Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷವೂ ಮಕ್ಕಳಿಗಿಲ್ಲ ಉಚಿತ ಶೂ, ಸಾಕ್ಸ್ ಭಾಗ್ಯ! ಕಾರಣವೇನು?

ಈಗ ಶೂ ಹಾಗೂ ಸಾಕ್ಸ್ ಯೋಜನೆಗೂ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಕೊರೊನಾ ಕಾರಣದಿಂದ ದೇಶ ಲರ್ನಿಂಗ್ ಲಾಸ್​ನಲ್ಲಿದೆ.

ಈ ವರ್ಷವೂ ಮಕ್ಕಳಿಗಿಲ್ಲ ಉಚಿತ ಶೂ, ಸಾಕ್ಸ್ ಭಾಗ್ಯ! ಕಾರಣವೇನು?
ಸಾಂದರ್ಭಿಕ ಚಿತ್ರ. Source: Deccan Chronicle
Follow us
TV9 Web
| Updated By: sandhya thejappa

Updated on:Jul 05, 2022 | 9:15 AM

ಬೆಂಗಳೂರು: ಪಠ್ಯಪುಸ್ತಕ ಪಠಿಷ್ಕರಣೆಯಿಂದ ಶಿಕ್ಷಣ ಇಲಾಖೆಗೆ (Education Department) ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಆರ್ಥಿಕ ಸಂಕಷ್ಟದ ಬಿಸಿ ಮಕ್ಕಳಿಗೂ ತಟ್ಟಿದ್ದು, ಈ ವರ್ಷವೂ ಮಕ್ಕಳಿಗೆ ಉಚಿತ ಶೂ (Shoe), ಸಾಕ್ಸ್ (Socks) ಭಾಗ್ಯ ಇಲ್ಲ. ಕೊರೊನಾ ಕಾರಣದಿಂದ ಮಕ್ಕಳಿಗೆ ಸೈಕಲ್ ವಿತರಣೆ ಮಾಡುತ್ತಿಲ್ಲ. ಈಗ ಶೂ ಹಾಗೂ ಸಾಕ್ಸ್ ಯೋಜನೆಗೂ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಕೊರೊನಾ ಕಾರಣದಿಂದ ದೇಶ ಲರ್ನಿಂಗ್ ಲಾಸ್​ನಲ್ಲಿದೆ. ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಪ್ರಮುಖ ಆದ್ಯತೆ ಎಂದು ಶಿಕ್ಷಣ ಇಲಾಖೆ ಯೋಜನೆಗೆ ಎಳ್ಳು ನೀರು ಬಿಡಲು ಮುಂದಾಗಿದೆ.

5 ಸಾವಿರ ಶಿಕ್ಷಕರ ನೇಮಕ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆಯಿದ್ದು, ಇದನ್ನು ನಿವಾರಿಸಲು ಪ್ರಸ್ತುತ ನೇಮಕಾತಿ ಹಂತದಲ್ಲಿರುವ 15 ಸಾವಿರ ಶಿಕ್ಷಕರ ಪೈಕಿ ಕಲ್ಯಾಣ ಕರ್ನಾಟಕ ಭಾಗದಿಂದಲೇ 5 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ ಸಚಿವ ಬಿಸಿ ನಾಗೇಶ್ ನಿನ್ನೆ ಹೇಳಿದರು.

ಇದನ್ನೂ ಓದಿ: Eknath Shinde: ಆ ಘಟನೆಯಿಂದ ಬದುಕೇ ಸಾಕೆನಿಸಿತ್ತು; ಮಕ್ಕಳ ನೆನೆದು ಭಾವುಕರಾದ ಏಕನಾಥ್ ಶಿಂಧೆ

ಇದನ್ನೂ ಓದಿ
Image
Jasprit Bumrah: ಕಪಿಲ್ ದೇವ್ ಹೆಸರಲ್ಲಿದ್ದ ಮತ್ತೊಂದು ದಾಖಲೆ ಪುಡಿ ಪುಡಿ ಮಾಡಿದ ಜಸ್​ಪ್ರೀತ್ ಬುಮ್ರಾ
Image
Petrol Price Today: ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆಗೆ ಏಕನಾಥ ಶಿಂದೆ ಕ್ರಮ; ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ
Image
Sai Pallavi: ಯಾರು ಎಷ್ಟೇ ಟೀಕೆ ಮಾಡಿದ್ರೂ ಸಾಯಿ ಪಲ್ಲವಿ ನಂ.1; ಧೂಳೆಬ್ಬಿಸುತ್ತಿದೆ ‘ವಿರಾಟ ಪರ್ವಂ’ ಸಿನಿಮಾ
Image
ಐಎಂಎ ಪ್ರಕರಣ: ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಅಹಮದ್ ಖಾನ್​ ಮನೆ ದಾಳಿ ನಡೆಸಿದ ಎಸಿಬಿ

ಮಕ್ಕಳಿಗೆ ಕಾಡುತ್ತಿದೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ: ಶಾಲಾ ಬ್ಯಾಗ್ ಹೊರೆಯಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆ ಪ್ರತಿ ಶನಿವಾರದಂದು ಬ್ಯಾಗ್ ಲೆಸ್ ಡೇ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಶನಿವಾರ ಮಕ್ಕಳ ಬ್ಯಾಗ್ ಹೊರೆ ಇಳಿಸಲು ನಿರ್ಧರಿಸಿರುವ ಇಲಾಖೆ, ಯೋಗ, ವ್ಯಾಯಾಮ ಚಟುವಟಿಕೆ ಮಾಡಿಸಲು ಸಲಹೆ ನೀಡಿದೆ. ಸದ್ಯ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Police Recruitment Scam: ಸಿಎಂ ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

Published On - 9:11 am, Tue, 5 July 22