AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ 3 ಸಬ್ ಇನ್ಸ್​​​ಪೆಕ್ಟರ್​​​​​ಗಳ ವಿರುದ್ಧ ಎಫ್​​ಐಆರ್: ಇಲ್ಲಿದೆ ಕೇಸಿನ ವಿವರ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ಹಲವರ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಮಹಿಳೆ ನೀಡಿದ್ದ ದೂರಿನ ಮೇರೆಗೆ ದಾಖಲಾಗಿರುವ ಈ ಎಫ್​​ಐಆರ್​​ನಲ್ಲಿ ಮೂವರು ಪೊಲೀಸ್ ಇನ್ಸ್​ಪೆಕ್ಟರ್​​​ಗಳ ಹೆಸರು ಇರುವುದು ಸಂಚಲನ ಮೂಡಿಸಿದೆ. ಹಾಗಾದ್ರೆ, ಎಫ್​​ಐಆರ್ನಲ್ಲಿ ಯಾರ್ಯಾರ ಹೆಸರು ಇದೆ? ಏನಿದು ಪ್ರಕರಣ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ 3 ಸಬ್ ಇನ್ಸ್​​​ಪೆಕ್ಟರ್​​​​​ಗಳ ವಿರುದ್ಧ ಎಫ್​​ಐಆರ್: ಇಲ್ಲಿದೆ ಕೇಸಿನ ವಿವರ
Munirathna
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 09, 2026 | 10:17 PM

Share

ಬೆಂಗಳೂರು, (ಸೆಪ್ಟೆಂಬರ್ 09): ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ FIR ದಾಖಲಾಗಿದೆ. ಸಂಚು ರೂಪಿಸಿ ಪ್ರಕರಣ ದಾಖಲಿಸಿದ್ದ ಆರೋಪ ಮೇಲೆ ಮಹಿಳೆ ನೀಡಿದ್ದ ದೂರಿನ ಆಧಾರದಲ್ಲಿ ಮುನಿರತ್ನ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಿರಣ್ ನಾಯ್ಡು, ಲೋಹಿತ್ ಗೌಡ, ಮಂಜುನಾಥ, ಲಕ್ಷ್ಮೀ ಜಯರಾಮ್, ಪೊಲೀಸ್ ಇನ್ಸ್​ಪೆಕ್ಟರ್​ಗಳಾದ ಅಯ್ಯಣ್ಣ ರೆಡ್ಡಿ, ಬಿ.ಎನ್.ಲೋಹಿತ್, ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಚಂದ್ರಶೇಖರ್ ವಿರುದ್ಧ ಸೆಕ್ಷನ್ 395, 363, 345(C), 354(A), 342, 323, 120(B), 504, 506, 66(E), 67 IT ಕಾಯ್ದೆ ಅಡಿ ಕೇಸ್ ದಾಖಲಾಗಿದೆ.

ಇನ್ನು ಎಫ್​​ಐಆರ್ ದಾಖಲಾಗುತ್ತಿದ್ದಂತೆಯೇ ಈ ಪ್ರಕರಣವನ್ನು ಎಸ್​​ಐಡಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ರಾಜರಾಜೇಶ್ವರಿನಗರ ಠಾಣೆ ಪೊಲೀಸರು SITಗೆ ಹಸ್ತಾಂತರ ಮಾಡಿದ್ದಾರೆ.

ಪ್ರಕರಣದ ಸಾರಾಂಶ

2018 ರ ಜುಲೈ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ರವಿಶಂಕರ್ ಎಂಬುವವನನ್ನು ಪರಿಚಯವಾಗಿ ಅಳವಡಿಸಿಕೊಂಡಿದ್ದ. 2019 ರಲ್ಲಿ ಧಾರವಾಡದಲ್ಲಿ ರವಿಶಂಕರ್ ನನ್ನನ್ನು ಅವನ ಸರ್ಕಾರಿ ವಸತಿಯಲ್ಲಿ ಸರ್ಕಾರಿ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಸುಮಾರು 3 ದಿನಗಳ ಕಾಲ ಅವರ ಜೊತೆಯಲ್ಲಿಯೇ ಇದ್ದೇನೆ. ಈ ಸಂಬಂಧ 06-10-2021 ರಂದು ದೆಹಲಿಯ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ರವಿಶಂಕರ್ ವಿರುದ್ಧ ದೂರು ಕಲಂ 376, 506, 509 ದಾಖಲಾಗಿತ್ತು. ಸದರಿ ಪ್ರಕರಣದಾಳಿ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿರುತ್ತದೆ.

ಆರೋಪಿಗಳು ಹನಿಟ್ರ್ಯಾಪ್ ಮಾಡುವ ಉದ್ದೇಶದಿಂದ 26-07-2021 ರಂದು ಬೆಂಗಳೂರಿನಿಂದ ವಿಜಯನಗರದಲ್ಲಿ ಲಕ್ಷ್ಮೀ ಜಯರಾಮ್ ಪರಿಚಯ ಮಾಡಿಕೊಂಡಿರುತ್ತಾರೆ. 12-08-2021 ರಂದು ಕಗ್ಗಲಿಪುರ ಗುಹಾಂತರ ರೆಸಾರ್ಟ್‌ಗೆ ಪೊಲೀಸರನ್ನು ಲಕ್ಷ್ಮಿ ಜಯರಾಮ್, ಕಾಮಾಕ್ಷಿ, ಯತೀಂದ್ರ, ಕಿರಣ ಅಲಿಯಾಸ್ ಕಿರಣ ನಾಯಕ್, ಮಂಜುನಾಥ ಅಲಿಯಾಸ್ ಮಂಜು, ಲೋಕೇಶ್ ಅಲಿಯಾಸ್ ಲೋಕಿ ರವರು ಕರೆದುಕೊಂಡು ಹೋಗಿರುತ್ತಾರೆ.

01-09-2021 ರಂದು ಹಾಗೂ ಇನ್ನೊಮ್ಮೆ ಒಟ್ಟು 2 ಬಾರಿ ಪೊಲೀಸರನ್ನು ಚಿಕ್ಕ ಬಳ್ಳಾಪುರದಲ್ಲಿರುವ ಅಗಲುಕರ್ಕ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಕಿರಣ ಅಲಿಯಾಸ್ ಕಿರಣ್ ನಾಯ್ಡು ಅತ್ಯಚಾರಕ್ಕೆ ಪ್ರಯತ್ನಿಸಿದ್ದು, ಉಳಿದವರು ಖಾಸಗಿ ಫೋಟೋಗಳನ್ನು ತೆಗೆದುಕೊಂಡಿರುತ್ತಾರೆ. 2021ರ ಅಕ್ಟೋಬರ್ ತಿಂಗಳಲ್ಲಿ ರೋಹಿತ್‌ ಗೌಡ ಅಲಿಯಾಸ್ ಲೋಕೇಶ್ ತನಗೆ ಬ್ಲಾಕ್ ಮೇಲೆ ಆಗಿದೆ ಎಂದು ಅನ್ನಪೂರ್ಣೇಶ್ವರಿ ನಗರದಲ್ಲಿ ಕೇಸ್ ನೀಡಿರುತ್ತಾರೆ. ಈ ಪ್ರಕರಣದಲ್ಲಿ 11-10-2021 ರಂದು ಪ್ರಸ್ತುತ ದೂರುದಾರೆ ಮನೆಯ ಶೋಧನೆ ಮಾಡಿ ಲ್ಯಾಪ್‌ಟಾಪ್, 4 ಮೊಬೈಲ್, ಹಾರ್ಡ್‌ಡಿಸ್ಕ್ ಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ಅರೆಸ್ಟ್ ಮಾಡಿ 11-10-2021 ರಿಂದ 13-10-2021 ರ 2 ದಿನಗಳ ಕಾಲ ಪೊಲೀಸರ ವಶಕ್ಕೆ ಬಂಧನದಲ್ಲಿರಿಸಿದ್ದರು. 13-10-2021 ರಂದು ಜೈಲಿಗೆ ಕಳುಹಿಸಿರುತ್ತಾರೆ. ಬಳಿಕ ಮನಿರತ್ನ ಅವರು ದೂರುದಾರ ಮಹಿಳೆ ಹಾಗು ಅವರ ಸಹೋದರಿಯನ್ನು ದೆಹಲಿಕೆ ಕರೆದುಕೊಂಡು ಹೋಗಿ ಅಲ್ಲಿ ಈ ಹಿಂದೆ ನೀಡಿದ್ದ ಕೇಸ್ ವಾಪಸ್ಸು ಪಡೆಯುವಂತೆ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us