Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪಪ್ರಾಂಶುಪಾಲಕರಿಂದಲೇ ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರು ಅರೆಸ್ಟ್​

ಬೆಂಗಳೂರಿನ ಸಿಸಿಬಿ ಪೊಲೀಸರು ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ. ಕೋಲಾರದ ಬಸವ ಶ್ರೀ ಕಾನೂನು ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ನಾಗರಾಜ್, ವರೂಣ್ ಮತ್ತು ಜಗದೀಶ್ ಬಂಧಿತರು. ಪ್ರಶ್ನೆಪತ್ರಿಕೆ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಲ್ಲಿ ಹರಿದಾಡಿತ್ತು. ಆರೋಪಿಗಳು 500 ರಿಂದ 10,000 ರೂಪಾಯಿಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಉಪಪ್ರಾಂಶುಪಾಲಕರಿಂದಲೇ ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರು ಅರೆಸ್ಟ್​
ಸಿಸಿಬಿ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on: Feb 19, 2025 | 8:22 AM

ಬೆಂಗಳೂರು, ಫೆಬ್ರವರಿ 19: ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ (Law Exam Question Paper Leak) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಲಾರದ ಬಸವ ಶ್ರೀ ಕಾನೂನು ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ನಾಗರಾಜ್, ವರೂಣ್ ಮತ್ತು ಜಗದೀಶ್ ಬಂಧಿತ ಆರೋಪಿಗಳು. ಜನವರಿ 22ರಂದು ನಡೆಯಬೇಕಿದ್ದ ಕಾನೂನು ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು.

ಸೋರಿಕೆಯಾದ ಪ್ರಶ್ನೆಪತ್ರಿಕೆ ಹಲವಾರು ಜನರ ವಾಟ್ಸಾಪ್​ ಮತ್ತು ಟೆಲಿಗ್ರಾಂನಲ್ಲಿ ಹರಿದಾಡಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ಕೈವಾಡವನ್ನು ಬಯಲಿಗೆ ಎಳೆದಿದ್ದಾರೆ.

ಇದನ್ನೂ ಓದಿ: ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಡ್ರಗ್ಸ್​​ ಬಾಕ್ಸ್​ ಪತ್ತೆ ಕೇಸ್​: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಹಿರಂಗ

ಡಾ. ನಾಗರಾಜ್​ ಮೂಲಕ ಮೊದಲಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಡಾ. ನಾಗರಾಜ್​ ಪ್ರಶ್ನೆಪತ್ರಿಕೆಯ ಸೀಲ್ಡ್ ಕವರ್ ತೆರೆದು, ಪ್ರಶ್ನೆಪತ್ರಿಕೆ ಫೋಟೊ ತೆಗೆದು ಮೊಬೈಲ್​ನಲ್ಲಿ ಇಟ್ಟುಕೊಂಡಿದ್ದರು. ಬಳಿಕ, ಅದೇ ಕಾಲೇಜಿನ ಕಾನೂನು ವಿದ್ಯಾರ್ಥಿ ವರೂಣ್, ಡಾ ನಾಗರಾಜ್ ಮೊಬೈಲ್​ನಿಂದ ಪ್ರಶ್ನೆಪತ್ರಿಕೆಯನ್ನು ತನ್ನ ಮೊಬೈಲ್​ಗೆ ಶೇರ್ ಮಾಡಿಕೊಂಡಿದ್ದಾನೆ. ಬಳಿಕ ವರುಣ್​ ಪ್ರಶ್ನೆಪತ್ರಿಕೆಯನ್ನು ಜಗದೀಶ್​ಗೆ ಕಳಿಸಿದ್ದಾನೆ. ಇಬ್ಬರ ಕೈಗೆ ಪ್ರಶ್ನೆಪತ್ರಿಕೆ ಬಂದ ಬಳಿಕ ಹಲವಾರು ಜನರಿಗೆ 500 ರೂಪಾಯಿಂದ 10ಸಾವಿರ ರೂ. ತನಕ ಇಬ್ಬರೂ ಮಾರಾಟ ಮಾಡಿದ್ದಾರೆ ಎಂದು ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ. ಸಿಸಿಬಿ ಸೈಬರ್​ ಕ್ರೈಮ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ