AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಮಾದರಿಯ ರೂಲ್ಸ್​ಗೆ ಮುಂದಾದ ಬಿಎಂಟಿಸಿ: ಬಸ್​​ನಲ್ಲಿ ಲೌಡ್ ಸ್ಪೀಕರ್ ಹಾಕಿದ್ರೆ ಕೆಳಗಿಳಿಸುವುದು ಗ್ಯಾರಂಟಿ

ಬಸ್‌ಗಳಲ್ಲಿ ಲೌಡ್‌ಸ್ಪೀಕರ್ ಬಳಕೆಗೆ ಬ್ರೇಕ್ ಹಾಕಲು ಬಿಎಂಟಿಸಿ ನಿಗಮ ಮುಂದಾಗಿದೆ. ಆ ಮೂಲಕ ನಮ್ಮ ಮೆಟ್ರೋ ಮಾದರಿಯಲ್ಲಿ ಹೊಸ ನಿಯಮ ಜಾರಿಗೆ ತರಲು ಸಜ್ಜಾಗಿದೆ. ಜೋರಾಗಿ ಹಾಡು ಕೇಳುವುದು ಅಥವಾ ರೀಲ್ಸ್ ನೋಡುವ ಮೂಲಕ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವವರನ್ನ ಬಸ್​ನಿಂದ ಕೆಳಗಿಳಿಸುವಂತೆ ನಿರ್ವಾಹಕರಿಗೆ ಬಿಎಂಟಿಸಿ ಸೂಚನೆ ನೀಡಿದೆ.

ಮೆಟ್ರೋ ಮಾದರಿಯ ರೂಲ್ಸ್​ಗೆ ಮುಂದಾದ ಬಿಎಂಟಿಸಿ: ಬಸ್​​ನಲ್ಲಿ ಲೌಡ್ ಸ್ಪೀಕರ್ ಹಾಕಿದ್ರೆ ಕೆಳಗಿಳಿಸುವುದು ಗ್ಯಾರಂಟಿ
ಬಿಎಂಟಿಸಿ ಬಸ್​Image Credit source: tv9 kannada
ಕಿರಣ್​ ಸೂರ್ಯ
| Edited By: |

Updated on: Oct 11, 2026 | 8:57 PM

Share

ಮುಖ್ಯಾಂಶಗಳು

  • ಬಿಎಂಟಿಸಿ ಬಸ್​ನಲ್ಲಿ ಜೋರಾಗಿ ಸಾಂಗ್ಸ್, ರೀಲ್ಸ್ ನೋಡುವವರ ಸಂಖ್ಯೆ ಹೆಚ್ಚಳ
  • ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುವುದನ್ನ ತಡೆಯಲು ಮುಂದಾದ ಬಿಎಂಟಿಸಿ
  • ಮೆಟ್ರೋ ಮಾದರಿಯ ರೂಲ್ಸ್​​ ಜಾರಿಗೆ ಮುಂದಾದ ಬಿಎಂಟಿಸಿ

ಬೆಂಗಳೂರು, ಅಕ್ಟೋಬರ್​​ 11: ಇತ್ತೀಚೆಗೆ ಬಿಎಂಟಿಸಿ ಬಸ್​​ನಲ್ಲಿ ಮೊಬೈಲ್​​ ಲೌಡ್ ಸ್ಪೀಕರ್ ಮೂಲಕ ಜೋರಾಗಿ ಹಾಡು ಹಾಕುವುದು, ರೀಲ್ಸ್ ನೋಡುವುದು, ಯೂಟ್ಯೂಬ್​ ವೀಕ್ಷಣೆ ಮಾಡುವ ಮೂಲಕ ಅಕ್ಕಪಕ್ಕದ ಪ್ರಯಾಣಿಕರಿಗೆ ಕಿರಿಕಿರಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಬಿಎಂಟಿಸಿ ಮುಂದಾಗಿದ್ದು, ಇನ್ಮುಂದೆ ಲೌಡ್ ಸ್ಪೀಕರ್ ಹಾಕುವ ಮೂಲಕ ಕಿರಿಕಿರಿ ಮಾಡಿದರೆ ಬಸ್​​ನಿಂದ ಕೆಳಗಿಳಿಸಲಾಗುತ್ತದೆ.

ಬಿಎಂಟಿಸಿಯಲ್ಲಿ ನಮ್ಮ ಮೆಟ್ರೋ ಮಾದರಿಯ ರೂಲ್ಸ್ 

ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಫೋನ್​​​ನಲ್ಲಿ ಲೌಡ್ ಸ್ಪೀಕರ್ ಹಾಕಿ ಜೋರಾಗಿ ಹಾಡು ಕೇಳುವಂತಿಲ್ಲ, ರೀಲ್ಸ್ ನೋಡುವಂತಿಲ್ಲ, ಯೂಟ್ಯೂಬ್​ನಲ್ಲಿ ವಿಡಿಯೋ ವೀಕ್ಷಿಸುವಂತಿಲ್ಲ. ಒಂದು ವೇಳೆ ಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ದಂಡ ಹಾಕುತ್ತಾರೆ. ಇದರಿಂದ ಪ್ರಯಾಣಿಕರು ಯಾರು ಲೌಡ್ ಸ್ಪೀಕರ್ ಹಾಕಲ್ಲ, ಸಹ ಪ್ರಯಾಣಿಕರಿಗೆ ತೊಂದರೆ ಕೂಡ ಕೊಡಲ್ಲ. ಆದರೆ ಹೆಡ್​ಪೋನ್ ಹಾಕಿಕೊಂಡು ಸಾಂಗ್ಸ್ ಕೇಳಬಹುದು.

ಇದು ಸರಿಯಾದ ನಿರ್ಧಾರ ಎಂದ ಪ್ರಯಾಣಿಕರು

ಸದ್ಯ ಬಿಎಂಟಿಸಿ ನಿಗಮ ಅಲರ್ಟ್ ಆಗಿದ್ದು, ಬಸ್​​ಗಳಲ್ಲಿ ಲೌಡ್ ಸ್ಪೀಕರ್ ಹಾಕಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ಬಸ್​ನಿಂದ ಕೆಳಗೆ ಇಳಿಸಲು ಕಂಡಕ್ಟರ್​ಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಈ ಕುರಿತಾಗಿ ಬಿಎಂಟಿಸಿ ಬಸ್​ ಪ್ರಯಾಣಿಕರಾದ ಡಾ. ಬಸವರಾಜ್​​​ ಅವರು ಟಿವಿ  ಜೊತೆಗೆ ಮಾತನಾಡಿದ್ದು, ‘ಇದು ಸರಿಯಾದ ನಿರ್ಧಾರ’ ಎಂದು ಸ್ವಾಗತಿಸಿದ್ದಾರೆ.

LIVE TV

ಪ್ರಯಾಣಿಕರನ್ನ ಬಸ್‌ನಿಂದ ಕೆಳಗಿಳಿಸಲು ಸೂಚನೆ

ಈಗಾಗಲೇ ಕೆಲವು ಬಸ್‌ಗಳಲ್ಲಿ ಮೊಬೈಲ್​ನಲ್ಲಿ ಜೋರಾಗಿ ಮಾತನಾಡುವುದು, ರೀಲ್ಸ್ ನೋಡುವುದು, ಹಾಡು ಕೇಳುವುದು ನಿಷೇಧಿಸಲಾಗಿದೆ. ಆದರೂ ಸಹ ಕೆಲವು ಪ್ರಯಾಣಿಕರು ಬಸ್‌ನಲ್ಲಿ ಮೊಬೈಲ್​ನಲ್ಲಿ ಲೌಡ್ ಸ್ಪೀಕರ್ ಹಾಕುವ ಮೂಲಕ ಅಕ್ಕಪಕ್ಕದ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕಂಡಕ್ಟರ್​ಗಳು ಪ್ರಯಾಣಿಕರಿಗೆ ಸೂಚನೆ ನೀಡಿದರೆ, ಪ್ರಯಾಣಿಕರು ಕಂಡಕ್ಟರ್​ಗಳಿಗೆ ಆವಾಜ್ ಹಾಕ್ತಿದ್ದಾರಂತೆ. ಅಂತಹ ಪ್ರಯಾಣಿಕರನ್ನು ಕೂಡಲೇ ಬಸ್‌ನಿಂದ ಕೆಳಕ್ಕೆ ಇಳಿಸಲು ಬಿಎಂಟಿಸಿ ಸೂಚನೆ ನೀಡಿದೆ. ಹೀಗಾಗಿ ಯಾರಾದರೂ ಬಸ್​ನಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಟ್ಟರೆ, ಲೌಡ್ ಸ್ಪೀಕರ್‌ನಲ್ಲಿ ಹಾಡು ಹಾಕಿ ಕಿರಿಕಿರಿ ಮಾಡಿದರೆ, ಮೊದಲಿಗೆ ಎಚ್ಚರಿಕೆ ಕೊಡಲು ನಿರ್ವಾಹಕರಿಗೆ ಬಿಎಂಟಿಸಿ ಸೂಚನೆ ಕೊಟ್ಟಿದೆ. ವಾರ್ನಿಂಗ್​ಗೂ ಬಗ್ಗದಿದ್ದರೆ ಅಂತಹ ಪ್ರಯಾಣಿಕರನ್ನು ಕೂಡಲೇ ಬಸ್‌ನಿಂದ ಕೆಳಕ್ಕೆ ಇಳಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಈ ತಿಂಗಳೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್: ಸಚಿವ ಸಂಪುಟದ ಅನುಮೋದನೆಗೆ ಕಾಯುತ್ತಿರುವ ಸಾರಿಗೆ ಇಲಾಖೆ

ಒಟ್ಟಿನಲ್ಲಿ ಬಿಎಂಟಿಸಿ ಬಸ್​​ನಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವವರಿಗೆ ಬ್ರೇಕ್ ಹಾಕಲು ಮುಂದಾಗಿರುವುದು ಒಳ್ಳೆಯದು. ಆದರೆ ಈ ರೂಲ್ಸ್ ಎಷ್ಟು ದಿನ ಫಾಲೋ ಆಗುತ್ತದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ