AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಖಾಸಗಿ ಅಂಗಕ್ಕೆ ಪೊಲೀಸರಿಂದ ಹಲ್ಲೆ: ಟಾಯ್ಲೆಟ್​ಗೂ ಹೋಗಲಾಗದೆ ನರಕಯಾತನೆ

ಮಹಿಳೆಯೊಬ್ಬರ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿದ ಪರಿಣಾಮ ಬಹಿರ್ದೆಸೆಗೂ ಹೋಗಲಾಗದೆ ಒದ್ದಾಟ ನಡೆಸಿದ್ದು, ಬೆಂಗಳೂರಿನ ವರ್ತೂರು ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವಿಚಾರಣೆಗೆಂದು ಮಹಿಳೆ ಕರೆತಂದು ಖಾಸಗಿ ಅಂಗ, ಕೈಕಾಲು, ತಲೆಗೆ ಪೊಲೀಸರು ಮನಸೋಇಚ್ಛೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಸದ್ಯ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳೆಯ ಖಾಸಗಿ ಅಂಗಕ್ಕೆ ಪೊಲೀಸರಿಂದ ಹಲ್ಲೆ: ಟಾಯ್ಲೆಟ್​ಗೂ ಹೋಗಲಾಗದೆ ನರಕಯಾತನೆ
ಹಲ್ಲೆಗೊಳಗಾದ ಮಹಿಳೆ
ಶಿವಪ್ರಸಾದ್​ ಬಿ.
| Edited By: |

Updated on:Nov 03, 2025 | 3:26 PM

Share

ಬೆಂಗಳೂರು, ನವೆಂಬರ್​​ 03: ಖಾಸಗಿ ಅಂಗಕ್ಕೆ ಹಲ್ಲೆ ಪರಿಣಾಮ ಮಲ, ಮೂತ್ರ ವಿಸರ್ಜಿಸಲು ಆಗದೆ ಮಹಿಳೆ (woman) ನರಕಯಾತನೆ ಅನುಭವಿಸುವಂತಾಗಿದ್ದು, ಬೆಂಗಳೂರಿನ ವರ್ತೂರು ಪೊಲೀಸರ (police) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 34 ವರ್ಷದ ಸುಂದರಿ ಬಿಬಿ ಹಲ್ಲೆಗೊಳಗಾದ ಮಹಿಳೆ. ಬೌರಿಂಗ್ ಆಸ್ಪತ್ರೆಯ ಎಂಎಲ್​​ಸಿ ರಿಪೋರ್ಟ್​ನಲ್ಲಿ ಗಾಯದ ಭೀಕರತೆ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.

ನಡೆದದ್ದೇನು?

ಸುಂದರಿ ಬಿಬಿ ನಗರದ ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅವರು ಕೆಲಸ ಮಾಡುತ್ತಿದ್ದ ಫ್ಲ್ಯಾಟ್​ನಲ್ಲಿ ಅವರ ವಿರುದ್ದ ಕಳ್ಳತನ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ವರ್ತೂರು ಪೊಲೀಸರಿಗೆ ಮಹಿಳೆ ವಿರುದ್ಧ ದೂರು ಕೂಡ ನೀಡಲಾಗಿದೆ. ಹೀಗಾಗಿ ವಿಚಾರಣೆಗೆಂದು ಮಹಿಳೆ ಕರೆತಂದು ಪೊಲೀಸರು ಖಾಸಗಿ ಅಂಗ, ಕೈಕಾಲು ಮತ್ತು ತಲೆಗೆ ಮನಸೋಇಚ್ಛೆ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.

ಕಾರಟಗಿ ಪೊಲೀಸರು ಬೀದಿ ಬದಿ ವ್ಯಾಪಾರಿ ಮೇಲೆ ಕ್ರೌರ್ಯ

ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸರು ಬೀದಿ ಬದಿ ವ್ಯಾಪಾರಿ ಮೇಲೆ ಕ್ರೌರ್ಯ ಮೆರೆದಿದ್ದ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ದುರ್ಗೇಶ್ ಮೂಲತಃ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ನಿವಾಸಿ. ಇದೇ ದುರ್ಗೇಶ್ ಕಾರಟಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಮೇಲೆ ಗಂಭೀರ ಆರೋಪ ಮಾಡಿದ್ದರು. ಕುರಿ ಕಳ್ಳತನ ಕೇಸ್​​ನಲ್ಲಿ ದುರ್ಗೇಶ್​​ನನ್ನ ವಶಕ್ಕೆ ಪಡೆದು ಮನಸೋಇಚ್ಛೆ ಥಳಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಪೊಲೀಸರ ಟಾರ್ಚರ್​​ನಿಂದ ಆತ್ಮಹತ್ಯೆಗೆ ಯತ್ನಿಸಿದ ಮಗ: ಠಾಣೆಗೆ ನುಗ್ಗಿ ಪೊಲೀಸ​​ರ ಚಳಿಬಿಡಿಸಿದ ತಾಯಿ

ಕಾರಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಗಂಗಾಧರ, ಆನಂದ್ ಹಾಗೂ ಇನ್ನು ಕೆಲವರು ಸೇರಿ ಮೂರು ದಿನ ಕೂಡಿಟ್ಟು ಹಲ್ಲೆ ಮಾಡಿದ್ದಾರಂತೆ. ಅಲ್ಲದೆ ದುರ್ಗೇಶ್ ಬಳಿ ಸುಮಾರು 40 ಸಾವಿರ ರೂ. ಹಣ ವಸೂಲಿ ಮಾಡಿದ್ದರಂತೆ. ಎರಡು ತಿಂಗಳ ಬಳಿಕ ದುರ್ಗೇಶ್ ಪೊಲೀಸರ ಕ್ರೌರ್ಯವನ್ನ ಬಿಚ್ಚಿಟ್ಟಿದ್ದರು.

ಹಲ್ಲೆ ಮಾಡಿರುವ ವಿಷಯ ಯಾರಿಗೂ ಹೇಳದಂತೆ ಪೊಲೀಸರು ಧಮ್ಕಿ ಹಾಕಿದ್ದರಂತೆ. ಹೀಗಾಗಿ ಇಷ್ಟು ದಿನ ದುರ್ಗೇಶ್ ಸುಮ್ಮನಿದ್ದ. ಇದೀಗ ಪೊಲೀಸರ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಡಲು ನಿರ್ಧರಿಸಿದ್ದರು. ಅಲ್ಲದೆ ಪೊಲೀಸರ ಕಿರುಕುಳದಿಂದ ರೋಸಿಹೋಗಿದ್ದ ದುರ್ಗೇಶ್ ಆತ್ಮಹತ್ಯೆಗೂ ಮುಂದಾಗಿದ್ದರು ಎಂಬ ಶಾಕಿಂಗ್ ಮಾಹಿತಿಯನ್ನೂ ಅವರೇ ಬಾಯಿ ಬಿಟ್ಟಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:23 pm, Mon, 3 November 25

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ