AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ಸವಾರರ 14 ವರ್ಷ ಕಾಯುವಿಕೆಗೆ ಮುಕ್ತಿ: ಜಕ್ಕೂರು ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೆ ಸಿದ್ಧ

ಕಳೆದ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ. ಭೂಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿದ್ದ ಈ ಸೇತುವೆ ಮುಂದಿನ ತಿಂಗಳು ಉದ್ಘಾಟನೆಯಾಗುವ ನಿರೀಕ್ಷೆಯಿದ್ದು, ಇದು ಯಲಹಂಕ ಕಡೆಗಿನ ಪ್ರಯಾಣಿಕರಿಗೆ ಸಮಯ ಮತ್ತು ದೂರವನ್ನು ಉಳಿಸಲಿದೆ.

ವಾಹನ ಸವಾರರ 14 ವರ್ಷ ಕಾಯುವಿಕೆಗೆ ಮುಕ್ತಿ: ಜಕ್ಕೂರು ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೆ ಸಿದ್ಧ
Jakkur Rob
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Sep 02, 2026 | 9:48 PM

Share

ಬೆಂಗಳೂರು, (ಸೆಪ್ಟೆಂಬರ್ 02): 14 ವರ್ಷಗಳ ವಾಹನ ಸವಾರರ ಕಾಯುವಿಕೆಗೆ ಶೀಘ್ರದಲ್ಲೇ ಮುಕ್ತಿ ಸಿಗುವ ಸಾಧ್ಯತೆ ಇದೆ. ಹೌದು.. ಬೆಂಗಳೂರಿನ ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉತ್ತರ ನಗರ ಪಾಲಿಕೆ ವತಿಯಿಂದ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ರೈಲ್ವೆ ಇಲಾಖೆ ಅರ್ಧಕ್ಕೆ ಬಿಟ್ಟುಹೋಗಿದ್ದ ಈ ಯೋಜನೆ ಇದೀಗ ಮತ್ತೆ ಸಾಕಾರಗೊಳ್ಳುವ ಹಂತಕ್ಕೆ ತಲುಪಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ವಾಹನ ಸವಾರರ ಸುದೀರ್ಘ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಗಲಿದೆ.

ವಾಹನ ಸವಾರರಿಗೆ ಮುಕ್ತಿ

ಮೇಲ್ಸೇತುವೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಲೋಡ್ ಪರೀಕ್ಷೆ ಹಾಗೂ ರಸ್ತೆ ಮಾರ್ಕಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಈ ಎರಡೂ ಪ್ರಮುಖ ಕಾರ್ಯಗಳು ಪೂರ್ಣಗೊಂಡ ಬಳಿಕ ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲುಗಳ ಸಂಚಾರಕ್ಕಾಗಿ ಕಾಯುತ್ತ ಸಮಯ ವ್ಯರ್ಥ ಮಾಡುತ್ತಿದ್ದ ವಾಹನ ಸವಾರರಿಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.

ಇದನ್ನೂ ಓದಿ: ಉದ್ಘಾಟನೆಗೆ ಸಿದ್ಧವಾದ ಪಿಂಕ್ ಲೈನ್ ಮೆಟ್ರೋ ಮಾರ್ಗ: ಕೊಂಚ ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಹಲವು ಏರಿಯಾಗಳ ನಡುವಿನ ಸಂಚಾರ ಸುಗಮ

ಜಕ್ಕೂರು ಮಾರ್ಗವಾಗಿ ಪ್ರತಿನಿತ್ಯ ಓಡಾಟ ನಡೆಸುವ ವಾಹನ ಸವಾರರು ಕಾಮಗಾರಿ ಪೂರ್ಣಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮೇಲ್ಸೇತುವೆ ಬಳಕೆಗೆ ಬಂದ ಬಳಿಕ ಯಲಹಂಕ, ಹೆಬ್ಬಾಳ, ಹೆಗ್ಗಡೆ ನಗರ ಹಾಗೂ ಸಂಪಿಗೆಹಳ್ಳಿ ಭಾಗಗಳ ನಡುವಿನ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ. 14 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಕೊನೆಗೂ ಪೂರ್ಣಗೊಳ್ಳುತ್ತಿರುವುದು ಈ ಭಾಗದ ಜನರಿಗೆ ದೊಡ್ಡ ನಿರಾಳತೆಯನ್ನು ನೀಡಿದ್ದು, ಶೀಘ್ರದಲ್ಲೇ ಸೇತುವೆ ಉದ್ಘಾಟನೆಯಾಗಿ ವಾಹನ ಸಂಚಾರ ಆರಂಭವಾಗಲಿ ಎಂಬುದು ಸ್ಥಳೀಯರ ಆಶಯವಾಗಿದೆ.

2019ರ ಆಗಸ್ಟ್ 23ರಂದು ಜಕ್ಕೂರಿನ ಈ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸಲು ಸ್ಥಳೀಯ ನಿವಾಸಿಗಳು ಸಹಿ ಅಭಿಯಾನವನ್ನು ಆರಂಭ ಮಾಡಿದ್ದರು. ಈ ವೇಳೆ ಸ್ಥಳೀಯರು ಕಳೆದ ಒಂದು ದಶಕದಿಂದ ಭೂಸ್ವಾಧಿನ ಸಮಸ್ಯೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಕಾರಣ ಸಮಸ್ಯೆಯಾಗಿತ್ತು ಎಂದು ಅಧಿಕಾರಿಗಳ ಗಮನ ಸೆಳೆದಿದ್ದರು. ಇದರ ನಡುವೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಂಜಿನಿಯರ್‌ಗಳು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಗಮನಿಸಬೇಕು ಎಂದು ಒತ್ತಾಯ ಮಾಡಿದ್ದರು.

ಈ ರೈಲ್ವೆ ಬ್ರಿಡ್ಜ್ ಪೂರ್ಣಗೊಂಡು ಸಾರ್ವಜನಿಕರ ಸೇವೆ ಲಭ್ಯವಾದರೆ, ಚಾಲಕರು ಯಾವುದೇ ಸಮಸ್ಯೆ ಇಲ್ಲದೆ ಯಲಹಂಕ ತಲುಪಲು ವರದಾನವಾಗಲಿದೆ. ಈಗ ಈ ಮಾರ್ಗದಲ್ಲಿ ಪ್ರಯಾಣಿಸಲು ವಾಹನ ಸವಾರರು ಐದು ಕಿಲೋ ಮೀಟರ್ ಸುತ್ತಿ ಬಳಸಿ ಪ್ರಯಾಣ ಮಾಡಬೇಕಿದೆ. ರೈಲ್ವೆ ಬ್ರಿಡ್ಜ್ ಪೂರ್ಣಗೊಂಡದರೆ, ಸವಾರರಿಗೆ ಮೂರು ಕಿಲೋ ಮೀಟರ್ ದೂರ ಉಳಿತಾಯವಾಗಲಿದೆ.

ಇನ್ನು ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಟ್ವೀಟ್ ಮಾಡಿದ್ದು, ಜಕ್ಕೂರು ಆರ್‌ಒಬಿ ಅಂತಿಮ ಹಂತದ ಕೆಲಸದಲ್ಲಿದೆ. ಈ ನಿರ್ಣಾಯಕ ಸಂಪರ್ಕಕ್ಕಾಗಿ ಸಾವಿರಾರು ಪ್ರಯಾಣಿಕರು ಕಾಯುತ್ತಿದ್ದಾರೆ. ಹೀಗಾಗಿ ನಾವು ಆದಷ್ಟು ಬೇಗ ಸಿದ್ಧಪಡಿಸಲು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್