AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್: 4500 ಹೊಸ ಬಸ್ಸು ಒದಗಿಸಲು ಗ್ರೀನ್ ಸಿಗ್ನಲ್, ಗುಜರಿ ಸೇರಲಿವೆ ಡಕೋಟಾ ಬಸ್​ಗಳು

ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳಿಂದ ನಿರಂತರವಾಗಿ ಅಪಘಾತಗಳಾಗುತ್ತಿವೆ. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆ ಆರಂಭವಾದ ನಂತರ ಪುರುಷರಿಗೆ ಬಸ್ ಸಾಲುತ್ತಿಲ್ಲ, ಸೀಟ್ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಇದರೊಂದಿಗೆ, ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಪರೀತ ವಾಯುಮಾಲಿನ್ಯ ಉಂಟಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ ನೋಡಿ.

ಬಿಎಂಟಿಸಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್: 4500 ಹೊಸ ಬಸ್ಸು ಒದಗಿಸಲು ಗ್ರೀನ್ ಸಿಗ್ನಲ್, ಗುಜರಿ ಸೇರಲಿವೆ ಡಕೋಟಾ ಬಸ್​ಗಳು
ಬಿಎಂಟಿಸಿ ಬಸ್
Kiran Surya
| Updated By: Ganapathi Sharma|

Updated on: Sep 06, 2025 | 9:39 AM

Share

ಬೆಂಗಳೂರು, ಸೆಪ್ಟೆಂಬರ್ 6: ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್​​ಗಳಿಂದ (BMTC Bus) ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಬಿಎಂಟಿಸಿಯ ಹಳೆಯ ಡಕೋಟಾ ಬಸ್ಸುಗಳು ಎಂಬ ಆರೋಪವಿದೆ. ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 44 ಜನ ಪ್ರಾಣ ಕಳೆದುಕೊಂಡಿದ್ದರೆ, ಕಳೆದ ಒಂದು ತಿಂಗಳಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿಎಂಟಿಸಿ ಸಾಕಷ್ಟು ಬಸ್ಸುಗಳಲ್ಲಿ ಹಾರ್ನ್ ಇಲ್ಲ, ಇಂಜಿನ್ ಸಮಸ್ಯೆ, ಗೇರ್ ಬಾಕ್ಸ್ ಬ್ರೇಕ್, ಕ್ಲಚ್ ಪ್ಯಾಡ್, ಹೀಗೆ ನಾನಾ ರೀತಿಯ ಸಮಸ್ಯೆ ಗಳಿದ್ದು, ಹೊಸ ಬಸ್​ಗಳಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

ಏತನ್ಮಧ್ಯೆ, 4500 ಹೊಸ ಬಸ್​​ಗಳನ್ನು ಬಿಎಂಟಿಸಿಗೆ ನೀಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಆರಂಭದಿಂದ ಹಂತ ಹಂತವಾಗಿ ಹೊಸ ಬಸ್​​ಗಳು ಬಿಎಂಟಿಸಿ ಸೇರಲಿವೆ. ಈ 4500 ಹೊಸ ಬಸ್​ಗಳು ಬರುತ್ತಿದ್ದಂತೆಯೇ ಬಿಎಂಟಿಸಿಯ ಹಳೆಯ ಬಸ್​ಗಳು ಗುಜರಿ ಸೇರಲಿವೆ.

ಬಿಎಂಟಿಸಿಗೆ ಬರಲಿರುವ ಹೊಸ ಬಸ್​ಗಳ ವಿವರ

4100 ಸಾಮಾನ್ಯ ಎಲೆಕ್ಟ್ರಿಕ್ ಬಸ್, 400 ಎಸಿ ಎಲೆಕ್ಟ್ರಿಕ್ ಬಸ್ ಬರಲಿದ್ದು ಈಗಾಗಲೇ ಬಿಎಂಟಿಸಿ ನಿಗಮದ 15 ರಿಂದ 20 ಡಿಪೋ ಗಳಲ್ಲಿ ಚಾರ್ಜಿಂಗ್ ಸ್ಟೇಷನ್​ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿಯಲ್ಲಿ ಸದ್ಯ 1200 ಎಲೆಕ್ಟ್ರಿಕ್ ಬಸ್​ಗಳಿವೆ. 4500 ಹೊಸ ಬಸ್ಗಳಿಂದ ಬಿಎಂಟಿಸಿಯಲ್ಲಿ ಒಟ್ಟು 5700 ಎಲೆಕ್ಟ್ರಿಕ್​ಗಳಾಗಲಿವೆ. ಗ್ರಾಸ್ ಕಾಂಟ್ರಾಕ್ಟ್ ಅಡಿಯಲ್ಲಿ ಈ ಬಸ್ಸುಗಳು ನಗರದಲ್ಲಿ ಸಂಚಾರ ಮಾಡಲಿದೆ. ಈ ಬಸ್ಸಿಗೆ ಡ್ರೈವರ್ ಬಸ್ ಕಂಪನಿ ಅವರಾದರೆ, ಕಂಡಕ್ಟರ್ ಬಿಎಂಟಿಸಿಯಿಂದ ಇರುತ್ತಾರೆ.

ಇದನ್ನೂ ಓದಿ: ನೀರಿನ ದರ ಪರಿಷ್ಕರಣೆ: ಅಪಾರ್ಟ್​ಮೆಂಟ್, ಪಿಜಿಗಳಿಗೆ ರಿಲೀಫ್ ನೀಡಿದ ಜಲ ಮಂಡಳಿ

ಒಟ್ಟಿನಲ್ಲಿ, ಪದೇಪದೇ ಬಿಎಂಟಿಸಿ ಬಸ್​ಗ ಬ್ರೇಕ್ ಡೌನ್ ಮತ್ತು ಆಕ್ಸಿಡೆಂಟ್ ಗಳಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದಂತೂ ಸುಳ್ಳಲ್ಲ. ಆದಷ್ಟು ಬೇಗ ಈ ಬಸ್​​ಗಳು ಬಿಎಂಟಿಸಿ ಸೇರಿದರೆ ಒಂದಷ್ಟು ಅಮಾಯಕರ ಜೀವ ಉಳಿಯಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ