ಕ್ರಿಕೆಟ್ ಅಭಿಮಾನಿಗಳಿಗೆ ನಮ್ಮ ಮೆಟ್ರೋದಿಂದ ಭರ್ಜರಿ ಗುಡ್ ನ್ಯೂಸ್: ಮಧ್ಯರಾತ್ರಿವರೆಗೂ ಮೆಟ್ರೋ ಸಂಚಾರ ವಿಸ್ತರಣೆ
ಬೆಂಗಳೂರಿನಲ್ಲಿ ನಡೆಯಲಿರುವ ಭಾರತ-ವೆಸ್ಟ್ ಇಂಡೀಸ್ T20 ಕ್ರಿಕೆಟ್ ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ' ರೈಲು ಸೇವೆಗಳ ಸಮಯವನ್ನು ವಿಸ್ತರಿಸಿದೆ. ಪಂದ್ಯ ಮುಗಿದ ಬಳಿಕ ಕೊನೆಯ ರೈಲುಗಳು ಮಧ್ಯರಾತ್ರಿ 1:15ರ ವರೆಗೆ ಲಭ್ಯವಿರಲಿವೆ. ಟೋಕನ್ ಸರತಿ ತಪ್ಪಿಸಲು, T-20 ಪಂದ್ಯದ ಟಿಕೆಟ್ಗಳಲ್ಲೇ ವಿಶೇಷ QR ಕೋಡ್ ಅಳವಡಿಸಲಾಗಿದ್ದು, ಇದು ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಿದೆ.

ಮುಖ್ಯಾಂಶಗಳು
- ಕ್ರೀಡಾಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ 'ನಮ್ಮ ಮೆಟ್ರೋ' ರೈಲು ಸೇವೆ
- ಬೆಂಗಳೂರು ನಮ್ಮ ಮೆಟ್ರೋ ನಿಗಮ ಮಹತ್ವದ ಆದೇಶ
- ಕಾಲ್ತುಳಿತ ದುರಂತದ ಬಳಿಕ 2000ಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ
ಬೆಂಗಳೂರು, ಅ.16: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ರೋಚಕ T20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಿ ಮನೆಗೆ ಮರಳುವ ಕ್ರೀಡಾಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ‘ನಮ್ಮ ಮೆಟ್ರೋ’ ರೈಲು ಸೇವೆಗಳ ಸಮಯವನ್ನು ವಿಸ್ತರಿಸಿ ಬೆಂಗಳೂರು ನಮ್ಮ ಮೆಟ್ರೋ ನಿಗಮ ಮಹತ್ವದ ಆದೇಶ ಹೊರಡಿಸಿದೆ.
ಮೆಟ್ರೋ ರೈಲು ಸೇವೆಗಳ ವಿಸ್ತೃತ ವೇಳಾಪಟ್ಟಿ:
ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನಾಳೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮರುದಿನ ಮುಂಜಾನೆ 01:15 ಗಂಟೆಯವರೆಗೆ ವಿಸ್ತರಿಸಲಾಗಿದೆ. ವಿವಿಧ ಪ್ರಮುಖ ಮಾರ್ಗಗಳ ಕೊನೆಯ ರೈಲು ಸಮಯದ ವಿವರ ಇಲ್ಲಿದೆ.
ವೈಟ್ಫೀಲ್ಡ್ (ಕಾಡುಗೋಡಿ): ಮಧ್ಯರಾತ್ರಿ 12:00 ಗಂಟೆಗೆ ಕೊನೆಯ ರೈಲು ಹೊರಡಲಿದೆ.
ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಮಾದವಾರ: ಮರುದಿನ ಮುಂಜಾನೆ 12:15 ಗಂಟೆಗೆ ಕೊನೆಯ ರೈಲು ಸಂಚಾರ ಮಾಡಲಿದೆ.
ಬೊಮ್ಮಸಂದ್ರ: ಮಧ್ಯರಾತ್ರಿ 12:00 ಗಂಟೆಗೆ ಕೊನೆಯ ರೈಲು ಇರಲಿದೆ.
ಆರ್.ವಿ. ರಸ್ತೆ (RV Road): ಮರುದಿನ ಮುಂಜಾನೆ 01:30 ಗಂಟೆಗೆ ಕೊನೆಯ ರೈಲು ಸಂಚಾರ ಮಾಡಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ಮೆಜೆಸ್ಟಿಕ್ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಹೊರಡುವ ಕೊನೆಯ ರೈಲು ಮರುದಿನ ಮುಂಜಾನೆ 1:00 ಗಂಟೆಗೆ ಹೊರಡಲಿದೆ.
ಇದನ್ನೂ ಓದಿ:ಅ.16ರಂದು ಬೆಂಗಳೂರಿನಲ್ಲಿ ಭಾರತ-ವೆಸ್ಟ್ ಇಂಡೀಸ್ ವ್ಯಾಚ್: ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಪಾಡು, ಪಾರ್ಕಿಂಗ್ ಬ್ಯಾನ್
ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ QR ಕೋಡ್ ವ್ಯವಸ್ಥೆ:
ಪಂದ್ಯವನ್ನು ವೀಕ್ಷಿಸಿ ವಾಪಸ್ಸಾಗುವಾಗ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಯಾಣವನ್ನು ಸುಗಮಗೊಳಿಸಲಾಗಿದೆ. ಪ್ರಯಾಣಿಕರು ಎರಡು-ಮಾರ್ಗದ ಪ್ರಯಾಣಕ್ಕಾಗಿ ಡಿಜಿಟಲ್ T-20 ಪಂದ್ಯದ ಟಿಕೆಟ್ಗಳಲ್ಲೇ ‘ನಮ್ಮ ಮೆಟ್ರೋ QR ಕೋಡ್’ ಅನ್ನು ಅಳವಡಿಸಲಾಗಿದೆ. ಇದರ ಮೂಲಕ ಅಭಿಮಾನಿಗಳು ಸುಲಭವಾಗಿ ಮೆಟ್ರೋ ಪ್ರಯಾಣ ಮಾಡಬಹುದು. ಕ್ರೀಡಾಂಗಣದಲ್ಲಿ ಪ್ರವೇಶ/ನಿರ್ಗಮನ ಗೇಟ್ಗಳ ಆಧಾರದ ಮೇಲೆ ನಿಗದಿತ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ BMRCL ಕೋರಿದೆ. ಕಬ್ಬನ್ ರಸ್ತೆ ಮೂಲಕವಿರುವ ಗೇಟ್ಗಳಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಹಾಗೂ ಲಿಂಕ್ ರಸ್ತೆ ಮೂಲಕವಿರುವ ಗೇಟ್ಗಳಿಗೆ ಸಮೀಪವಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸಲು ಸಲಹೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ನಿಲ್ದಾಣದ ಪ್ರವೇಶ ಬಿಂದುಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು BMRCL ಕಾಯ್ದುಕೊಂಡಿದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
Namma Metro Extenstion for T20 Bangalore match. /ಬೆಂಗಳೂರಿನಲ್ಲಿ T20 ಕ್ರಿಕೆಟ್ ಪಂದ್ಯಕ್ಕಾಗಿ ಮೆಟ್ರೋ ಸೇವೆಗಳ ವಿಸ್ತರಣೆ. https://t.co/4bTXunyeJm
— ನಮ್ಮ ಮೆಟ್ರೋ (@OfficialBMRCL) October 16, 2026
ಕಾಲ್ತುಳಿತ ದುರಂತದ ಬಳಿಕ 2000ಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ
ಇನ್ನು ಹಿಂದೆ ನಡೆದ ಕಾಲ್ತುಳಿತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ, ಈ ಬಾರಿ ಪ್ರೇಕ್ಷಕರ ನಿಯಂತ್ರಣಕ್ಕೆ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಪಿಎಲ್ ಪಂದ್ಯಗಳ ಮಾದರಿಯಲ್ಲೇ ಕ್ರೀಡಾಂಗಣದ ಸುತ್ತಮುತ್ತ ಅತ್ಯಂತ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಯಾವುದೇ ಅಡಚಣೆ ಉಂಟಾಗದಂತೆ 2000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿ ಹಾಗೂ ಜನಸಂದಣಿ ನಿರ್ವಹಣೆಗಾಗಿ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಉಭಯ ಕ್ರಿಕೆಟ್ ತಂಡಗಳ ಆಟಗಾರರಿಗೂ ಕೂಡ ಕಟ್ಟುನಿಟ್ಟಿನ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ.
ಸಾಮಾನ್ಯವಾಗಿ ಕೇಳಲಾಗಿರುವ ಪ್ರಶ್ನೆಗಳು:
ಪ್ರಶ್ನೆ: T20 ಕ್ರಿಕೆಟ್ ಪಂದ್ಯಾವಳಿ ಯಾವಾಗ ಮತ್ತು ಎಲ್ಲಿ?
ಉತ್ತರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ
ಪ್ರಶ್ನೆ: ನಮ್ಮ ಮೆಟ್ರೋ’ ರೈಲು ಸೇವೆ ಎಷ್ಟು ಗಂಟೆಯವರೆಗೆ ವಿಸ್ತಾರಣೆ ?
ಉತ್ತರ: ನಾಳೆ ರಾತ್ರಿ 11:00 ಗಂಟೆಯಿಂದ ಮರುದಿನ ಮುಂಜಾನೆ 01:15 ಗಂಟೆಯವರೆಗೆ
ಪ್ರಶ್ನೆ: ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಏನು?
ಉತ್ತರ: ನಮ್ಮ ಮೆಟ್ರೋ QR ಕೋಡ್’ ಅನ್ನು ಅಳವಡಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Fri, 16 October 26




