ಬಸ್​ ಟಿಕೆಟ್​​ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿಯಿಂದ ಬಸ್​​ ಪಾಸ್​​ ದರವೂ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ

ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ದೈನಂದಿನ, ವಾರದ ಹಾಗೂ ಮಾಸಿಕ ಬಸ್ ಪಾಸ್‌ಗಳ ದರವನ್ನೂ ಪರಿಷ್ಕರಿಸಿದೆ. ಅದರ ಅನ್ವಯ ಸಾಮಾನ್ಯ, ವೇಗದೂತ ಮತ್ತು ಎಸಿ ಬಸ್​​ಗಳ ಪಾಸ್​ ದರ ಹೆಚ್ಚಳ ಕಂಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಸ್​ ಟಿಕೆಟ್​​ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿಯಿಂದ ಬಸ್​​ ಪಾಸ್​​ ದರವೂ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Nov 04, 2026 | 9:00 PM

ಬೆಂಗಳೂರು, ನವೆಂಬರ್​​ 04: ಡೀಸೆಲ್​​ ಬೆಲೆ ನಿರಂತರ ಏರಿಕೆಯ ಜೊತೆಗೆ ನಿರ್ವಹಣಾ ವೆಚ್ಚದ ಹೆಚ್ಚಳ ಸೇರಿ ಹಲವು ಕಾರಣಗಳಿಂದ ರಾಜ್ಯ ಸರ್ಕಾರವು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ. ಈ ಪೈಕಿ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಬಸ್​​ಗಳ ಟಿಕೆಟ್​​ ದರ ಶೇ. 33ರಿಂದ 35ರಷ್ಟು ಹೆಚ್ಚಳವಾಗಿದೆ. ಈ ಬೆನ್ನಲ್ಲೇ ವಿವಿಧ ಮಾದರಿಯ ಪಾಸ್​​ಗಳ ದರವನ್ನೂ ಬಿಎಂಟಿಸಿ ಏರಿಕೆ ಮಾಡಿದೆ. ಪರಿಷ್ಕರಣೆ ಬಳಿಕ ಯಾವ ಪಾಸ್​​ ದರ ಈಗ ಎಷ್ಟೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಎಂಟಿಸಿಯ ಪರಿಷ್ಕೃತ ಬಸ್​​ ಪಾಸ್​​ಗಳ ದರ

ಪಾಸ್​​ ವಿಧ ಹಿಂದಿನ ದರ ಪರಿಷ್ಕೃತ ದರ
ಸಾಮಾನ್ಯ ಬಸ್​ಗಳ ದಿನದ ಪಾಸ್​​ 80 100
ಸಾಮಾನ್ಯ ಬಸ್​ಗಳ ವಿಸ್ತಾರ ದಿನದ ಪಾಸ್ 150 200
ಸಾಮಾನ್ಯ ಬಸ್​​ಗಳ ವಾರದ ಪಾಸ್​ 350 420
ವೇಗದೂತ ಬಸ್​​ಗಳ ವಿಸ್ತಾರ ವಾರದ ಪಾಸ್ 700 875
ಸಾಮಾನ್ಯ ಬಸ್​​ಗಳ ವಿಸ್ತಾರ ವಾರದ ಪಾಸ್ 550 680
ಸಾಮಾನ್ಯ ಬಸ್​​ಗಳ ತಿಂಗಳ ಪಾಸ್​​ 1200 1500
ಸಾಮಾನ್ಯ ಬಸ್​​ಗಳ ಹಿರಿಯ ನಾಗರಿಕರ ತಿಂಗಳ ಪಾಸ್ 1080 1350
ವೇಗದೂತ ಬಸ್​​ಗಳ ವಿಸ್ತಾರ ತಿಂಗಳ ಪಾಸ್ 1500 1800
ಎಸಿ ಬಸ್​ಗಳ ದಿನದ ಪಾಸ್​​ 140 175
ಎಸಿ ಬಸ್​ಗಳ ತಿಂಗಳ ಪಾಸ್​​ 2380 2500

ಇದನ್ನೂ ಓದಿ: ಸಾರಿಗೆ ಬಸ್​​ಗಳ ಟಿಕೆಟ್​ ದರ ಹೆಚ್ಚಳ ಅನಿವಾರ್ಯವಾಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ

Loading...

ಇನ್ನು ಬಿಎಂಟಿಸಿ ಶೆ.180ರಷ್ಟು ಟಿಕೆಟ್​​ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿತ್ತಾದರೆ, ಉಳಿದ ಮೂರು ನಿಗಮಗಳು ಶೇ.90ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದವು. ಅತುಲ್​​ ತಿವಾರಿ ಕಮಿಟಿ ಕೂಡ ಬಿಎಂಟಿಸಿಗೆ ಶೇ.45ರಷ್ಟು ಮತ್ತು ಉಳಿದ ನಿಗಮಗಳಿಗೆ ಶೇ. 35ರಷ್ಟು ದರ ಏರಿಕೆ ಮಾಡಬಹುದು ಎಂದು ವರದಿ ನೀಡಿತ್ತು. ಆದರೆ ಸರ್ಕಾರ ಅಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ವೆಚ್ಚ ಹಾಗೂ 2,000 ಕೋಟಿಯ ವಾರ್ಷಿಕ ನಷ್ಟದ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಸಚಿವರು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:59 pm, Wed, 4 November 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us