AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಟಿಸಿಎಸ್​ ವರ್ಲ್ಡ್ ಮ್ಯಾರಥಾನ್: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧ

ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ನಡೆಯುವ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್‌ನಿಂದಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ವಾಹನ ನಿಲುಗಡೆಗೆ ನಿರ್ಬಂಧಿತ ಸ್ಥಳಗಳು ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಮಾರು 30,000 ಜನರು ಈ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆ ಟಿಸಿಎಸ್​ ವರ್ಲ್ಡ್ ಮ್ಯಾರಥಾನ್: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Apr 26, 2025 | 10:47 AM

Share

ಬೆಂಗಳೂರು, ಏಪ್ರಿಲ್​ 26: ನಾಳೆ (ಏಪ್ರಿಲ್​ 27)ರಂದು ಬೆಳಗ್ಗೆ 05:00 ಗಂಟೆಯಿಂದ 10 ಗಂಟೆಯವರೆಗೆ ಟಿಸಿಎಸ್​ ವರ್ಲ್ಡ್ 10ಕೆ ಮ್ಯಾರಥಾನ್​​ (tcs marathon) ಆಯೋಜಿಸಲಾಗಿದೆ. ಹಾಗಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ. ಸದರಿ ಮ್ಯಾರಥಾನ್‌ಗೆ ಸುಮಾರು 30 ಸಾವಿರ ಜನರು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ ಸಲುವಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ (traffic advisory) ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರ್ಯಾಯ ಮಾರ್ಗಗಳು ಈ ಕೆಳಗೆ ನೀಡಲಾಗಿದೆ.

ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು

  • ವಾರ್ ಮೆಮೋರಿಯಲ್ ಜಂಕ್ಷನ್
  • ಅಣ್ಣಸ್ವಾಮಿ ಮುದಲಿಯಾರ್ ರಸ್ತೆ
  • ಸೆಂಟ್ ಜಾನ್ಸ್ ರಸ್ತೆ
  • ಸೆಂಟ್ ಜಾನ್ಸ್ ಚರ್ಚ್ ರಸ್ತೆ
  • ಅಸ್ಸಯೇ ರಸ್ತೆ, ವೀರ್ಲ್ಸ ರಸ್ತೆ
  • ಅಜಂತಾ ರಸ್ತೆ
  • ಕಾಮರಾಜರಸ್ತೆ
  • ಕಸ್ತೂರಿಬಾ ರಸ್ತೆ (ಹಡ್ಗನ್ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ)

ಇದನ್ನೂ ಓದಿ: ಆಟೋ, ಕ್ಯಾಬ್ ಚಾಲಕರಿಗೆ ಗುಡ್​ ​ನ್ಯೂಸ್: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಲ್ಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಆದೇಶ

  • ಎಂ.ಜಿ.ರಸ್ತೆ (ಕ್ಲೀನ್ಸ್ ವೃತ್ತದಿಂದ ವೆಬ್ ಜಂಕ್ಷನ್ ವರೆಗೆ ಎರಡೂ ಬದಿ)
  • ಡಿಕನ್ಸನ್ ರಸ್ತೆ (ವೆಬ್ ಜಂಕ್ಷನ್ ನಿಂದ ಹಲಸೂರು ರಸ್ತೆ ವರೆಗೆ)
  • ಕಬ್ಬನ್‌ರಸ್ತೆ (ಮಣಿಪಾಲ್ ಸೆಂಟರ್ ನಿಂದ ಸಿ.ಟಿ.ಓ. ವೃತ್ತದ ವರೆಗೆ)
  • ಸೆಂಟ್ರಲ್ ಸ್ಟ್ರೀಟ್
  • ಕ್ವೀನ್‌ ರಸ್ತೆ (ಬಾಳೇಕುಂದ್ರಿ ವೃತ್ತ ದಿಂದ ಕ್ಲೀನ್ಸ್ ವೃತ್ತದ ವರೆಗೆ)
  • ರಾಜಭವನ ರಸ್ತೆ (ಸಿ.ಟಿ.ಓ. ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ)
  • ಇನ್ಫೆಂಟ್ರಿ ರಸ್ತೆ (ರಾಜಭವನ ವೃತ್ತದಿಂದ ಟ್ರಾಫಿಕ್ ಹೆಡ್ ಕ್ವಾಟ್ರರ್ಸ್ ವೃತ್ತದವರೆಗೆ)
  • ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ (ಕೆ ಆರ್ ಸರ್ಕಲ್‌ನಿಂದ ಬಾಳೇಕುಂದ್ರಿ ವೃತ್ತದ ವರೆಗೆ)
  • ಕಬ್ಬನ್ ಉದ್ಯಾನವನದ ಒಳಭಾಗದ, ಸುತ್ತಮುತ್ತಲಿನ ರಸ್ತೆಗಳು
  • ವೈದೇಹಿ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ವೃತ್ತದ ವರೆಗೆ
  • ಆರ್.ಆರ್.ಎಂ.ಆರ್. ರಸ್ತೆ, ರಿಚ್ಚಂಡ್ ಜಂಕ್ಷನ್‌ನಿಂದ ಹಡ್ಸನ್ ವೃತ್ತದ ವರೆಗೆ

ವಾಹನ ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು: (ಬೆಳಗ್ಗೆ 05:00 ರಿಂದ 10:00 ಗಂಟೆಯವರೆಗೆ)

  • ನಾಗಾ ಜಂಕ್ಷನ್‌ನಿಂದ ಶ್ರೀ ಸರ್ಕಲ್ ಕಡೆಗೆ ಸೆಂಟ್ ಜಾನ್ಸ್ ರಸ್ತೆ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳು.
  • ವಾರ್ ಮೆಮೋರಿಯಲ್ ಜಂಕ್ಷನ್‌ನಿಂದ ಆರ್.ಬಿ.ಐ ಸರ್ಕಲ್ ಕಡೆಗೆ ಅಣ್ಣಸ್ವಾಮಿ ಮುದಲಿಯಾರ್ ರಸ್ತೆ ಮೂಲಕ ಸಂಚರಿಸುವ ಎಲ್ಲಾ ರೀತಿಯ ವಾಹನಗಳು.
  • ಕಬ್ಬನ್ ರಸ್ತೆ ಸಿ.ಟಿ.ಓ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್ ಮತ್ತು ಮಣಿಪಾಲ್ ಸೆಂಟರ್‌ನಿಂದ ಸಿ.ಟಿ.ಓ ಜಂಕ್ಷನ್‌ವರೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು.
  • ಸೆಂಟ್ ಜಾನ್ಸ್ ರಸ್ತೆ (ಡಿಕನ್‌ಸನ್ ರಸ್ತೆಯಿಂದ ವೀರಪಳ್ಳಿ ಸ್ಟ್ರೀಟ್‌ವರೆಗೆ)
  • ಕಾಮರಾಜ ರಸ್ತೆ (ಕಬ್ಬನ್ ರಸ್ತೆಯಿಂದ ಡಿಕನ್‌ಸನ್ ಜಂಕ್ಷನ್‌ವರೆಗೆ)
  • ಡಿಕನ್‌ಸನ್ ರಸ್ತೆ, ವೆಬ್ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್ ಜಂಕ್ಷನ್ ಮತ್ತು ಹಲಸೂರು ರಸ್ತೆ ದೋಭಿ ಘಾಟ್, ಡಿಕನ್‌ಸನ್ ಜಂಕ್ಷನ್‌ ವರೆಗೆ
  • ಭಾಸ್ಕರನ್ ರಸ್ತೆ ಕಾಮಧೇನು ಜಂಕ್ಷನ್‌ನಿಂದ ಗುರುದ್ವಾರ ಜಂಕ್ಷನ್ ಕೆನ್ಸಿಂಗ್ಟನ್ ಜಂಕ್ಷನ್‌ವರೆಗೆ
  • ಹಲಸೂರು ರಸ್ತೆ ಮತ್ತು ಡಿಕನ್‌ಸನ್ ರಸ್ತೆ ಜಂಕ್ಷನ್‌ನಿಂದ ಬೇಗಂ ಮಹಲ್ ಜಂಕ್ಷನ್ ವರಗೆ
  • ಗಂಗಾಧರ ಚೆಟ್ಟಿ ರಸ್ತೆ ಗುರುದ್ವಾರ ಜಂಕ್ಷನ್‌ನಿಂದ ದೋಭಿ ಘಾಟ್ ಜಂಕ್ಷನ್‌ವರೆಗೆ
  • ಕಸ್ತೂರಿ ಬಾ ರಸ್ತೆ (ಹಡ್ಸನ್ ಜಂಕ್ಷನ್ ನಿಂದ ಸಿದ್ದಲಿಂಗಯ್ಯ ಜಂಕ್ಷನ್ ವರೆಗೆ)
  • ಸಿದ್ದಲಿಂಗಯ್ಯ ವೃತ್ತದಿಂದ ಕ್ವಿನ್ಸ್ ವೃತ್ತದವರೆಗೆ (ಪಶ್ಚಿಮ ದಿಕ್ಕಿನಲ್ಲಿ)
  • ಕ್ವಿನ್ಸ್ ರಸ್ತೆಯ ಎರಡೂ ಬದಿಯಲ್ಲಿ (ಕ್ವಿನ್ಸ್ ವೃತ್ತದಿಂದ ಸಿ.ಟಿ.ಓ. ವೃತ್ತದವರೆಗೆ)
  • ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ (ಪೂರ್ವ ದಿಕ್ಕು), ಕಬ್ಬನ್ ರಸ್ತೆ (ದಕ್ಷಿಣ ದಿಕ್ಕು), ಎಂ.ಜಿ. ರಸ್ತೆ (ಉತ್ತರ ದಿಕ್ಕು) ಮತ್ತು ಕಬ್ಬನ್ ಪಾರ್ಕ್‌ ಒಳಭಾಗದಲ್ಲಿ ನಿಷೇಧಿಸಲಾಗಿದೆ.

ಭಾರೀ ವಾಹನಗಳ ಮಾರ್ಗ ಬದಲಾವಣೆ

  • ಮೈಸೂರು ರಸ್ತೆಯಿಂದ ಎಂಜಿ ರಸ್ತೆ, ಹಳೆ ಮದ್ರಾಸ್ ರಸ್ತೆ ಕಡೆಗೆ ಪ್ರವೇಶಿಸುವ ಟೆಂಪೋ, ಸರಕು ಸಾಗಾಣಿಕಾ ವಾಹನಗಳು ಹಾಗೂ ಇತರೆ ವಾಹನಗಳು ಹಡ್ಸನ್ ವೃತ್ತದಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ದೇವಾಂಗ ರಸ್ತೆ-ದೇವಾಂಗ ಜಂಕ್ಷನ್ – ಮಿಷನ್‌ ರಸ್ತೆ, ರಿಚ್ ಮಂಡ್ ಮೇಲು ಸೇತುವೆ, ರೆಸಿಡೆನ್ಸಿ ರಸ್ತೆಯಲ್ಲಿ, ಕ್ಯಾಷ್ ಫಾರ್ಮಸಿ, ಅಪೇರಾ ಜಂಕ್ಷನ್, ಮೊಯೋಹಾಲ್, ಕಮೀಷನರೇಟ್ ರಸ್ತೆ, ಗರುಡಾ ಮಾಲ್, ಹಾಸ್ಮಟ್ ಆಸ್ಪತ್ರೆ ಮೂಲಕ ಮುಂದೆ ಹೋಗಬಹುದಾಗಿದೆ.

ಇದನ್ನೂ ಓದಿ: ಅಗ್ರಿಗೇಟರ್ ಕಂಪನಿಗಳಿಂದ ದುಪ್ಪಟ್ಟು ಹಣ ವಸೂಲಿ: ಪ್ರಯಾಣಿಕರ ಆಕ್ರೋಶ

ಇದನ್ನೂ ಓದಿ
Image
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಲ್ಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಆದೇಶ
Image
ಮೈಸೂರಿನ ಉದಯಗಿರಿ ಗಲಭೆಯ ಸೂತ್ರಧಾರಿ ಮೌಲ್ವಿಗೆ ಜಾಮೀನು!
Image
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
Image
ಬೆಸ್ಕಾಂಗೆ ಹೈಕೋರ್ಟ್​​ ತರಾಟೆ​: ಸ್ಮಾರ್ಟ್ ಮೀಟರ್​ ಶುಲ್ಕಕ್ಕೆ ತಡೆ!
  • ಬಳ್ಳಾರಿ ರಸ್ತೆ ಮತ್ತು ಮೇಖ್ರಿ ರಸ್ತೆ ಕಡೆಯಿಂದ ನಗರಕ್ಕೆ ಪ್ರವೇಶಿಸುವ ಟೆಂಪೋ, ಸರಕು ಸಾಗಾಣಿಕಾ ವಾಹನಗಳು ಹಾಗೂ ಇತರೆ ವಾಹನಗಳು ಹಳೆ ಉದಯ ಟಿವಿ ಕಛೇರಿ ಜಂಕ್ಷನ್ ಮೂಲಕ ನೃಪತುಂಗ ರಸ್ತೆಯನ್ನು ತಲುಪಿ ಹಡ್ಸನ್ ರಸ್ತೆ ಮೂಲಕ ಮುಂದೆ ಹೋಗಬಹುದಾಗಿದೆ.
  • ಹಳೆ ಮದ್ರಾಸ್ ರಸ್ತೆ, ವರ್ತೂರು ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ವಾಹನಗಳು ಸುರಂಜನ್ ದಾಸ್‌ ರಸ್ತೆ ಮೂಲಕ ಹಳೇ ಏರ್​ಪೋರ್ಟ್ ರಸ್ತೆ ಸೇರಿ ಮುಂದಕ್ಕೆ ಸಾಗಬಹುದಾಗಿದೆ. ಅದೇ ರೀತಿ ಹಲಸೂರು ಕೆರೆ ಕಡೆಯಿಂದ ಸೆಂಟ್ ಜಾನ್ ರಸ್ತೆ ಮೂಲಕ ಕಂಟೋನ್‌ಮೆಂಟ್ ರೈಲ್ವೇ ನಿಲ್ದಾಣ, ಜಯಮಹಲ್ ರಸ್ತೆ ಮುಖಾಂತರ ಮೇಖ್ರಿ ವೃತ್ತ ತಲುಪಿ ಮುಂದೆ ಸಾಗಬಹುದಾಗಿದೆ.

ಕ್ಯಾಬ್‌ಗಳ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್ ಸ್ಥಳಗಳು

  • ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಒಪೆರಾ ಜಂಕ್ಷನ್ ವರೆಗೆ.(ಎಂ.ಜಿ ರಸ್ತೆ)
  • ಕಾವೇರಿ ಎಂಪೋರಿಯಂ ನಿಂದ ಮೆಯೋಹಾಲ್ ವರೆಗೆ.

ವಾಹನ ನಿಲುಗಡೆಗೆ ಸ್ಥಳಾವಕಾಶ

ಮ್ಯಾರಥಾನ್‌ನಲ್ಲಿ ಭಾಗವಹಿಸಲು ಬರುವವರ ವಾಹನಗಳನ್ನು ಯುಬಿ ಸಿಟಿ, ಫ್ರೀಡಂ ಪಾರ್ಕ್ ಎಲ್​ಎಲ್​ಸಿಪಿ ಪಾರ್ಕಿಂಗ್‌, ಗರುಡಾ ಮಾಲ್‌, ಎಂ.ಜಿ.ಲಿಡೋ ಮಾಲ್‌, ಎಜಿಸ್‌ ಜಂಕ್ಷನ್‌ ಮತ್ತು ಎಂ.ಎಸ್‌.ಬಿಲ್ಡಿಂಗ್‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:46 am, Sat, 26 April 25