AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಿನಿಂದ ಮುಖ್ಯ ರಸ್ತೆಯೇ ಬಂದ್​​: ಕಮರ್ಷಿಯಲ್ ಸ್ಟ್ರೀಟ್ ಬಳಿ ವಾಹನ ಸಂಚಾರವೇ ದುಸ್ತರ

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಬಳಿ ರಾಜಕಾಲುವೆ ಹಾಗೂ ಪೈಪ್ ಲೈನ್ ಕಾಮಗಾರಿಗಾಗಿ ಮುಖ್ಯ ರಸ್ತೆಯನ್ನು ಒಂದು ತಿಂಗಳಿನಿಂದ ಬಂದ್ ಮಾಡಲಾಗಿದ್ದು, ಕುಂಟುತ್ತಾ ಸಾಗಿರುವ ಕಾಮಗಾರಿಯಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ತೀವ್ರ ಪರದಾಡುತ್ತಿದ್ದಾರೆ. ಎಂಜಿ ರಸ್ತೆ ಕಡೆಯಿಂದ ಫ್ರೆಜರ್ ಟೌನ್ ಕಡೆಗೆ ತೆರಳಲು ಇದುವೇ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಅಕ್ಕಪಕ್ಕದ ಪರ್ಯಾಯ ಮಾರ್ಗದ ರಸ್ತೆಗಳು ಕಿರಿದಾಗಿರುವ ಕಾರಣ ಸುಗಮ ಸಂಚಾರ ಕಷ್ಟಕರವಾಗಿದೆ.

ತಿಂಗಳಿನಿಂದ ಮುಖ್ಯ ರಸ್ತೆಯೇ ಬಂದ್​​: ಕಮರ್ಷಿಯಲ್ ಸ್ಟ್ರೀಟ್ ಬಳಿ ವಾಹನ ಸಂಚಾರವೇ ದುಸ್ತರ
ರಾಜಕಾಲುವೆ ದುರಸ್ತಿ ಕಾಮಗಾರಿImage Credit source: Tv9 Kannada
ಪ್ರಸನ್ನ ಹೆಗಡೆ
|

Updated on: Jun 15, 2026 | 8:15 AM

Share

ಬೆಂಗಳೂರು, ಜೂನ್​​ 15: ನಗರದ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್ ಆಗಿರುವ ಕಮರ್ಷಿಯಲ್ ಸ್ಟ್ರೀಟ್ ಬಳಿ ವಾಹನ ಸಂಚಾರವೇ ದುಸ್ತರವಾಗಿದೆ. ರಾಜಕಾಲುವೆ ದುರಸ್ತಿ ಹಾಗೂ ಪೈಪ್ ಲೈನ್ ಕಾಮಗಾರಿಗಾಗಿ ಮುಖ್ಯರಸ್ತೆಯನ್ನೇ ಬಂದ್ ಮಾಡಿ ಬರೋಬ್ಬರಿ ಒಂದು ತಿಂಗಳುಗಳೇ ಕಳೆದಿದ್ದು, ನಿಧಾನಗತಿಯ ಕಾಮಗಾರಿಯಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ಹೈರಾಣಾಗುತ್ತಿದ್ದಾರೆ. ಫ್ರೆಜರ್ ಟೌನ್ ಕಡೆಗೆ ತೆರಳಲು ವಾಹನ ಸವಾರರಿಗೆ ಬಹಳ ಕಿರಿಕಿರಿ ಉಂಟಾಗುತ್ತಿದೆ. ಸೂಕ್ತ ಪರ್ಯಾಯ ಮಾರ್ಗವೂ ಇಲ್ಲದ ಕಾರಣ ಸಮಸ್ಯೆ ಹೆಚ್ಚಿದೆ.

ಎಂಜಿ ರಸ್ತೆ ಕಡೆಯಿಂದ ಫ್ರೆಜರ್ ಟೌನ್ ಕಡೆಗೆ ತೆರಳಲು ಇದುವೇ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಅಕ್ಕಪಕ್ಕದ ಪರ್ಯಾಯ ಮಾರ್ಗದ ರಸ್ತೆಗಳು ಕಿರಿದಾಗಿರುವ ಕಾರಣ ಸುಗಮ ಸಂಚಾರ ಕಷ್ಟಕರ. ಹೀಗಿದ್ದರೂ ಒಂದು ತಿಂಗಳಿನಿಂದ ರಸ್ತೆ ಬಂದ್​​ ಮಾಡಿ ನಡೆಸುತ್ತಿರುವ ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗಿದೆ. ಯಾವಾಗ ಕಾಮಗಾರಿ ಮುಗಿಬಹುದೆಂಬ ಸ್ಪಷ್ಟತೆಯೂ ಇಲ್ಲದ ಕಾರಣ ಸ್ಥಳೀಯರೂ ಕೂಡ ಪರದಾಡುವಂತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ; ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್

ವಾಹನ ಸವಾರರ ಆಕ್ರೋಶ

ಕಾಮಗಾರಿ ವಿಳಂಬದಿಂದ ಸಂಚಾರವೇ ದುಸ್ಥರವಾಗಿದೆ ಎಂದು ವಾಹನ ಸವಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಕಾಮಗಾರಿ ಆರಂಭಿಸಿ 4 ತಿಂಗಳಾಗಿದ್ದರೆ ರಸ್ತೆ ಬಂದ್​​ ಮಾಡಿ ತಿಂಗಳು ಕಳೆದಿದೆ. ಇದರಿಂದಾಗಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳೂ ಅಲವತ್ತುಕೊಂಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇತ್ತ ಗಮನಹರಿಸಿ ಶೀಘ್ರವೇ ಕಾಮಗಾರಿ ಮುಗಿಸುವ ಮೂಲಕ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕಿದೆ.

ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ