AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3,500 ರೂಪಾಯಿಗೆ ಮನೆಗೆಲಸದವರು ಬೇಕಂತೆ! ಬೆಂಗಳೂರು ಹೆಚ್.ಆರ್ ಕನ್ಸಲ್ಟೆಂಟ್‌ಗೆ ಸರಿಯಾಗಿ ಚಳಿ ಬಿಡಿಸಿದ ನೆಟ್ಟಿಗರು

ಬೆಂಗಳೂರಿನ ಫ್ರೀಲ್ಯಾನ್ಸ್ HR ಸಲಹೆಗಾರರೊಬ್ಬರು ಮನೆಗೆಲಸದವರಿಗೆ ಕೇವಲ 3,500 ರೂ. ಸಂಬಳ ನೀಡುವುದಾಗಿ ಹೇಳಿ ವಿವಾದಕ್ಕೆ ಸಿಲುಕಿದ್ದಾರೆ. ಇದನ್ನು ಟಿಯರ್ 3 ಎಂಜಿನಿಯರಿಂಗ್ ಪದವೀಧರರ ಸಂಬಳಕ್ಕೆ ಹೋಲಿಸಿ, "ರೇಟ್ ಕಂಟ್ರೋಲ್" ಮಾಡುವಂತೆ ಕರೆ ನೀಡಿದ್ದಾರೆ. ಈ ಅಮಾನವೀಯ ಹೇಳಿಕೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ನಡೆಯನ್ನು ಖಂಡಿಸಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

3,500 ರೂಪಾಯಿಗೆ ಮನೆಗೆಲಸದವರು ಬೇಕಂತೆ! ಬೆಂಗಳೂರು ಹೆಚ್.ಆರ್ ಕನ್ಸಲ್ಟೆಂಟ್‌ಗೆ ಸರಿಯಾಗಿ ಚಳಿ ಬಿಡಿಸಿದ ನೆಟ್ಟಿಗರು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:May 15, 2026 | 12:53 PM

Share

ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಫ್ರೀಲ್ಯಾನ್ಸ್ ಹೆಚ್.ಆರ್ ಕನ್ಸಲ್ಟೆಂಟ್ ಒಬ್ಬರು ಮನೆಗೆಲಸದವರ ಸಂಬಳದ ಬಗ್ಗೆ ನೀಡಿದ “ಅಮಾನವೀಯ” ಹೇಳಿಕೆಯೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮನೆಗೆಲಸದವರಿಗೆ ನೀಡುವ ಸಂಬಳವನ್ನು “ಎಂಜಿನಿಯರಿಂಗ್ ಪದವೀಧರರ” ಸಂಬಳಕ್ಕೆ ಹೋಲಿಸಿದ ಇವರ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ತಮ್ಮ ವಸತಿ ಸಮುಚ್ಚಯದ (Apartment) ಆ್ಯಪ್‌ನಲ್ಲಿ ಪೋಸ್ಟ್ ಹಾಕಿದ್ದ ಈ ವ್ಯಕ್ತಿ, ಬೆಳಿಗ್ಗೆ ಮತ್ತು ಸಂಜೆ ಕೆಲಸಕ್ಕೆ ಬರಲು ಮನೆಗೆಲಸದವರು ಬೇಕಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ, ಎರಡು ಬಾರಿ ಕೆಲಸಕ್ಕೆ ಬರುವವರಿಗೆ ತಾವು ಕೇವಲ 3,500 ರೂ. ನೀಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ, “ಒಂದು ಹೊತ್ತಿನ ಕೆಲಸಕ್ಕೆ 3,500 ರೂ. ಕೇಳುವವರನ್ನು ನನ್ನ ಬಳಿ ಕಳುಹಿಸಬೇಡಿ, 2,500 ರೂ. ಸರಿಯಾದ ದರ” ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದೆ.

ಈ ಕಮ್ಮಿ ಸಂಬಳದ ದರವನ್ನು ಸಮರ್ಥಿಸಿಕೊಳ್ಳಲು ಅವರು ವಿಚಿತ್ರ ಲೆಕ್ಕಾಚಾರ ನೀಡಿದ್ದರು. “ಒಂದು ವೇಳೆ ಮನೆಗೆಲಸದವರು ದಿನಕ್ಕೆ 10 ಮನೆಗಳಲ್ಲಿ ಕೆಲಸ ಮಾಡಿದರೆ ಅವರಿಗೆ ತಿಂಗಳಿಗೆ 25,000 ರೂ. ಸಿಗುತ್ತದೆ. ಇದು ಬಿಪಿಒ (BPO) ನೌಕರರು ಅಥವಾ ಎಂಜಿನಿಯರಿಂಗ್ ಪದವೀಧರರು ಪಡೆಯುವ ಸಂಬಳಕ್ಕಿಂತ ಹೆಚ್ಚು. ಆದ್ದರಿಂದ ನಾವು ರೇಟ್ ಕಂಟ್ರೋಲ್ ಮಾಡಬೇಕು,” ಎಂದು ನಿವಾಸಿಗಳಿಗೆ ಕರೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್!

ಈ ಪೋಸ್ಟ್ ರೆಡಿಟ್ (Reddit) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಜನರು ಇವರ ನಡೆಯನ್ನು “ಕೀಳುಮಟ್ಟದ್ದು” ಎಂದು ಟೀಕಿಸಿದ್ದಾರೆ. “70 ಸಾವಿರ ಬಾಡಿಗೆ ಇರುವ ಫ್ಲಾಟ್‌ನಲ್ಲಿ ವಾಸಿಸುವ ಇವರು, ಬಡವರ ಹೊಟ್ಟೆ ಮೇಲೆ ಹೊಡೆಯುವ ಲೆಕ್ಕಾಚಾರ ಮಾಡುತ್ತಿದ್ದಾರೆ” ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Fri, 15 May 26

Follow Us
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್