ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಆಡಿಯೋ ಬಗೆಗಿನ ವಿಚಾರಣೆ ವೇಳೆ ಸುಮಾ ಸ್ಪೋಟಕ ಮಾಹಿತಿ

ಬಿಜೆಪಿ ಮುಖಂಡ ಅನಂತರಾಜು ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆ ನಿನ್ನೆ ಬ್ಯಾಡರಹಳ್ಳಿ ಪೊಲೀಸರು ಅನಂತರಾಜು ಪತ್ನಿ ಸುಮಾಳನ್ನು ವಿಚಾರಣೆ ಮಾಡಿದ್ದಾರೆ. ಆಡಿಯೋ ಹಾಗೂ ಅದರಲ್ಲಿ ಅಂಶಗಳ ಬಗ್ಗೆ ಸುಮಾ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಆಡಿಯೋ ಬಗೆಗಿನ ವಿಚಾರಣೆ ವೇಳೆ ಸುಮಾ ಸ್ಪೋಟಕ ಮಾಹಿತಿ
ಪತ್ನಿ ಸುಮಾ ಮತ್ತು ಅನಂತರಾಜು
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 29, 2022 | 7:59 AM

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಪತ್ನಿ ಸುಮಾಳನ್ನು ನಿನ್ನೆ ವಿಚಾರಣೆ ಮಾಡಿದ್ದಾರೆ. ಈ ಹಿಂದೆ ಲೀಕ್ ಆದ ಆಡಿಯೋ ಬಗೆಗಿನ ವಿಚಾರಣೆ ವೇಳೆ ಸುಮಾ ಸ್ಪೋಟಕ ಮಾಹಿತಿ ನೀಡಿದ್ದು, ಆ ಆಡಿಯೋ ನನ್ನದೆ ಎಂದಿದ್ದಾರೆ. ಆಡಿಯೋ ಹಾಗೂ ಅದರಲ್ಲಿನ ಅಂಶಗಳ ಬಗ್ಗೆ ಸುಮಾ ಸ್ಪಷ್ಟನೆ ನೀಡಿದ್ದು, ನನ್ನ ಸಂಸಾರವನ್ನ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ಅದಕ್ಕಾಗಿ ನಾನು ರೇಖಾ ಜೊತೆ ಮಾತನಾಡಿದ್ದೆ. ಆದರೆ ನನ್ನ ಗಂಡನನ್ನ ನಾನು ಹೊಡೆದಿಲ್ಲ. ಬೈದು ಬುದ್ದಿ ಹೇಳಿದ್ದೆ ಅಷ್ಟೇ. ಆದರೆ ಆಡಿಯೋ ಈ ರೀತಿ ವೈರಲ್ ಆಗಿದೆ. ನಾನು ರೇಖಾಗೆ ಭಯ ಹುಟ್ಟಿಸಲು ಆ ರೀತಿ ಮಾತನಾಡಿದ್ದೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ತುಳುನಾಡಿನ ಸಂಸ್ಕೃತಿ ಸಾರುವ ‘ವೀರ ಕಂಬಳ’ ಸಿನಿಮಾಗೆ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ

ನನ್ನ ಸಂಸಾರವನ್ನ ನಾನು ಉಳಿಸಕೊಳ್ಳಬೇಕಿತ್ತು. ಗಂಡನ ಮೇಲಿನ ಪ್ರೀತಿಗೆ ನಾನು ನನ್ನ ಪತಿ ಜತೆ ಗಲಾಟೆ ಮಾಡಿಕೊಂಡೆ. ರೇಖಾ ಸಹವಾಸ ಬೇಡ. ಮಕ್ಕಳ ಜತೆ ಒಟ್ಟಿಗೆ ಎಲ್ಲಾ ಆಗಿದ್ದನ್ನ ಮರೆತು ಜೀವನ ನಡೆಸೋಣ ಎಂದು ಹೇಳಿದ್ದೆ. ಗಂಡನ ಮೇಲಿನ ಪ್ರೀತಿಗೆ ನಾನು ನನ್ನ ಗಂಡನಿಗೆ ಬುದ್ದಿವಾದ ಹೇಳಿದೆ. ಬಳಿಕ ಅವರು ಬದಲಾಗಿ ನನ್ನ ಜೊತೆ ಚೆನ್ನಾಗೆ ಇದ್ದರು. ಫೋನ್ ಸಂಭಾಷಣೆ ಬಳಿಕದ ದಿನದಲ್ಲಿ ಹೆಚ್ಚು ಪತಿ ಸಮಯ ನನ್ನೊಂದಿಗೆ ಕಳೆದಿದ್ದಾರೆ. ನಾನು ಪತಿ ಹಲವು ಕಡೆ ಸುತ್ತಾಡಿದ್ದೇವೆ. ಅದಕ್ಕೆ ಸಂಬಂಧಿಸಿದ ಫೋಟಗಳನ್ನು ಸಹ ಪತ್ನಿ ಸುಮಾ ಪೊಲೀಸರ ಮುಂದೆ ಇಟ್ಟಿದ್ದಾಳೆ. ಫೋನ್ ಮಾತು ಕತೆ ಬಳಿಕ ಪತಿ ನನ್ನೊಂದಿಗೆ ಚೆನ್ನಾಗೆ ಇದ್ದರು. ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಅಂದುಕೊಂಡಿರಲಿಲ್ಲ. ರೇಖಾ ಹಣಕ್ಕಾಗಿ ನನ್ನ ಗಂಡನಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಪತಿ ನೆನೆದು ಠಾಣೆಯಲ್ಲಿ ಸುಮಾ ಭಾವುಕರಾದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಅದು ನನ್ನ ಗಂಡ ಬರೆದಿರುವುದು ಎಂದು ಬ್ಯಾಡರಹಳ್ಳಿ ಪೊಲೀಸರ ಮುಂದೆ ಸುಮಾ ಹೇಳಿಕೆ ನೀಡಿದ್ದಾರೆ. ಸದ್ಯ ಸುಮಾ ಸ್ಟೇಟ್ಮೆಂಟ್ ದಾಖಲಿಸಿ ಬ್ಯಾಡರಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಟ್ಸ್​​ ಆ್ಯಪ್ ಚಾಟಿಂಗ್​ನಲ್ಲಿ ಸೆಟಲ್ಮೆಂಟ್ ಪ್ರಸ್ತಾಪ

ಸದ್ಯ ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜತೆಗೆ ನಡೆಸಿದ್ದಾರೆನ್ನಲಾದ ವೈರಲ್ ಆದ ವಾಟ್ಸ್​​ಆ್ಯಪ್ ಚಾಟಿಂಗ್​ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯೋದಕ್ಕು ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡತಿಗೆ ಕಳುಹಿಸಿದರೆ, ಅವಳೇ ಅನಂತರಾಜುನ ಸಾಯಿಸುತ್ತಾಳೆ. ಅಷ್ಟೊಂದು ಅಶ್ಲೀಲವಾಗಿದೆ ಆ ವಿಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜುನ ಮೇ 15 ರ ಒಳಗೆ ನನ್ನ ಭೇಟಿ ಮಾಡಬೇಕು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada