ಬೆಂಗಳೂರು: ಆಹಾರದಲ್ಲಿ ಜಿರಳೆ ಇದ್ದುದನ್ನು ಪ್ರಶ್ನಿಸಿದ ಹೈಕೋರ್ಟ್ ವಕೀಲೆ ಮೇಲೆ ಹೋಟೆಲ್ ಸಿಬ್ಬಂದಿಯಿಂದ ಹಲ್ಲೆ
ಆಹಾರ ಅಧಿಕಾರಿ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವವರೆಗೂ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸದಂತೆ ಸಿಬ್ಬಂದಿಗೆ ಶೀಲಾ ಕೋರಿದ್ದಾರೆ. ಅಡುಗೆ ಮನೆಯ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದಾಗ ಹೋಟೆಲ್ ಸಿಬ್ಬಂದಿ ಆಕೆಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಜವರಿ 5: ಆಹಾರದಲ್ಲಿ ಜಿರಳೆ (Cockroach) ಕಾಣಿಸಿಕೊಂಡಿದ್ದನ್ನು ಪ್ರಶ್ನಿಸಿದ ಹೈಕೋರ್ಟ್ ವಕೀಲರೊಬ್ಬರ (Karnatka High Court Lawyer) ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಕೀಲೆ ಶೀಲಾ ದೀಪಕ್ ಅವರು ಗುರುವಾರ ಮಧ್ಯಾಹ್ನ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಅವರಿಗೆ ಬಡಿಸಿದ ಪನೀರ್ ಬಟರ್ ಮಸಾಲಾ ಖಾದ್ಯದಲ್ಲಿ ಜಿರಳೆ ಕಂಡುಬಂದಿತ್ತು. ನಂತರ ಅವರು ಮೊಬೈಲ್ ಫೋನ್ ಬಳಸಿ ಅಡುಗೆ ಮನೆಯ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದಾಗ ಇಬ್ಬರು ಮಹಿಳಾ ಸಿಬ್ಬಂದಿ ಮತ್ತು ಒಬ್ಬ ಪುರುಷ ಕೆಲಸಗಾರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಬಳಿಕ ಶೀಲಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಶೀಲಾ ಆಹಾರ ಅಧಿಕಾರಿಗೆ ಕರೆ ಮಾಡಿ ತನಗೆ ನೀಡಿದ ಆಹಾರದ ಬಗ್ಗೆ ದೂರು ನೀಡಿದ್ದಾರೆ. ಟ್ರಾಫಿಕ್ನಿಂದಾಗಿ ಅದೇ ದಿನ ಹೋಟೆಲ್ ತಲುಪಲು ಸಾಧ್ಯವಾಗದ ಕಾರಣ ಮರುದಿನ ಹೋಟೆಲ್ ಪರಿಶೀಲನೆ ನಡೆಸುವುದಾಗಿ ಆಹಾರ ಅಧಿಕಾರಿ ಶೀಲಾ ಅವರಿಗೆ ತಿಳಿಸಿದ್ದಾರೆ.
ಶೀಲಾ ಆಹಾರ ಅಧಿಕಾರಿಗೆ ದೂರು ನೀಡಿದ ನಂತರ ಹೋಟೆಲ್ ಸಿಬ್ಬಂದಿ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಆರಂಭಿಸಿದರು. ಆಹಾರ ಅಧಿಕಾರಿ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವವರೆಗೂ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸದಂತೆ ಸಿಬ್ಬಂದಿಗೆ ಶೀಲಾ ಕೋರಿದ್ದಾರೆ. ಅಡುಗೆ ಮನೆಯ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದಾಗ ಹೋಟೆಲ್ ಸಿಬ್ಬಂದಿ ಆಕೆಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮ್ಯಾಕ್‌ಬುಕ್ ಮೇಲೆ ಕಾಫಿ ಚೆಲ್ಲಿದ್ದಕ್ಕೆ ಆ್ಯಪಲ್ ವಿರುದ್ಧ ಬೆಂಗಳೂರು ಮಹಿಳೆ ಮೊಕದ್ದಮೆ
ಘಟನೆಯ ಸಂಬಂಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 341 (ಅಸಂಯಮದ ವರ್ತನೆ), 504 (ಉದ್ದೇಶಪೂರ್ವಕ ಅವಮಾನ), 353 (ಹಲ್ಲೆ) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Fri, 5 January 24