ಟ್ರೇಡಿಂಗ್ ಮಾಡಲು ಹೋಗಿ ಕ್ರಿಪ್ಟೋಕರೆನ್ಸಿ ಕಳೆದುಕೊಂಡ ವ್ಯಕ್ತಿ, ಇದಕ್ಕೆ ಆ್ಯಪ್ ಜವಾಬ್ದಾರಿಯಲ್ಲ ಎಂದ ನ್ಯಾಯಾಲಯ
ವ್ಯಕ್ತಿಯೊಬ್ಬರು 12,484 ಯುಎಸ್‌ಡಿಟಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಕಳೆದುಕೊಂಡಿದ್ದು ಆನ್‌ಲೈನ್ ಕ್ರಿಪ್ಟೋ ಟ್ರೇಡಿಂಗ್ ಅಪ್ಲಿಕೇಶನ್‌ನ ವಿರುದ್ಧ ಮೊಕದ್ದಮೆ ಹೂಡಿದ್ದರು. ಆದರೆ ಕ್ರಿಪ್ಟೋ ಟ್ರೇಡಿಂಗ್ ಅಪ್ಲಿಕೇಶನ್ ಸೇವೆಯಿಂದ ಯಾವುದೇ ರೀತಿಯಲ್ಲಿ ತಪ್ಪಿತಸ್ಥರಲ್ಲ. ಈ ಲೋಸ್ಗೆ ಸಂಸ್ಥೆ ಜವಾಬ್ದಾರಿ ಅಲ್ಲ ಎಂದು ನಗರ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರು, ಅ.16: ಹಣ ಮಾಡುವ ಆಸೆಯಿಂದ ಕ್ರಿಪ್ಟೋ ಟ್ರೇಡಿಂಗ್ (cryptocurrency) ಮಾಡುತ್ತಿದ್ದ ವ್ಯಕ್ತಿ 12,484 ಯುಎಸ್‌ಡಿಟಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಕಳೆದುಕೊಂಡಿದ್ದು ಆನ್‌ಲೈನ್ ಕ್ರಿಪ್ಟೋ ಟ್ರೇಡಿಂಗ್ ಅಪ್ಲಿಕೇಶನ್‌ನ ವಿರುದ್ಧ ಮೊಕದ್ದಮೆ ಹೂಡಿದ್ದರು. ಆದರೆ ಕ್ರಿಪ್ಟೋ ಟ್ರೇಡಿಂಗ್ ಅಪ್ಲಿಕೇಶನ್ ಸೇವೆಯಿಂದ ಯಾವುದೇ ರೀತಿಯಲ್ಲಿ ತಪ್ಪಿತಸ್ಥರಲ್ಲ. ಈ ಲೋಸ್ಗೆ ಸಂಸ್ಥೆ ಜವಾಬ್ದಾರಿ ಅಲ್ಲ ಎಂದು ನಗರ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ. ಕಾನೂನು ಹೋರಾಟದಲ್ಲಿ ಬೆಂಗಳೂರು ವ್ಯಕ್ತಿ ಸೋತಿದ್ದು ನ್ಯಾಯಾಲಯವು ಅವರನ್ನು ಸೈಬರ್ ಅಪರಾಧದ ಬಲಿಪಶು ಎಂದಿದೆ.
ನಾಯಂಡಹಳ್ಳಿಯ ಪ್ರಶಾಂತ್ ಎಂಬುವವರು ಡಿಸೆಂಬರ್ 15, 2022 ರಂದು ಚೆನ್ನೈ ಮೂಲದ ಜಿಯೊಟ್ಟಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (Giottus Technologies Pvt Ltd) ಮೂಲಕ ಕ್ರಿಪ್ಟೋಕರೆನ್ಸಿಯಲ್ಲಿ ಟ್ರೇಡಿಂಗ್ ನಡೆಸುತ್ತಿದ್ದರು. ಈ ವೇಳೆ ಸರ್ವರ್ ಸಮಸ್ಯೆ ಉಂಟಾಗಿ ಟ್ರೇಡಿಂಗ್ ಮಾಡಲು ಆಗಿಲ್ಲ. ಮರುದಿನ ಬೆಳಿಗ್ಗೆ ಅವರು ಜಿಯೊಟ್ಟಸ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ನೋಡಿದಾಗ ಅವರಿಗೆ ದೊಡ್ಡ ಶಾಕ್ ಆಗಿದೆ. ಏಕೆಂದರೆ ಅವರ ಖಾತೆಯಲ್ಲಿದ್ದ 12,484 USDT ಮಾಯವಾಗಿತ್ತು. ಹಣ ಕಳೆದುಕೊಳ್ಳುತ್ತಿದ್ದಂತೆಯೇ ಗಾಬರಿಗೊಂಡ ಪ್ರಶಾಂತ್ ಕಂಪನಿಯ ಕಸ್ಟಮರ್ ಕೇರ್ಗೆ ಕರೆ ಮಾಡಿ ಅವರು ಹೇಳಿದ ಎಲ್ಲಾ ಹಂತಗಳನ್ನು ಪಾಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಬಳಿಕ ಪ್ರಶಾಂತ್ ಅವರು ತಮ್ಮ ಕ್ರಿಪ್ಟೋಕರೆನ್ಸಿಯ ಮೋಸದ ಬಗ್ಗೆ ಜಿಯೊಟ್ಟಸ್ ಸಂಸ್ಥೆಗೆ ದೂರು ಸಲ್ಲಿಸಿದ್ದು ಆದರೆ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆಗಳು ಸಿಕ್ಕಿಲ್ಲ. ಕೊನೆಗೆ ಪ್ರಶಾಂತ್ ತಾವು ಕಳೆದುಕೊಂಡ ಕ್ರಿಪ್ಟೋಕರೆನ್ಸಿಗೆ ಇನ್ಶೂರೆನ್ಸ್ ಕ್ಲೈಮ್ ಮಾಡಲು ಪ್ರಯತ್ನಿಸಿದನು. ಕ್ರಿಪ್ಟೋಕರೆನ್ಸಿಗೆ ಇನ್ಶೂರೆನ್ಸ್ ಮಾಡುವಾಗ ವಿಮೆ ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. ಆದ್ರೆ ಈಗ ವಿಮೆ ವ್ಯಾಪ್ತಿಯಲ್ಲಿ ಸೈಬರ್ ದಾಳಿಗೆ ಇನ್ಶೂರೆನ್ಸ್ ನೀಡಲಾಗುವುದಿಲ್ಲ ಎಂದು ಕಂಪನಿ ಹಿಂದೆ ಸರಿದಿದೆ. ಪ್ರಶಾಂತ್ ಅವರ ಯಾವ ಪ್ರಯತ್ನಗಳೂ ಸಫಲವಾಗದಿದ್ದಾಗ ಕೊನೆಗೆ ಸೈಬರ್ ಕ್ರೈಮ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಬಸವನಗುಡಿ ಮತ್ತು ಗರುಡಾ ಮಾಲ್ನಲ್ಲಿ ಈ ಬಾರಿ ವಿಶಿಷ್ಟವಾಗಿ ಗೊಂಬೆಗಳ ಪ್ರದರ್ಶನ
ಡಿಸೆಂಬರ್ 23, 2022 ರಂದು, ಪ್ರಶಾಂತ್ ಅವರು ಬೆಂಗಳೂರು ಪೊಲೀಸ್ ಸೈಬರ್ ಕ್ರೈಮ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದರು. ನಂತರ ಶಾಂತಿನಗರದಲ್ಲಿರುವ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಜಿಯೊಟ್ಟಸ್ ಸಂಸ್ಥೆ ವಿರುದ್ಧ ಸೇವಾ ಕೊರತೆ ಸಂಬಂಧ ದೂರು ಸಲ್ಲಿಸಿದರು.
ಜನವರಿ 2023 ರ ಆರಂಭದಲ್ಲಿ ಶುರುವಾದ ಮೊಕದ್ದಮೆಯಲ್ಲಿ, ಪ್ರಶಾಂತ್ ಅವರು ಚಾರ್ಟರ್ಡ್ ಅಕೌಂಟೆಂಟ್ ಮೂಲಕ ತಮ್ಮ ವಾದವನ್ನು ಮಂಡಿಸಿದರು. ಜಿಯೊಟ್ಟಸ್ ಸಂಸ್ಥೆಯನ್ನು ಪ್ರತಿನಿಧಿಸುವ ವಕೀಲರು ದೂರುದಾರರು ಗ್ರಾಹಕರಲ್ಲದ ಕಾರಣ ದೂರನ್ನು ವಜಾಗೊಳಿಸಬೇಕು ಎಂದು ಹೇಳಿದರು, ಅವರು ಭಾರತ ಸರ್ಕಾರದಿಂದ ಗುರುತಿಸಲ್ಪಡದ ಕ್ರಿಪ್ಟೋಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡುತ್ತಿದ್ದಾರೆ ಮತ್ತು ಟ್ರೇಡಿಂಗ್ ಸಮಯದಲ್ಲಿ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಆದ್ದರಿಂದ, ದೂರುದಾರರು ಈ ಸಂಸ್ಥೆಯಿಂದ ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು.
ಇದಲ್ಲದೆ, ಪ್ರಶಾಣತ್ ಅವರು ಜಿಯೊಟ್ಟಸ್ ಪೋರ್ಟಲ್ ಬದಲಿಗೆ ತಪ್ಪು ವೆಬ್‌ಸೈಟ್‌ಗೆ ಲಾಗ್ ಇನ್ ಆಗಿದ್ದರು. ಇದು ಅವರ ಎಲ್ಲಾ ಕ್ರಿಪ್ಟೋಕರೆನ್ಸಿಯ ಹ್ಯಾಕಿಂಗ್ಗೆ ಕಾರಣವಾಗಿದೆ ಎಂದು ವಾದಿಸಿದರು. ಸೆಪ್ಟೆಂಬರ್ 19 ರಂದು, ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತು, ದೂರುದಾರರು ನಿಜವಾಗಿಯೂ ಸೈಬರ್ ಕ್ರೈಮ್ ಕಳ್ಳರಿಗೆ ಬಲಿಪಶು ಆಗಿದ್ದಾರೆ. ಕ್ರಿಪ್ಟೋ ಕಂಪನಿಯ ಕಡೆಯಿಂದ ಯಾವುದೇ ಕೊರತೆಯಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ