಶ್ ಬಾಬು ಬಿ. ಅವರಿಗೆ ಜುಲೈ 13 ರಂದು ವಾಟ್ಸಾಪ್‌ನಲ್ಲಿ ಅವರ ಸ್ನೇಹಿತರೊಬ್ಬರ ನಂಬರ್‌ನಿಂದ ಮೆಸೇಜ್ ಬಂದಿತ್ತು. ಅದರಲ್ಲಿ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಎಂದು ಬರೆದು ಕೆಳಗೆ ಒಂದು ‘.APK’ ಫೈಲ್ ಕಳುಹಿಸಲಾಗಿತ್ತು. ಕಳುಹಿಸಿದ್ದು ಸ್ವತಃ ಸ್ನೇಹಿತನೇ ಆಗಿದ್ದರಿಂದ, ಯಾವುದೇ ಅನುಮಾನವಿಲ್ಲದೆ ರಮೇಶ್ ಅವರು ಜುಲೈ 14 ರ ಮಧ್ಯಾಹ್ನ ಆ ಫೈಲ್ ಮೇಲೆ ಕ್ಲಿಕ್ ಮಾಡಿದ್ದಾರೆ.

ಅರ್ಧ ಗಂಟೆಯಲ್ಲೇ ಬ್ಯಾಂಕ್ ಅಕೌಂಟ್ ಖಾಲಿ!

ಕ್ಲಿಕ್ ಮಾಡಿದ ಕೇವಲ 30 ನಿಮಿಷಗಳ ಒಳಗೆ ಅವರ ಬ್ಯಾಂಕ್ ಖಾತೆಯಿಂದ ಸರಣಿ ಹಣ ವರ್ಗಾವಣೆಯ ಮೆಸೇಜ್‌ಗಳು ಬರಲಾರಂಭಿಸಿದವು. ಆರಂಭದಲ್ಲಿ ಅವು ಜಾಹೀರಾತು ಮೆಸೇಜ್ ಇರಬಹುದೆಂದು ನಿರ್ಲಕ್ಷಿಸಿದ ಅಧಿಕಾರಿ, ನಂತರ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಶಾಕ್ ಕಾದಿತ್ತು. ಕೇವಲ 7 ಟ್ರಾನ್ಸಾಕ್ಷನ್‌ಗಳಲ್ಲಿ ಬರೋಬ್ಬರಿ 9,96,659 ರೂಪಾಯಿ ಅವರ ಅಕೌಂಟ್‌ನಿಂದ ಮಾಯವಾಗಿತ್ತು.

ಹಣ ದೋಚಿದ ತಕ್ಷಣ ವಂಚಕರು ಹ್ಯಾಕ್ ಆಗಿದ್ದ ಆಪ್ ಮೂಲಕ ಫೋನಿನಲ್ಲಿದ್ದ ಎಪಿಕೆ ಫೈಲ್‌ಗಳನ್ನೆಲ್ಲಾ ಡಿಲೀಟ್ ಮಾಡಿ ಸಾಕ್ಷಿ ನಾಶಪಡಿಸಿದ್ದರು. ನಂತರ ವಿಚಾರಿಸಿದಾಗ ತಿಳಿದುಬಂದಿದ್ದೇನೆಂದರೆ, ಅವರ ಸ್ನೇಹಿತನ ವಾಟ್ಸಾಪ್ ಅಕೌಂಟ್ ಹ್ಯಾಕ್ ಆಗಿತ್ತು ಮತ್ತು ಅದೇ ನಂಬರ್‌ನಿಂದ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿದ್ದ ಕನಿಷ್ಠ 10 ಕ್ಕೂ ಹೆಚ್ಚು ಜನರಿಗೆ ಇಂತಹದೇ ಲಿಂಕ್ ಕಳುಹಿಸಲಾಗಿತ್ತು. ಪ್ರಸ್ತುತ ಈ ಬಗ್ಗೆ ಈಶಾನ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಚ್ಚಿದ ‘APK’ ವಂಚನೆ: ನೀವೇನು ಮಾಡಬೇಕು?

ವಾಟ್ಸಾಪ್, ಎಸ್‌ಎಂಎಸ್ ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಯಾವುದೇ ಆಮಂತ್ರಣ ಪತ್ರಿಕೆ, ಉದ್ಯೋಗದ ಆಫರ್ ಹೆಸರಿನ ‘.APK’ ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬೇಡಿ ಅಥವಾ ಕ್ಲಿಕ್ ಮಾಡಬೇಡಿ. ನಿಮ್ಮ ಆಪ್ತರು ಅಥವಾ ಸ್ನೇಹಿತರೇ ಇಂತಹ ಫೈಲ್ ಕಳುಹಿಸಿದ್ದರೂ, ಮೊದಲು ಅವರಿಗೆ ಫೋನ್ ಮಾಡಿ ನೀವೇ ಕಳುಹಿಸಿದ್ದೀರಾ? ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಅವರ ಅಕೌಂಟ್ ಹ್ಯಾಕ್ ಆಗಿರುವ ಸಾಧ್ಯತೆ ಇರುತ್ತದೆ.

ಬ್ಯಾಂಕ್‌ನಿಂದ ಬರುವ ಯಾವುದೇ ಒಟಿಪಿ (OTP) ಅಥವಾ ಡೆಬಿಟ್ ಮೆಸೇಜ್‌ಗಳನ್ನು ತಕ್ಷಣವೇ ಗಮನಿಸಿ. ಒಂದು ವೇಳೆ ನೀವೇನಾದರೂ ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ ಸೈಬರ್ ಹೆಲ್ಪ್‌ಲೈನ್ ನಂಬರ್ 1930ಗೆ ಕರೆ ಮಾಡಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ