ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ: ವಿಶ್ವದಲ್ಲೇ ಬೆಂಗಳೂರಿಗೆ 14ನೇ ಸ್ಥಾನ
ಸ್ಟಾರ್ಟ್ಅಪ್ ಜಿನೋಮ್‌ನ ಜಾಗತಿಕ ಸ್ಟಾರ್ಟ್ಅಪ್ ಇಕೋಸಿಸ್ಟಮ್ ವರದಿ 2025ರ ಪ್ರಕಾರ, ಬೆಂಗಳೂರು ವಿಶ್ವದ ಟಾಪ್ 20 ಸ್ಟಾರ್ಟ್ಅಪ್ ಇಕೋಸಿಸ್ಟಮ್ ನಗರಗಳ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಸ್ಥಾನಗಳ ಏರಿಕೆಯಾಗಿದೆ. ಸ್ವಿಗ್ಗಿ, ಗೋಡಿಜಿಟ್, ಇಂಡಿಜೀನ್ ಮತ್ತು ಬ್ಲ್ಯಾಕ್‌ಬಕ್‌ನಂತಹ ದೊಡ್ಡ ಐಪಿಒಗಳು ಮತ್ತು ಕರ್ನಾಟಕ ಸರ್ಕಾರದ ಬೆಂಬಲ ಇದಕ್ಕೆ ಕಾರಣ ಎಂದು ವರದಿ ಹೇಳಿದೆ. ಭಾರತೀಯ ನಗರಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.
ಬೆಂಗಳೂರು, ಜೂನ್ 14: ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರು (Bengaluru) ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ ಟಾಪ್ 20 ಸಾರ್ಟ್ಪ್ ಇಕೋಸಿಸ್ಟಂ (Ecosystem) ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ಈ ಬಾರಿ ಏಳು ಸ್ಥಾನ ಜಿಗಿತ ಕಂಡಿದೆ. ಕಳೆದ ವರ್ಷ ಬೆಂಗಳೂರು 21ನೇ ಸ್ಥಾನದಲ್ಲಿತ್ತು. ವಿಶ್ವದ ಟಾಪ್ 20 ಸ್ಟಾರ್ಟ್ಅಪ್ ನಗರಗಳಲ್ಲಿ ಬೆಂಗಳೂರು ಅತಿದೊಡ್ಡ ಜಿಗಿತ ದಾಖಲಿಸದಂತಾಗಿದೆ ಎಂದು ಸ್ಟಾರ್ಟ್ ಅಪ್ ಜಿನೋಮ್‌ನ ಗ್ಲೋಬಲ್ ಸ್ಟಾರ್ಟ್ಅಪ್ ಇಕೋಸಿಸ್ಟಂ ರಿಪೋರ್ಟ್ (GSER) 2025ರ ವರದಿ ನೀಡಿದೆ.
ಈ ವರದಿಯಲ್ಲಿ ಸ್ಥಾನ ಪಡೆದ ಭಾರತೀಯ ನಗರಗಳಲ್ಲಿ, ಬೆಂಗಳೂರು ಅಗ್ರಸ್ಥಾನದಲ್ಲಿದೆ. ದೆಹಲಿ 29ನೇ ಸ್ಥಾನದಲ್ಲಿದೆ ಮತ್ತು ಮುಂಬೈ 40ನೇ ಸ್ಥಾನದಲ್ಲಿದೆ. ಜಿಎಸ್ಇಅಪ್ ವರದಿ ಪ್ರಕಾರ ಸಿಲಿಕಾನ್ ವ್ಯಾಲಿ ಮೊದಲ, ನ್ಯೂಯಾರ್ಕ್ ಎರಡನೇ ಮತ್ತು ಲಂಡನ್ ಮೂರನೇ ಸ್ಥಾನ ಪಡೆದಿದೆ. ಜಾಗತಿಕವಾಗಿ ಟಾಪ್ 50 AI ನಗರಗಳಲ್ಲಿ ಬೆಂಗಳೂರು ಐದನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ ಮೂರು ತಿಂಗಳು ಸಂಚಾರ ನಿಷೇಧ!
ಕಳೆದ ವರ್ಷ ಅತಿದೊಡ್ಡ ಐಪಿಒಗಳಲ್ಲಿ ಒಂದಾದ ಸ್ವಿಗ್ಗಿಯ, ಗೋಡಿಜಿಟ್, ಇಂಡಿಜೀನ್ ಮತ್ತು ಬ್ಲ್ಯಾಕ್‌ಬಕ್ ಷೇರುಮಾರುಕಟ್ಟೆ ಪ್ರವೇಶಿಸಿದ್ದು ಹಾಗೂ ಡೀಪ್ಟೆಕ್ ಇಕೋಸಿಸ್ಟಂ ವಿಚಾರದಲ್ಲಿ ಕರ್ನಾಟಕ ಸರ್ಕಾರ ನೀಡುತ್ತಿರುವ ಪ್ರೋತ್ಸಹದಿಂದ ಈ ಸಾಧನೆ ಯಶಸ್ವಿಯಾಗಿದೆ.
2024ರಲ್ಲಿ ಭಾರತವು ಶತಕೋಟಿ ಡಾಲರ್ ಮೌಲ್ಯದ ಐಪಿಒಗಳ ಸೃಷ್ಟಿಗೆ ಕಾರಣವಾಗಿದೆ. ಸ್ವಿಗ್ಗಿಯು 96 ಸಾವಿರ ಕೋಟಿ ರೂ., ಗೋಡಿಜಿತ್ 30 ಸಾವಿರ ಕೋಟಿ ರೂ., ಇಂಡಿಜಿನ್ 1 11 ಸಾವಿರ ಕೋಟಿ ರೂ., ಬ್ಲ್ಯಾಕ್ ಬಕ್ ಕಂಪನಿ 8600 ಕೋಟಿ ರೂ. ಮೌಲ್ಯದ ಐಪಿಒ ಬಿಡುಗಡೆ ಮಾಡಿತ್ತು. ಈ ಮೂಲಕ ಕಂಪನಿಯಲ್ಲಿ ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭವಾಗಿತ್ತು. ಇದು ದೇಶದಲ್ಲಿ ಸ್ಟಾರ್ಟ್ಅಪ್ಗಳಿಗೆ ಸಿಗುತ್ತಿರುವ ಅತ್ಯುತ್ತಮ ಇಕೋ ಸಿಸ್ಟಂಗೆ ಸಾಕ್ಷಿಯಾಗಿದೆ ಎಂದು ವರದಿಯಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








