AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಟಲೈಟ್ ಟು ಮೆಟ್ರೋ ಕನೆಕ್ಟಿವಿಟಿ ಕಷ್ಟ: ಒಂದು ಕಿ.ಮೀ ದಾಟಲು ಪ್ರಯಾಣಿಕರ ಹರಸಾಹಸ!

ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ನಡುವೆ ಸಂಪರ್ಕ ಕೊರತೆ ತೀವ್ರ ಸಮಸ್ಯೆಯಾಗಿದೆ. ಮುರಿದ ಫುಟ್‌ಪಾತ್, ಆಟೋಗಳ ಹೆಚ್ಚುವರಿ ಶುಲ್ಕದಿಂದ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಸಮನ್ವಯ ಸಾಧಿಸಿ, ಸ್ಕೈವಾಕ್ ಅಥವಾ ಫೀಡರ್ ಬಸ್‌ಗಳ ಮೂಲಕ ಶೀಘ್ರ ಪರಿಹಾರ ಒದಗಿಸಬೇಕೆಂದು ತಜ್ಞರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಯಾಟಲೈಟ್ ಟು ಮೆಟ್ರೋ ಕನೆಕ್ಟಿವಿಟಿ ಕಷ್ಟ: ಒಂದು ಕಿ.ಮೀ ದಾಟಲು ಪ್ರಯಾಣಿಕರ ಹರಸಾಹಸ!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Mar 30, 2026 | 12:36 PM

Share

ಬೆಂಗಳೂರು, ಮಾ.30: ನಗರದ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣ (KSRTC) ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ನಡುವೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಎರಡು ನಿಲ್ದಾಣಗಳ ನಡುವಿನ ಅಂತರ ಒಂದು ಕಿಲೋಮೀಟರ್‌ಗಿಂತಲೂ ಕಡಿಮೆ ಇದ್ದರೂ, ಸುಗಮ ಸಂಪರ್ಕದ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ. ಇದೀಗ ಈ ಬಗ್ಗೆ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಮೆಟ್ರೋ ಹತ್ತಲು ಈ ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಿದೆ. ಆದರೆ, ಮೈಸೂರು ರಸ್ತೆಯ ಫುಟ್‌ಪಾತ್‌ಗಳು ಒಡೆದು ಹೋಗಿದ್ದು, ಬೀದಿ ಬದಿ ವ್ಯಾಪಾರಿಗಳಿಂದ ಆಕ್ರಮಣಕ್ಕೊಳಗಾಗಿವೆ. ಇದರಿಂದಾಗಿ ಲಗೇಜ್‌ಗಳೊಂದಿಗೆ ನಡೆಯುವುದು ಅಸಾಧ್ಯವಾಗಿದ್ದು, ಅನಿವಾರ್ಯವಾಗಿ ಆಟೋರಿಕ್ಷಾಗಳನ್ನು ಅವಲಂಬಿಸಬೇಕಿದೆ. ಕೇವಲ ಅರ್ಧ ಕಿಲೋಮೀಟರ್ ದೂರಕ್ಕೆ ಆಟೋ ಚಾಲಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈ ಬಗ್ಗೆ ನಗರ ಸಾರಿಗೆ ತಜ್ಞರ ಪ್ರಕಾರ, ಮೆಟ್ರೋ ಮತ್ತು ಬಸ್ ನಿಲ್ದಾಣಗಳ ನಡುವಿನ ಈ ಕನೆಕ್ಟಿವಿಟಿ ಕೊರತೆಯು ಯೋಜನಾ ಹಂತದ ದೊಡ್ಡ ಲೋಪವಾಗಿದೆ. “ಬಸ್, ಮೆಟ್ರೋ ಮತ್ತು ಪಾದಚಾರಿ ಮಾರ್ಗಗಳು ಒಂದಕ್ಕೊಂದು ಬೆಸೆದಾಗ ಮಾತ್ರ ಸಾರಿಗೆ ವ್ಯವಸ್ಥೆ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ವಿಶ್ವದರ್ಜೆಯ ಮೆಟ್ರೋ ಇದ್ದರೂ ಪ್ರಯೋಜನವಿಲ್ಲ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು, ಮಡಿಕೇರಿ ಮತ್ತು ಕೇರಳದ ಭಾಗಗಳಿಗೆ ತೆರಳುವ ಸಾವಿರಾರು ಜನರಿಗೆ ಸ್ಯಾಟಲೈಟ್ ಬಸ್ ನಿಲ್ದಾಣ ಪ್ರಮುಖ ಕೇಂದ್ರವಾಗಿದೆ. ಬಿಎಂಆರ್‌ಸಿಎಲ್ (BMRCL) ಮತ್ತು ಬಿಎಂಟಿಸಿ ಸಮನ್ವಯ ಸಾಧಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಪರಿಹಾರಗಳೇನು?

ಸ್ಕೈವಾಕ್ ಅಥವಾ ವಾಕ್‌ವೇ: ಈ ಎರಡು ನಿಲ್ದಾಣಗಳ ನಡುವೆ ಮೀಸಲಾದ ಸ್ಕೈವಾಕ್ ಅಥವಾ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಬೇಕು.

ಫೀಡರ್ ಬಸ್‌ಗಳು: ಬಿಎಂಟಿಸಿ (BMTC) ವತಿಯಿಂದ ಸಣ್ಣ ಫೀಡರ್ ಬಸ್ ಅಥವಾ ಮಿನಿ ಶಟಲ್ ಸರ್ವಿಸ್ ಆರಂಭಿಸಬೇಕು.

ಕಟ್ಟುನಿಟ್ಟಿನ ಗಡುವು: ಒಂದು ವೇಳೆ ಕಾಮಗಾರಿ ಆರಂಭಿಸಿದರೆ, ಅದು ಸಂಚಾರಕ್ಕೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More