ಪಿಂಕ್​ಲೈನ್ ನಮ್ಮ ಮೆಟ್ರೋ ಮಾರ್ಗದ ಮತ್ತೊಂದು ನಿಲ್ದಾಣದ ಹೆಸರು ಬದಲಾವಣೆಗೆ ಆಗ್ರಹ: ಬನ್ನೇರುಘಟ್ಟ ರಸ್ತೆ ಬಂದ್ ಎಚ್ಚರಿಕೆ

ಕಾಳೇನಅಗ್ರಹಾರದಿಂದ ನಾಗವಾರ ಮಾರ್ಗದ ಪಿಂಕ್ ಮೆಟ್ರೋ ಲೈನ್​​ ನಿಲ್ದಾಣಗಳ ಹೆಸರು ಬದಲಾವಣೆಗೆ ಮನವಿ ಪತ್ರಗಳು ಬರುತ್ತಿವೆ. ಈಗಾಗಲೇ ಮೂರು ಮೆಟ್ರೋ ಸ್ಟೇಷನ್​​ಗಳು ಹೆಸರು ಬದಲಿಸುವಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದಾರೆ. ಇದೀಗ ಐಐಎಂಬಿ ಮೆಟ್ರೋ ನಿಲ್ದಾಣದ ಹೆಸರು ಬದಲಿಸುವಂತೆ ಬಿಳೇಕಹಳ್ಳಿ ನಿವಾಸಿಗಳಿಂದ ಒತ್ತಾಯಿಸಲಾಗಿದೆ.

ಪಿಂಕ್​ಲೈನ್ ನಮ್ಮ ಮೆಟ್ರೋ ಮಾರ್ಗದ ಮತ್ತೊಂದು ನಿಲ್ದಾಣದ ಹೆಸರು ಬದಲಾವಣೆಗೆ ಆಗ್ರಹ: ಬನ್ನೇರುಘಟ್ಟ ರಸ್ತೆ ಬಂದ್ ಎಚ್ಚರಿಕೆ
ನಮ್ಮ ಮೆಟ್ರೋ
Image Credit source: tv9 kannada
Edited By:

Updated on: Sep 19, 2026 | 3:17 PM

ಬೆಂಗಳೂರು, ಸೆಪ್ಟೆಂಬರ್​​ 19: ಪಿಂಕ್​​ ಲೈನ್ ಮೆಟ್ರೋ ಮಾರ್ಗ ಶೀಘ್ರದಲ್ಲಿ ಓಪನ್​ ಆಗಲಿದೆ. ಇಂತಹ ಸಂದರ್ಭದಲ್ಲಿ ಮೆಟ್ರೋ ಸ್ಟೇಷನ್​​ಗಳ ಹೆಸರು ಬದಲಿಸುವಂತೆ ಸಚಿವರು ಸೇರಿದಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಇದೀಗ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಳೇನಅಗ್ರಹಾರದಿಂದ ನಾಗವಾರ ಮಾರ್ಗದ ಪಿಂಕ್ ​ಲೈನ್​​ನಲ್ಲಿ ಬರುವ ಐಐಎಂಬಿ ಮೆಟ್ರೋ ನಿಲ್ದಾಣದ ಹೆಸರನ್ನು ‘ಬಿಳೇಕಹಳ್ಳಿ ಐಐಎಂಬಿ ಮೆಟ್ರೋ ನಿಲ್ದಾಣ’ ಎಂದು ಬದಲಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ಪಿಂಕ್ ಲೈನ್‌ನ ನಾಲ್ಕನೇ ನಿಲ್ದಾಣದ ಹೆಸರು ಬದಲಿಗೆ ಪ್ರಸ್ತಾವನೆ

ಈಗಾಗಲೇ ಪಿಂಕ್​ಲೈನ್ ಮಾರ್ಗದ ಮೂರು ಮೆಟ್ರೋ ನಿಲ್ದಾಣಗಳ ಹೆಸರುಗಳನ್ನು ಬದಲಾಯಿಸುವಂತೆ ಬಿಟಿಎಂ ಲೇಔಟ್ ಶಾಸಕ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯ ನಿವಾಸಿಗಳ ಬಿಗಿಪಟ್ಟು

ಇದೀಗ ನಾಲ್ಕನೇ ನಿಲ್ದಾಣ ಐಐಎಂಬಿ ಮೆಟ್ರೋ ಸ್ಟೇಷನ್ ಹೆಸರು ಬದಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದಾರೆ.

ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ: ಬನ್ನೇರುಘಟ್ಟ ರಸ್ತೆ ಬಂದ್ ಎಚ್ಚರಿಕೆ

ಐಐಎಂಬಿ ಮೆಟ್ರೋ ನಿಲ್ದಾಣದ ಹೆಸರನ್ನು ‘ಬಿಳೇಕಹಳ್ಳಿ ಐಐಎಂಬಿ’ ಎಂದು ಬದಲಾಯಿಸಬೇಕೆಂದು ಆಗ್ರಹಿಸಿ ಬಿಳೇಕಹಳ್ಳಿ ನಿವಾಸಿಗಳು ನಿಲ್ದಾಣದ ಮುಂಭಾಗ ಪ್ರತಿಭಟಿಸಿದರು. ಒಂದು ವೇಳೆ ಹೆಸರನ್ನು ಬದಲಾಯಿಸದಿದ್ದರೆ ಬನ್ನೇರುಘಟ್ಟ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಹಾಗೂ ಸಾವಿರಾರು ಜನರು ಸೇರಿ ಬಿಎಂಆರ್‌ಸಿಎಲ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯ ಮುಖಂಡರು ಮತ್ತು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ಶಾಸಕ ಬಿ. ಶಿವಣ್ಣ ಮನವಿಗೆ ಸಚಿವರ ಸ್ಪಂದನೆ

ಇನ್ನು ಐಐಎಂಬಿ ಮೆಟ್ರೋ ನಿಲ್ದಾಣದ ಹೆಸರು ಬದಲಾಯಿಸುವಂತೆ ಆನೇಕಲ್ ಶಾಸಕ ಬಿ. ಶಿವಣ್ಣ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದರು. ಈ ಮನವಿಯನ್ನು ಪರಿಶೀಲನೆ ನಡೆಸುವಂತೆ ಸಚಿವ ಕೃಷ್ಣಬೈರೇಗೌಡ ಬಿಎಂಆರ್‌ಸಿಎಲ್ ಎಂಡಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us