AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಮಗ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಪೋಷಕರು ತಾವು ಕಂಡ ಕನಸು ನನಸಾಗದಾಗ ಆ ಕನಸನ್ನ ತನ್ನ ಮಕ್ಕಳ ಮೂಲಕ ಸಾಕಾರ ಮಾಡಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಮಕ್ಕಳ ಮೇಲೆ ಭರವಸೆಯ ಗೋಪುರವನ್ನೆ ಕಟ್ಟಿಕೊಂಡಿರುತ್ತಾರೆ. ಆದರೆ ಮಕ್ಕಳ ಹುಡುಗಾಟಕ್ಕೆ ಹೆತ್ತವರ ಕನಸೆಲ್ಲ ಸತ್ತು ಹೋಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಬೆಂಗಳೂರು: ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಮಗ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಮೃತ ದರ್ಶನ್​
ಕಿರಣ್ ಹನುಮಂತ್​ ಮಾದಾರ್
|

Updated on: Mar 18, 2023 | 1:40 PM

Share

ಬೆಂಗಳೂರು: ಬೃಹತ್ ಕೆರೆ ಸುತ್ತಲೂ ನಿಂತಿರುವ ಜನರು, ಕೆರೆಯ ಬದಿಯಲ್ಲಿರುವ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವಾಹನಗಳು, ಕೆರೆಯೊಳಗೆ ಸುಮಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೇಸತ್ತಿರುವ ಸಿಬ್ಬಂದಿಗಳು, ಕೊನೆಗೂ ನೀರಿನಾಳದಲ್ಲಿ ಪತ್ತೆಯಾದ ವಿಧ್ಯಾರ್ಥಿಯೋರ್ವನ ಮೃತದೇಹ, ಮೃತ ದೇಹ ಕಂಡ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಕೆರೆಯಲ್ಲಿ. ಹೌದು ಬೆಂಗಳೂರಿನ ಲಗ್ಗೆರಿ ನಿವಾಸಿಯಾದ ದರ್ಶನ್ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡಿದ್ದಾನೆ. ಇನ್ನು ದರ್ಶನ್ ತಾಯಿಯ ತಂದೆಗೆ ಹುಷಾರಿಲ್ಲದ ಕಾರಣ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೆಸಾವೆಗೆ ಹೋಗಿರುತ್ತಾರೆ. ಈ ವೇಳೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ದರ್ಶನ್​ ಈಜು ಬಾರದೆ ನೀರಿನಾಳಕ್ಕೆ ಮುಳುಗಿ ಸಾವನ್ನಪ್ಪಿದ್ದಾನೆ.

ಇನ್ನು ಮುಂಜಾನೆ ಹತ್ತುವರೆ ಸುಮಾರಿಗೆ ಘಟನೆ ನಡೆದಿದ್ದು ಮಾಹಿತಿ ತಿಳಿಯುತ್ತಿದ್ದಂತೆ 11 ಗಂಟೆ ಸುಮಾರಿಗೆ ಸ್ಥಳಕ್ಕೆ ದೌಡಾಯಿಸಿದ ನೆಲಮಂಗಲ ಅಗ್ನಿಶಾಮಕ ಹಾಗೂ ಪೀಣ್ಯದ ತುರ್ತು ಸೇವೆಯವರು ನಾಲ್ಕು ಗಂಟೆಗೂ ಅಧಿಕ ಕಾಲ ಜಂಟಿ ಕಾರ್ಯಾಚರಣೆ ಮಾಡಿದರೂ ಸಹ ಮೃತ ದೇಹ ಪತ್ತೆ ಹಚ್ಚುವುದು ಅಗ್ನಿಶಾಮಕ ಹಾಗೂ ತುರ್ತು ಸೇವೆ ಸಿಬ್ಬಂದಿಗಳಿಗೆ ಹರಸಾಹಸವಾಗಿತ್ತು. ಮೂರ್ನಾಲ್ಕು ಭಾರಿ ಮೃತ ದೇಹದ ಸುಳಿವು ಸಿಕ್ಕರು ಸಹ ತಾಂತ್ರಿಕ ದೋಷ ಹಾಗೂ ಸೂಕ್ತ ಸಲಕರಣೆಗಳ‌ ಅಲಭ್ಯತೆ ಹಿನ್ನೆಲೆ ಮೃತದೇಹದ ಪತ್ತೆ ತಡವಾಗಿದೆ.‌ ತಂತ್ರಜ್ಞಾನ ಕಡಿಮೆ ಇರುವುದರಿಂದ ಈ ಸಮಸ್ಯೆ ಎದುರಾಗುತ್ತದೆ ಎಂದು ಖುದ್ದು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವು

ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯನಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಸೂಕ್ತ ಸವಲತ್ತು ನೀಡಬೇಕಿದೆ. ಒಟ್ಟಿನಲ್ಲಿ‌ ಬದುಕಿ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನ ಕಳೆದುಕೊಂಡ ಕುಟುಂಬ ಕಣ್ಣಿರಿನಲ್ಲಿ‌ ಕೈ ತೊಳೆಯುವಂತಾಗಿದ್ದು ದುರಾದೃಷ್ಟ.

ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ