AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟಡ ನಕ್ಷೆಗೆ ಇನ್ಮುಂದೆ ಇ ಖಾತಾ ಕಡ್ಡಾಯ: ಬಿಬಿಎಂಪಿ ನಡೆಗೆ ಆಸ್ತಿ ಮಾಲೀಕರು ಕಂಗಾಲು

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ ಖಾತಾ ಮಾಡಿಸಲು ಸೂಚನೆ ನೀಡಿದ್ದ ಬಿಬಿಎಂಪಿ, ಇದೀಗ ಜುಲೈ 1 ರಿಂದ ಕಟ್ಟಡ ನಕ್ಷೆ ಮಂಜೂರು ಮಾಡಲು ಇ ಖಾತಾ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಇನ್ಮುಂದೆ ಆನ್​​ಲೈನ್​​ನಲ್ಲಿ ನಂಬಿಕೆ ನಕ್ಷೆ ಪಡೆಯುವುದರಿಂದ ಹಿಡಿದು ಅರ್ಜಿ ಸಲ್ಲಿಕೆ ಮಾಡುವುದಕ್ಕೂ ಇ ಖಾತಾ ಕಡ್ಡಾಯಗೊಳಿಸಿರುವ ಪಾಲಿಕೆ, ಇ ಖಾತಾ ಇಲ್ಲದಿದ್ರೆ ಕಟ್ಟಡ ನಕ್ಷೆ ಸಿಗಲಾರದು ಎಂದು ಎಚ್ಚರಿಕೆ ನೀಡಿದೆ.

ಕಟ್ಟಡ ನಕ್ಷೆಗೆ ಇನ್ಮುಂದೆ ಇ ಖಾತಾ ಕಡ್ಡಾಯ: ಬಿಬಿಎಂಪಿ ನಡೆಗೆ ಆಸ್ತಿ ಮಾಲೀಕರು ಕಂಗಾಲು
ಸಾಂದರ್ಭಿಕ ಚಿತ್ರ
Kiran Surya
| Updated By: Ganapathi Sharma|

Updated on:Jun 12, 2025 | 7:47 AM

Share

ಬೆಂಗಳೂರು, ಜೂನ್ 12: ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಇನ್ಮುಂದೆ ಇ ಖಾತಾ (E Khata) ಕಡ್ಡಾಯ ಎಂದು ಬಿಬಿಎಂಪಿ (BBMP) ಆದೇಶ ಹೊರಡಿಸಿದೆ. ಜುಲೈ 1ರಿಂದ ಕಟ್ಟಡ ನಿರ್ಮಾಣ ನಕ್ಷೆ ಪಡೆಯಬೇಕಿದ್ದರೆ ಇ ಖಾತಾ ಸಲ್ಲಿಸುವುದು ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದಂತೆ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಶಾಕ್ ನೀಡಿದ್ದ ಪಾಲಿಕೆ, ಇದೀಗ ಹೊಸ ಕಟ್ಟಡ ನಿರ್ಮಾಣಕ್ಕೆ ಇ ಖಾತಾ ಕಡ್ಡಾಯ ಮಾಡಿ ಮತ್ತೊಂದು ಶಾಕ್ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅದರ ಜತೆಗೆ ಸ್ವತ್ತುಗಳಿಗೆ ಇ-ಖಾತಾವನ್ನು ಆನ್​ಲೈನ್ ಮೂಲಕ ನೀಡಲಾಗುತ್ತಿದೆ. ಇದೀಗ ಎರಡೂ ತಂತ್ರಾಂಶವನ್ನು ಏಕೀಕರಣಗೊಳಿಸಲಾಗುತ್ತಿದೆ. ಹೀಗಾಗಿ ಕಟ್ಟಡನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಮೊದಲು ಇ-ಖಾತಾ ಪಡೆದಿರಬೇಕು.ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಇ-ಖಾತಾ ಅಥವಾ ಇಪಿಐಡಿ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ- ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇತ್ತ ಈಗಾಗಲೇ ಕೇವಲ 5 ಲಕ್ಷ ಇ ಖಾತಾ ಮಾತ್ರ ವಿತರಣೆಯಾಗಿದ್ದು, ಇನ್ನೂ ಲಕ್ಷಾಂತರ ಮಾಲೀಕರು ಇ ಖಾತಾ ಪಡೆಯಬೇಕಿದೆ. ಈ ಮಧ್ಯೆ ಬಿಬಿಎಂಪಿಯ ಈ ಆದೇಶಕ್ಕೆ ಆಸ್ತಿ ಮಾಲೀಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಗ್ರಾಮೀಣ ಭಾಗದ ಜನರಿಗೆ ಗುಡ್​ನ್ಯೂಸ್: ಇ ಖಾತಾ ನೀಡಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ

ಇದನ್ನೂ ಓದಿ
Image
50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್
Image
ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Image
ಬಾಕಿ ಉಳಿದಿದ್ದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನ ನೇಮಿಸಿದ ಬಿಜೆಪಿ
Image
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 5 ಲಕ್ಷ ಇ ಖಾತಾ ವಿತರಣೆಯಾಗಿದೆ. ಇದೀಗ 25 ಲಕ್ಷಕ್ಕಿಂತ ಹೆಚ್ಚು ಕರಡು ಇ-ಖಾತಾಗಳು ಆನ್​​ಲೈನ್​ನಲ್ಲಿ ಲಭ್ಯವಿವೆ. ಪ್ರತಿದಿನ ಸುಮಾರು 3,000 ಜನರು ಈ ಪ್ರಕ್ರಿಯೆ ನಡೆಸುತ್ತಿದ್ದಾರೆ. ಆದರೆ, ಇದೀಗ ಜುಲೈ 1 ರಿಂದಲೇ ಇ ಖಾತಾ ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ಆಸ್ತಿ ಮಾಲೀಕರಿಗೆ ಸಂಕಷ್ಟ ತಂದಿಟ್ಟಿದೆ. ಸದ್ಯ, ಇ ಖಾತಾ ಕಡ್ಡಾಯಕ್ಕೆ ದಿಢೀರ್ ಆದೇಶ ಹೊರಡಿಸಿರುವ ಪಾಲಿಕೆ, ಕಾಲಾವಧಿ ಮುಂದೂಡಿಕೆ ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 am, Thu, 12 June 25