ಬೆಂಗಳೂರಿನಲ್ಲಿ ಯುವತಿ ಮೇಲೆ ರೇಪ್: ಯುವತಿ ಪ್ರಾಣ ಉಳಿಸಿದ SOS ಬಟನ್, ಸ್ಥಳಕ್ಕೆ ಬಂದ ಸ್ನೇಹಿತ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ SOS ಬಟನ್ನಿಂದ ಸಿಕ್ಕ ಮೆಸೇಜ್, ಲೊಕೇಶನ್ ಆಧರಿಸಿ ಸಂತ್ರಸ್ಥೆಯ ಸ್ನೇಹಿತರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಸ್ನೇಹಿತ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು, ಆಗಸ್ಟ್.18: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಸ್ನೇಹಿತ ನೀಡಿದ ದೂರಿನ ಮೇಲೆ ಎಫ್ಐಆರ್ (FIR) ದಾಖಲಾಗಿದೆ. ದೂರಿನಲ್ಲಿ ಪ್ರಕರಣದ ಬಗ್ಗೆ ವಿವರಣೆ ನೀಡಲಾಗಿದೆ. ಸ್ನೇಹಿತರು ಘಟನಾ ಸ್ಥಳಕ್ಕೆ ಬಂದು ಯುವತಿಯ ರಕ್ಷಣೆ ಮಾಡಲಾಗಿದ್ದು ಓರ್ವ ಯುವಕ ಸ್ಥಳದಿಂದ ಪರಾರಿಯಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು SOS ಬಟನ್ನಿಂದಲೇ ಯುವತಿಯ ಪ್ರಾಣ ಉಳಿದಿದೆ.
ಸಂತ್ರಸ್ಥೆಯ ಸ್ನೇಹಿತ ನೀಡಿದ ದೂರಿನಲ್ಲೇನಿದೆ?
ತಡರಾತ್ರಿ 1 ಗಂಟೆ ಸುಮಾರಿಗೆ ಅತ್ಯಾಚಾರ ಯತ್ನ ನಡೆದಿದೆ. ಸಂತ್ರಸ್ಥೆ ಯುವತಿಯ ಫೋನ್ನಿಂದ ಎಮರ್ಜೆನ್ಸಿ ಕರೆ ಮತ್ತು ಲೊಕೇಶನ್ ಬಂದಿತ್ತು. ಮೊಬೈಲ್ಗೆ ಲೊಕೇಶನ್ ಬಂದ ತಕ್ಷಣ ನಾನು ವಾಪಾಸ್ ಕರೆ ಮಾಡಿದೆ. ಆದರೆ ಕರೆ ಸ್ವೀಕರಿಸಲಿಲ್ಲ. ಲೊಕೇಶನ್ ಸ್ಥಳವಾದ ಹೊಸೂರು ಸರ್ವಿಸ್ ರಸ್ತೆ ಬಳಿ ಬಂದ್ವಿ. ಗಿರಿಯಾಸ್ ಶೋರೂಮ್ ಹಿಂಭಾಗದ ಲಾರಿ ನಿಲ್ಲಿಸುವ ಜಾಗಕ್ಕೆ ಬಂದು ನೋಡಿದಾಗ ಯುವತಿ ಬೆತ್ತಲೆಯಾಗಿ ಲಾರಿಯ ಹಿಂಭಾಗದಲ್ಲಿ ಬಿದ್ದಿದ್ದಳು. ಆಕೆಯ ಮೇಲೆ ಒಂದು ರೆಡ್ ಜಾಕೆಟ್ ಮಾತ್ರ ಇತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ರೇಪ್: ಆರೋಪಿ ಸುಳಿವು ಪತ್ತೆ, ಬಂಧನಕ್ಕೆ 40 ಜನರ ತಂಡ ರಚನೆ
ಈ ವೇಳೆ ದೂರುದಾರ ಸ್ನೇಹಿತ ತಮ್ಮ ಬಟ್ಟೆಯಿಂದ ಆಕೆಯ ದೇಹ ಮುಚ್ಚಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಸ್ನೇಹಿತ ಕೂಡ ಮೊಬೈಲ್ ನಿಂದ ಹೋಗಿದ್ದ ಮೆಸೆಜ್ ಆಧಾರದ ಮೇಲೆ ಸ್ಥಳಕ್ಕೆ ಬಂದಿದ್ದ. ಇಬ್ಬರು ಸೇರಿಕೊಂಡು ಕಾರ್ ನ ಶೀಟ್ ಕವರ್ ನಿಂದ ಆಕೆಯ ದೇಹವನ್ನು ಮುಚ್ಚಿಕೊಂಡು ಕಾರಿನಲ್ಲಿ ಮಲಗಿಸಿದ್ದಾರೆ. ಅಷ್ಟರಲ್ಲಿ, ಸ್ಥಳದಲ್ಲಿ ಒಬ್ಬ ಅಪರಿಚಿತ ಯುವಕ ಕೇವಲ ಪ್ಯಾಂಟ್ನಲ್ಲಿ ನಿಂತಿದ್ದ. ಗಾಬರಿಯಲಿದ್ದ ಆತನ ಮುಖಕ್ಕೆ ಪರಚಿರುವಂತಹ ಗಾಯಗಳಾಗಿತ್ತು. ದೂರುದಾರ ಆತನಿಗೆ ಹಿಡಿದುಕೊಳ್ಳಲು ಹೋದಾಗ ಆತನು ಸ್ಥಳದಿಂದ ಓಡಿ ಹೋಗಿದ್ದಾನೆ. ಕೂಡಲೇ ದೂರುದಾರ ಆಸ್ವಸ್ಥಗೊಂಡಿದ್ದ ಯುವತಿಯನ್ನ ಕಾರ್ನಲ್ಲಿ ಬೊಮ್ಮಸಂದ್ರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರ್ನಲ್ಲೇ ಯುವತಿಗೆ ಘಟನೆ ಬಗ್ಗೆ ಕೇಳಿದ್ದು ಅಪರಿಚಿತ ಆಸಾಮಿಯು ಅತ್ಯಾಚಾರ ಮಾಡಲು ಯತ್ನಿಸಿರೋದಾಗಿ ಯುವತಿ ಹೇಳಿದ್ದಾಳೆ. ಘಟನೆ ಬಗ್ಗೆ ದೂರುದಾರ ಆಕೆಯ ತಂದೆ-ತಾಯಿಗೆ ವಿಷಯ ತಿಳಿಸಿದ್ದಾನೆ.
ಬೆಂಗಳೂರಿನಲ್ಲಿ ರೇಪ್ ಕೇಸ್: ಯುವತಿ ಪ್ರಾಣ ಉಳಿಸಿದ SOS ಬಟನ್
ಇನ್ನು ಮತ್ತೊಂದೆಡೆ SOS ಬಟನ್ ಯುವತಿಯ ಪ್ರಾಣ ಉಳಿಸಿದೆ. ಮೊಬೈಲ್ನಲ್ಲಿ ಸ್ವಿಚ್ ಆಫ್ ಬಟನ್ ಪ್ರೆಸ್ ಮಾಡಿದಾಗ SOS ಆಪ್ಷನ್ ಕಾಣಲಿದೆ. ಅದಕ್ಕೆ ಎಮೆರ್ಜೆನ್ಸಿ ನಂಬರ್ ಆ್ಯಡ್ ಮಾಡಬಹುದು. ಅದನ್ನ ಪ್ರೆಸ್ ಮಾಡಿದಾಗ ಆ್ಯಡ್ ಮಾಡಿದ ನಂಬರ್ ಗೆ ನಿರಂತರ ಕರೆ ಹಾಗೂ ಲೊಕೇಶನ್ ಶೇರ್ ಆಗುತ್ತೆ. ಯುವತಿ ತನ್ನ ಮೊಬೈಲ್ನ SOSನಲ್ಲಿ ತಂದೆ ಹಾಗೂ ಸ್ನೇಹಿತರ ನಂಬರ್ ಆ್ಯಡ್ ಮಾಡಿದ್ದಳು. ತಕ್ಷಣ ಸ್ನೇಹಿತರಿಗೆ ಕರೆ ಹೋಗಿದೆ. ಲೊಕೇಶನ್ ಆಧರಿಸಿ ಬಂದು ಸ್ನೇಹಿತರು ಯುವತಿಯ ರಕ್ಷಣೆ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ