AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ

Confident Group Chairman CJ Roy Suicide: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರು ಬೆಂಗಳೂರಿನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಶೂಟ್​ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಅಶೋಕ​​ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಅಸಲಿ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.

ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ
ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್Image Credit source: facebook profile
ಗಂಗಾಧರ​ ಬ. ಸಾಬೋಜಿ
|

Updated on:Jan 30, 2026 | 6:32 PM

Share

ಬೆಂಗಳೂರು, ಜನವರಿ 30: ರಿಯಲ್​ ಎಸ್ಟೇಟ್​ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ (C.J. Roy) ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ನಗರದ ಹೊಸೂರು ರಸ್ತೆಯ ಲ್ಯಾಂಗ್​ಫೋರ್ಡ್ ಟೌನ್​ನಲ್ಲಿರುವ ಕಚೇರಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಶೋಕ್​​ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್​​ನ ನಾರಾಯಣ ಆಸ್ಪತ್ರೆಗೆ ಸಿಜೆ ರಾಯ್ ಶವ ರವಾನಿಸಲಾಗಿದೆ.

ಆತ್ಮಹತ್ಯೆಗೆ ಕಾರಣವೇನು? 

ಸಿ.ಜೆ.ರಾಯ್​​ ಅವರು ಕಾನ್ಫಿಡೆಂಟ್ ಗ್ರೂಪ್​ ಎಂಬ ರಿಯಲ್​ ಎಸ್ಟೇಟ್​ ಕಂಪನಿಯನ್ನು ಹುಟ್ಟುಹಾಕಿದ್ದರು. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್​​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ತನ್ನ ತಂದೆ-ತಾಯಿ, ಸಹೋದರಿಯನ್ನು ಕೊಂದ ಯುವಕ: ಮಿಸ್ಸಿಂಗ್ ಕೇಸ್ ಕೊಡಲು ಹೋಗಿ ಸತ್ಯ ಕಕ್ಕಿದ ಭೂಪ!

ಹೊಸೂರು ರಸ್ತೆಯ ಲ್ಯಾಂಗ್​ಫೋರ್ಡ್ ಟೌನ್​ನಲ್ಲಿರುವ ಕಚೇರಿ ಮೇಲೆ IT ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, ಒಂದು ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಂ​ಗೆ ಹೋಗಿದ್ದು, ಈ ವೇಳೆ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಿ.ಜೆ.ರಾಯ್ ಕೊನೆಯುಸಿರೆಳೆದಿದ್ದಾರೆ.

ಖುದ್ದು ಡಿಸಿಪಿ ಅಕ್ಷಯ್​​ ಅವರು ತನಿಖೆ ನಡೆಸಿದ್ದು, ಈಗಾಗಲೇ ಫೈರ್ ಮಾಡಿಕೊಂಡ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಕಚೇರಿ ಕೊಠಡಿಯಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಯಾವುದಾದರೂ ಡೆತ್ ನೋಟ್ ಇದೆಯಾ ಅಥವಾ ಮೊಬೈಲ್​ನಲ್ಲಿ ಏನಾದ್ರೂ ಇದೆಯಾ ಅಥವಾ ಯಾರಿಗಾದ್ರೂ ಮೆಸೇಜ್ ಮಾಡಿದ್ದರಾ ಎಂದು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.

ಕಾನ್ಫಿಡೆಂಟ್ ಗ್ರೂಪ್ ಎಂಬ ಸಾಮ್ರಾಜ್ಯ ಕಟ್ಟಿದ್ದೇ ರೋಚಕ

ಕೇರಳ ಮೂಲದ ಸಾಮಾನ್ಯ ವ್ಯಕ್ತಿಯಾಗಿದ್ದ ಸಿಜೆ ರಾಯ್, 1997ರಲ್ಲಿ ಹೆಚ್​ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ತದನಂತರ ಕಾನ್ಫಿಡೆಂಟ್ ಗ್ರೂಪ್ ಎಂಬ ಸಾಮ್ರಾಜ್ಯ ಕಟ್ಟಿದ್ದೇ ರೋಚಕ. 30,40 ಸೈಟ್​ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶುರು ಮಾಡಿ, ಸದ್ಯ 1 ಸಾವಿರ ಎಕರೆ ಭೂಮಿ ಹೊಂದಿದ್ದರು.

ಇದನ್ನೂ ಓದಿ: ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನಿಧನ, ಬೆಂಗಳೂರು ಚಲೋ ಮುಂದೂಡಿಕೆ

ಇನ್ನು ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಹಿನ್ನೆಲೆ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಿಂದ ಐಟಿ ಅಧಿಕಾರಿಗಳು ವಾಪಸ್​​ ಆಗಿದ್ದಾರೆ. ಇಂದು ಬೆಳಗ್ಗೆ ದಾಳಿ ಮಾಡಿದ್ದ ಆದಾಯ ತೆರಿಗೆ ಅಧಿಕಾರಿಗಳು 2 ಕಾರುಗಳಲ್ಲಿ 10 ಜನರು ವಾಪಸ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:42 pm, Fri, 30 January 26

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ