ನಡುರಸ್ತೆಯಲ್ಲೇ ನಿಲ್ಲುತ್ತಿರುವ ಬಿಎಂಟಿಸಿ ಬಸ್​​ಗಳು: ಇತ್ತ ಸ್ಪೇರ್ ಪಾರ್ಟ್ಸ್​​​​​​ ಖರೀದಿಯಲ್ಲಿ ಕೋಟ್ಯಾಂತರ ರೂ. ಲೂಟಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಎಂಟಿಸಿಗೆ ಬಿಡಿಭಾಗ ಪೂರೈಕೆ ಹೆಸರಿನಲ್ಲಿ ಅಧಿಕಾರಿಗಳು ಕೋಟ್ಯಂತರ ರೂ. ಹಣ ಲೂಟಿ ಮಾಡಿದ್ದು, ಇದೀಗ ಈ ಸಂಬಂಧ ಬಿಎಂಟಿಸಿಯ 21 ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಲೂಟಿಕೋರ ಅಧಿಕಾರಿಗಳ ಪಟ್ಟಿ ಇಲ್ಲಿದೆ.

ನಡುರಸ್ತೆಯಲ್ಲೇ ನಿಲ್ಲುತ್ತಿರುವ ಬಿಎಂಟಿಸಿ ಬಸ್​​ಗಳು: ಇತ್ತ ಸ್ಪೇರ್ ಪಾರ್ಟ್ಸ್​​​​​​ ಖರೀದಿಯಲ್ಲಿ ಕೋಟ್ಯಾಂತರ ರೂ. ಲೂಟಿ
Bmtc Scam
Edited By:

Updated on: Nov 22, 2026 | 2:48 PM

ಬೆಂಗಳೂರು, (ನವೆಂಬರ್ 22): ಬಿಎಂಟಿಸಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಬಿಎಂಟಿಸಿಗೆ ಬಿಡಿಭಾಗ ಪೂರೈಕೆ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ. ಹೌದು… 5 ಬಿಡಿಭಾಗ ಪೂರೈಕೆ ಕಂಪನಿಗಳ ಹೆಸರಿನಲ್ಲಿ 2,820 ಬಿಡಿಭಾಗ ಪೂರೈಸಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಬಿಎಂಟಿಸಿಗೆ 3,97,83,142 ಕೋಟಿ ರೂ. ವಂಚನೆ ಮಾಡಲಾಗಿದೆ. ಈ ಸಂಬಂಧ ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿ ಪರಿಮಳ ನಾಯ್ಕ್ ದೂರು ನೀಡಿದ್ದು, ಈ ದೂರಿನ ಮೇಲರೆಗೆ 21 ಅಧಿಕಾರಿಗಳ ವಿರುದ್ಧ ವಿಲ್ಸನ್​ಗಾರ್ಡನ್ ಠಾಣೆಯಲ್ಲಿ FIR ದಾಖಲಾಗಿದೆ.

2021ರಿಂದ 2026ರವರೆಗೆ 2,820 ಬಿಡಿಭಾಗ ಪೂರೈಸಿದ್ದಾಗಿ 5 ಬಿಡಿಭಾಗ ಪೂರೈಕೆ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ ಬಿಎಂಟಿಸಿಗೆ ಬರೋಬ್ಬರಿ 3,97,83,142 ಕೋಟಿ ರೂಪಾಯಿ ವಂಚಿಸಿದ್ದಾರೆ. ಇನ್ನು ಅಕ್ರಮದ ಬಗ್ಗೆ ಬಿಎಂಟಿಸಿ ಭದ್ರತಾ, ಜಾಗೃತದಳದ ಅಧಿಕಾರಿಗಳು ನಡೆಸಿದ ತನಿಖೆಯಲ್ಲೂ 21 ಅಧಿಕಾರಿಗಳ ಅಕ್ರಮ ಸಾಬೀತಾಗಿದೆ. ಆದರೂ ಸಹ 21 ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಿಲ್ಲ. ಈಗಲೂ ಬಿಎಂಟಿಸಿಯಲ್ಲೇ ಕೆಲಸ ಮಾಡುತ್ತಿದ್ದಾರೆ.

Loading...

ಇದನ್ನೂ ಓದಿ: ಟಿವಿ9 ಮತ್ತೊಂದು ಇಂಪ್ಯಾಕ್ಟ್: ಬಿಎಂಟಿಸಿಯ 10 ಭ್ರಷ್ಟ ಅಧಿಕಾರಿಗಳು ಅಮಾನತು

ಇನ್ನೊಂದೆಡೆ ಸ್ಪೇರ್ ಪಾರ್ಟ್ಸ್ ಇಲ್ಲದೆ ಬಿಎಂಟಿಸಿಯ ಬಸ್ಸುಗಳು ನಡು ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿವೆ. ಆದರೆ ಬಿಎಂಟಿಸಿಯ ಅಧಿಕಾರಿಗಳು, ಸಿಬ್ಬಂದಿಗಳು ಮಾತ್ರ ಸ್ಪೇರ್ ಪಾರ್ಟ್ಸ್ ಗಳನ್ನು ಸಪ್ಲೈ ಮಾಡದಿದ್ದರೂ, ಸ್ಪೇರ್ ಪಾರ್ಟ್ಸ್ ಸಪ್ಲೈ ಮಾಡಲಾಗಿದೆ ಎಂದು ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ.BMTC Scam Exposed: ₹3.97 Crore Fraud Using Fake Spare Parts Bills, FIR Against 21 Officials

ನಕಲಿ ದಾಖಲೆ ಸೃಷ್ಟಿಸಿರುವ 21 ಅಧಿಕಾರಿಗಳು ಮತ್ತು ಸಿಬ್ಬಂದಿ

  1. ನಾಗರಾಜ ( A1 ) ASK – ಸಹಾಯಕ ಉಗ್ರಣ ರಕ್ಷಕ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ. (ಹಿಂದಿನ ಪ್ರಕರಣದಲ್ಲಿ ಪ್ರಸ್ತುತ ಅಮಾನತ್ತಿನಲ್ಲಿ ಇರುವರು).
  2.  ಎನ್. ಅಶೋಕ ( A-2 ) ಜೂನಿಯರ್ ಅಸಿಸ್ಟೆಂಟ್ , ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ. (ಹಿಂದಿನ ಪ್ರಕರಣದಲ್ಲಿ ಪ್ರಸ್ತುತ ಅಮಾನತ್ತಿನಲ್ಲಿ ಇರುವರು)
  3. ಶಿಲ್ಪ. ( A-3 ) ಸಹಾಯಕ ಉಗ್ರಣ ರಕ್ಷಕಿ ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.(ಹಿಂದಿನ ಪ್ರಕರಣದಲ್ಲಿ ಪ್ರಸ್ತುತ ಅಮಾನತ್ತಿನಲ್ಲಿ ಇರುವರು).
  4. ವಿಶ್ವನಾಥ್ L.D, ( A-4 ) ಸಹಾಯಕ ಉಗ್ರಣ ರಕ್ಷಕ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  5.  ಆರ್.ಎಂ. ಬಂಟನೂರ್ಕರ್ ( A-5 ) ಸಹಾಯಕ ಉಗ್ರಣ ಅಧಿಕಾರಿ , ಕೇಂದ್ರ ಕಛೇರಿ ಶಾಂತಿನಗರ.
  6. ಮನ್ಮಥನ್, ( A-6 ) ಸಹಾಯಕ ಕಾರ್ಯಾನಿರ್ವಾಹಕ ಅಧೀಕ್ಷಕರು (ನಿವೃತ್ತಿ ಪ್ರಸ್ತುತ ) ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  7. ಎಂ.ಎಲ್. ಛಾಯಾ. ( A-7 ) ಸಹಾಯಕ ಉಗ್ರಣ ಅಧಿಕ್ಷಕಿ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ. (ಹಿಂದಿನ ಪ್ರಕರಣದಲ್ಲಿ ಪ್ರಸ್ತುತ ಅಮಾನತ್ತಿನಲ್ಲಿ ಇರುವರು)
  8.  ರೂಪ ( A-8 ) ಸಹಾಯಕ ಉಗ್ರಣ ರಕ್ಷಕಿ , ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  9. ಅನಿತಾ ಜಿ.ಆರ್- ಸಹಾಯಕ ಉಗ್ರಣ ರಕ್ಷಕಿ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  10. ಎಂ.ಎಸ್. ಪ್ರಕಾಶ್ ( A-10 ) ಟೆಕ್ನಿಷಿಯನ್ ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  11. ರಮೇಶ್, ( A-11 ) ಉಗ್ರಣ ಅಧಿಕಾರಿ (ನಿವೃತ್ತಿ ಪ್ರಸ್ತುತ ) ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  12. ವಿಶ್ವನಾಥ್. ಎನ್. ( A-12 ) ಸಹಾಯಕ ಉಗ್ರಣ ರಕ್ಷಕ, ಘಟಕ-33, (ಪ್ರಸ್ತುತ ಗೈರುಹಾಜರಿ)
  13. ಪ್ರೇಮ ವೀರಕ್ತಮಠ ( A-13 ) ಸಹಾಯಕ ಉಗ್ರಣ ರಕ್ಷಕ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ
  14. ಹೇಮಂತ್. ಬಿ.ಆರ್. ( A- 14 ) ಸಹಾಯಕ ಉಗ್ರಣ ರಕ್ಷಕ, ಪ್ರಸ್ತುತ ಕೆಎಸ್ಆರ್ಟಿಸಿ ಬೆಂಗಳೂರು.
  15. ಮೋಹನ್ ಕುಮಾರ್, ( A- 15) ಸಹಾಯಕ ಉಗ್ರಣ ರಕ್ಷಕ, ಪ್ರಸ್ತುತ ರಾಜೀನಾಮೆ ಸಲ್ಲಿಸಿರುತಾರೆ .
  16. ಲೋಕೇಶ್. ಸಿ.ವಿ. ಸಹಾಯಕ ಉಗ್ರಣ ಅಧಿಕ್ಷಕಿ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  17. ಕೃಷ್ಣವೇಣಿ. ( A-17 ) ಸಹಾಯಕ ಉಗ್ರಣ ಅಧಿಕಾರಿ, ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  18. ವಸಂತ ಬಾಯಿ ( A-18 ) ಉಗ್ರಣ ಅಧಿಕಾರಿ ಕೇಂದ್ರ ಉಗ್ರಾಣ, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  19.  ವಿದ್ಯಾ ವಿ. ರಾಯ್ಕರ್ ( A- 19 ) ವಿಭಾಗೀಯ ಯಾಂತ್ರಿಕ ಅಭಿಯಂತರರು, CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  20. ಜಗದೀಶ್. ಎಂ. ( A- 20 ) ವಿಭಾಗೀಯ ಭದ್ರತ ನಿರೀಕ್ಷಕ , CWS-1 ಕೆಂದ್ರೀಯ ಕಾರ್ಯಾಗಾರ – 1 ಶಾಂತಿನಗರ.
  21. ಜಾನಕಿ ರಾಮ. ಎಂ.ಎಸ್. ಗಜಾನನ ಇಂಜಿನಿಯರಿಂಗ್ ವರ್ಕ್ಸ್ ಅಂಡ್ ಎಂ.ಎಸ್-ಜಿ‌.ಎಸ್ ಅಂಡ್ ಕಂಪನಿ

ಕರ್ನಾಟಕದ ಮತ್ರಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us