ಬಿಎಂಟಿಸಿ ಬಸ್ ಚಾಲಕರೇ ಎಚ್ಚರ ಎಚ್ಚರ!: ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಶಿಕ್ಷೆ ಏನ್ ಗೊತ್ತಾ?
ಬಿಎಂಟಿಸಿ ಬಸ್ಗಳ ಅಪಘಾತ ಹೆಚ್ಚಳ ತಡೆಗೆ ಅಧಿಕಾರಿಗಳು ಮುಂದಾಗಿದ್ದು, ಕಠಿಣ ನಿಯಮಗಳನ್ನ ಜಾರಿಗೆ ತಂದಿದ್ದಾರೆ. ಬಸ್ ಚಾಲನೆ ವೇಳೆ ಚಾಲಕರು ಮೊಬೈಲ್ ಬಳಕೆ ಮಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ನಿಯಮ ಉಲ್ಲಂಘಿಸುವ ಡ್ರೈವರ್ಗಳಿಗೆ ಅಮಾನತು ಅಥವಾ ವರ್ಗಾವಣೆ ಶಿಕ್ಷೆಯ ಜೊತೆಗೆ ಸಂಬಳ ಕಡಿತ ಮಾಡುವುದಾಗಿಯೂ ಬಿಎಂಟಿಸಿ ಎಚ್ಚರಿಸಿದೆ.

ಬೆಂಗಳೂರು, ಸೆಪ್ಟೆಂಬರ್ 24: ವಾಹನಗಳನ್ನ ಚಲಾಯಿಸುವಾಗ ರೀಲ್ಸ್ ಮಾಡೋದು, ಮೊಬೈಲ್ ಬಳಸೋದು ಅಪರಾಧವಾದ್ರೂ ಇತ್ತೀಚೆಗೆ ಅವು ಮಾಮೂಲು ಎಂಬಂತಾಗಿವೆ. ಅದರಲ್ಲೂ ಪ್ರಯಾಣಿಕರ ಸುರಕ್ಷತೆಯ ಹೊಣೆ ಹೊತ್ತ ಸಾರಿಗೆ ವಾಹನಗಳ ಚಾಲಕರ ಮೊಬೈಲ್ ಗೀಳು ಸಾಕಷ್ಟು ಅನಾಹುತಕ್ಕೆ ಕಾರಣವಾಗ್ತಿದೆ. ಹೀಗಾಗಿ ಎಚ್ಚೆತ್ತಿರೋ ಬಿಎಂಟಿಸಿ, ಸಂಸ್ಥೆಯ ಚಾಲಕರಿಗೆ ಖಡಕ್ ಎಚ್ಚರಿಕೆ ರವಾನಿಸಿದೆ. ಬಸ್ ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಅಮಾನತು, ವರ್ಗಾವಣೆ ಶಿಕ್ಷೆ ಕನ್ಫರ್ಮ್ ಎಂಬ ಸಂದೇಶ ನೀಡಿದೆ.
ನಗರದಲ್ಲಿ ಬಿಎಂಟಿಸಿ ಬಸ್ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಬಸ್ ಚಾಲನೆ ವೇಳೆ ಚಾಲಕರು ಕಡ್ಡಾಯವಾಗಿ ಮೊಬೈಲ್ ಬಳಸಬಾರದು. ಫೋನ್ನಲ್ಲಿ ಮಾತಾಡಿದ್ರೆ, ಹೆಡ್ ಫೋನ್ ಬಳಕೆ ಅಥವಾ ಚಾಟಿಂಗ್ ಮಾಡಿದ್ರೆ ಸಸ್ಪೆಂಡ್ ಅಥವಾ ಟ್ರಾನ್ಸ್ಫರ್ ಜೊತೆಗೆ ಸಂಬಳದಲ್ಲಿಯೂ ಕಡಿತಗೊಳಿಸುವ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ. ಬಿಎಂಟಿಸಿ ಬಸ್ ಅಪಘಾತಗಳ ತಡೆಗೆ ಕಠಿಣ ಕ್ರಮಕ್ಕೆ ಮುಂದಾಗಿರೋ ಅಧಿಕಾರಿಗಳು, ಇದರ ಭಾಗವಾಗಿ ಚಾಲಕರಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಶಾಕ್ ಕೊಟ್ಟ ಐಟಿ: ಬೆಳ್ಳಂಬೆಳಗ್ಗೆ ಹಲವು ಕಾಲೇಜುಗಳ ಮೇಲೆ ದಾಳಿ
ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಶಿಕ್ಷೆ ಏನು?
ಮೊದಲನೇ ಬಾರಿ:
- 15 ದಿನಗಳ ಅಮಾನತ್ತು
- ಶಿಸ್ತು ಕ್ರಮ (ನಿಯಮ-23)
- ಅಮಾನತ್ತು ತೆರವು ನಂತರ ಬೇರೆ ಘಟಕಕ್ಕೆ ವರ್ಗಾವಣೆ
- ವೇತನದಿಂದ ₹5000 ಕಡಿತ
ಎರಡನೇ ಬಾರಿ:
- 15 ದಿನಗಳ ಅಮಾನತ್ತು
- ಶಿಸ್ತು ಕ್ರಮ (ನಿಯಮ-23)
- ವರ್ಗಾವಣೆ
- ವಾರ್ಷಿಕ ಬಡ್ತಿ 1 ವರ್ಷಕ್ಕೆ ತಡೆ ಅಥವಾ ₹5000 ಕಡಿತ
ಮೂರನೇ ಬಾರಿ:
- 15 ದಿನಗಳ ಅಮಾನತ್ತು
- ಶಿಸ್ತು ಕ್ರಮ
- ವರ್ಗಾವಣೆ
- ವಾರ್ಷಿಕ ಬಡ್ತಿ 2 ವರ್ಷಕ್ಕೆ ತಡೆ ಅಥವಾ ₹10,000 ಕಡಿತ
ನಾಲ್ಕನೇ ಬಾರಿ:
- 15 ದಿನಗಳ ಅಮಾನತ್ತು
- ಶಿಸ್ತು ಕ್ರಮ
- ವರ್ಗಾವಣೆ
- ಶಾಶ್ವತ ಬಡ್ತಿ ಇಳಿಕೆ / 2 ವರ್ಷ ತಡೆ ಅಥವಾ ₹20,000 ಕಡಿತ
ಐದನೇ ಬಾರಿ:
- 15 ದಿನಗಳ ಅಮಾನತ್ತು
- ಶಿಸ್ತು ಕ್ರಮ
- ವರ್ಗಾವಣೆ
- ವಾರ್ಷಿಕ ಬಡ್ತಿಗೆ ಶಾಶ್ವತ ತಡೆ ಅಥವಾ ₹25,000 ಕಡಿತ
ಆರು ಅಥವಾ ಅದಕ್ಕಿಂತ ಹೆಚ್ಚು ಸಲ
- 15 ದಿನಗಳ ಅಮಾನತ್ತು
- ಶಿಸ್ತು ಕ್ರಮ
- ವರ್ಗಾವಣೆ
- 2 ವಾರ್ಷಿಕ ಬಡ್ತಿ ಶಾಶ್ವತ ಇಳಿಕೆ/ತಡೆ ಅಥವಾ ₹30,000 ಕಡಿತ
- ಸಂಸ್ಥೆಯ ಶಿಸ್ತು ನಿಯಮಾವಳಿ 1971 ರ ನಿಯಮ 18(b) ಅನ್ವಯ ಹೆಚ್ಚುವರಿ ಶಿಕ್ಷೆ
ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:34 am, Wed, 24 September 25



