AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಯುಸಿ ಉಪನ್ಯಾಸಕರಿಂದ ಪಾಠ: ಸರ್ಕಾರದ ನಿರ್ಧಾರಕ್ಕೆ ವಿಜಯೇಂದ್ರ ವಿರೋಧ

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಯು ಉಪನ್ಯಾಸಕರಿಂದ ಪಾಠ ಮಾಡಿಸುವ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ವಿದ್ಯಾರ್ಥಿ ಹಾಗೂ ಉಪನ್ಯಾಸಕ ವಿರೋಧಿ ಆದೇಶ ಎಂದು ಕಿಡಿ ಕಾರಿರುವ ಅವರು, ಶಿಕ್ಷಣ ಸಚಿವರೇ ಇಲ್ಲದ ಸರ್ಕಾರ ಇನ್ನೂ ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಯುಸಿ ಉಪನ್ಯಾಸಕರಿಂದ ಪಾಠ: ಸರ್ಕಾರದ ನಿರ್ಧಾರಕ್ಕೆ ವಿಜಯೇಂದ್ರ ವಿರೋಧ
ಬಿ.ವೈ.ವಿಜಯೇಂದ್ರImage Credit source: Tv9 Kannada
ಕಿರಣ್​ ಹನಿಯಡ್ಕ
| Edited By: |

Updated on:Jul 16, 2026 | 6:46 PM

Share

ಮುಖ್ಯಾಂಶಗಳು

  • ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ಆದೇಶಕ್ಕೆ ವಿರೋಧ
  • ಪ್ರಾಢಶಾಲೆ ಮಕ್ಕಳಿಗೆ ಉಪನ್ಯಾಸಕರಿಂದ ಪಾಠದಕ್ಕೆ ವಿಜಯೇಂದ್ರ ಆಕ್ಷೇಪ
  • ಅಧ್ಯಯನ ಕೈಗೊಳ್ಳದೆ ಸರ್ಕಾರದಿಂದ ಏಕಪಕ್ಷೀಯ ತೀರ್ಮಾನ: ಬಿವೈವಿ

ಬೆಂಗಳೂರು, ಜುಲೈ 16: ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನಿಯಮಗಳ ಕುರಿತ ಅಧಿಸೂಚನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಯುಸಿ ಉಪನ್ಯಾಸಕರನ್ನು ಪ್ರೌಢಶಾಲೆಯ 9 ಮತ್ತು 10 ನೇ ತರಗತಿಗೆ ಬೋಧನೆಗೆ ನಿಯೋಜಿಸಲು ಅವಕಾಶ ಮಾಡಿಕೊಡುವ ಈ ಅಧಿಸೂಚನೆ ಬಗ್ಗೆ ಕಿಡಿ ಕಾರಿರುವ ಅವರು, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂಬ ನೆಪವೊಡ್ಡಿ ಪಿಯುಸಿ ಉಪನ್ಯಾಸಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಕೂಡಲೇ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ವಿಜಯೇಂದ್ರ ವಿರೋಧ ಯಾಕೆ?

ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ಆದೇಶ ಸಮರ್ಥನಿಯವಲ್ಲ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಹಸ್ರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಸರ್ಕಾರ ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿಗಳು, ಪಾಲಕರೊಂದಿಗೆ ಚರ್ಚಿಸದೇ ಶಿಕ್ಷಣ ತಜ್ಞರು ಹಾಗೂ ಇತರ ಹಿತಾಸಕ್ತ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ, ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯವಾಗಿ ಪ್ರಕಟಿಸಿರುವುದು ಅಸಹನೀಯ ಮತ್ತು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ. ಹೀಗಾಗಿ ಇದನ್ನು ಬಲವಾಗಿ ವಿರೋಧಿಸೋದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ; ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್

ಉಪನ್ಯಾಸಕರ ಗಮನವನ್ನು ಪ್ರೌಢಶಾಲೆಗಳತ್ತ ಹರಿಸಿದರೆ ಇತ್ತ ಪಿಯುಸಿ ವಿದ್ಯಾರ್ಥಿಗಳಿಗೂ ಇಲ್ಲ ಹಾಗೂ ಅತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಇಲ್ಲ ಎಂಬಂತಾಗಿ ಎಲ್ಲರಿಗೂ ಅರೆಬರೆ ಶಿಕ್ಷಣ ನೀಡಿದಂತಾಗುತ್ತದೆ. ಇಂತಹ ಮೂರ್ಖ ಆದೇಶ ಹೊರಡಿಸುವ ಮೂಲಕ ವಿದ್ಯಾರ್ಥಿ ಹಾಗೂ ಉಪನ್ಯಾಸಕ ವಿರೋಧಿಯಾಗಿದೆ. ಶಿಕ್ಷಣ ಸಚಿವರೇ ಇಲ್ಲದ ಸರ್ಕಾರ ಇನ್ನೂ ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಜೂನ್ ತಿಂಗಳಲ್ಲೇ ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿದ್ದ ರಾಜ್ಯ ಸರ್ಕಾರ, ಇದೀಗ ನಿಯಮಗಳಿಗೆ ತಿದ್ದುಪಡಿ ತಂದಿದೆ. ನೇರ ನೇಮಕಾತಿ ಮತ್ತು ಬಡ್ತಿಯ ಮೂಲಕ ಇನ್ನು ಮುಂದೆ ನೇಮಕಗೊಳ್ಳುವ ಉಪನ್ಯಾಸಕರು ಸರ್ಕಾರ ನಿರ್ದಿಷ್ಟಪಡಿಸಿದ ಶಿಕ್ಷಣ ಸಂಸ್ಥೆಗಳಲ್ಲಿ 9 ಮತ್ತು 10ನೇ ತರಗಳನ್ನು ಬೋಧಿಸಬೇಕು ಎಂಬ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆಯೀಗ ಆಕ್ಷೇಪಗಳು ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:12 pm, Thu, 16 July 26

Follow Us