ಭೋಜನಕೂಟದ ವೇಳೆ ಸಂಪುಟ ರಚನೆ ಬಗ್ಗೆ ಚರ್ಚೆ ಆಗಿಲ್ಲ, ಬರೀ ಊಟಕ್ಕೆ ಸೇರಿದ್ದೀವಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್
ಭೋಜನ ಮುಗಿಸಿ ಅಮಿತ್ ಶಾ ಸಿಎಂ ಮನೆಯಿಂದ ಜಿಂದಾಲ್ಗೆ ತೆರಳಿದ್ದು, ಜಿಂದಾಲ್ ಸಂಸ್ಥೆ ಮುಖ್ಯಸ್ಥ ಡಾ. ಸೀತಾರಾಂ ಆರೋಗ್ಯ ವಿಚಾರಿಸಲಿದ್ದಾರೆ. ಜಿಂದಾಲ್ನಿಂದ ಕೆಲವೇ ಹೊತ್ತಿನಲ್ಲಿ ಅಮಿತ್ ಷಾ ವಾಪಸಾಗಲಿದ್ದು, ಬಳಿಕ ರೆಸ್ಟ್ ಮಾಡಲು ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಲ್ಲಿದ್ದಾರೆ.
ಬೆಂಗಳೂರು: ಭೋಜನಕೂಟದ ವೇಳೆ ಸಂಪುಟ ರಚನೆ ಬಗ್ಗೆ ಚರ್ಚೆ ಆಗಿಲ್ಲ. ಅಮಿತ್ ಶಾ ಜೊತೆ ಎಲ್ಲಾ ನಾಯಕರು ಊಟ ಮಾಡಿದ್ದೇವೆ ಎಂದು ಬೆಂಗಳೂರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಜೊತೆ ಊಟ ಆಯ್ತು. ಬರೀ ಊಟಕ್ಕೆ ಸೇರಿದ್ದೀವಿ. ಅವರು ಇದ್ದಿದ್ದೇ ಹತ್ತು ನಿಮಿಷ. ಸಚಿವ ಸಂಪುಟ ವಿಸ್ತರಣೆ ಯಾವುದರ ಬಗ್ಗೆಯೂ ಚರ್ಚೆ ಮಾಡಲಿಲ್ಲ. ಬದಲಾವಣೆ ಇದೆಲ್ಲ ಮಾಧ್ಯಮಗಳಲ್ಲಿ ಬರ್ತಿದೆ ಅಷ್ಟೇ. ವರಿಷ್ಠರಿಗೆ ಜಗದೀಶ್ ಶೆಟ್ಟರ್ ಸಿಗುತ್ತಾರೆ, ಆದ್ರೆ ಸಿಎಂಗೆ ಸಿಗೋದಿಲ್ಲ ಅನ್ನೋ ವಿಚಾರ ಹಿನ್ನೆಲೆ ಆ ತರ ಏನೂ ಇಲ್ಲ ಅದೆಲ್ಲ ನೀವೂ ಹೇಳ್ತಿರೋದಷ್ಟೇ. ಇವತ್ತು ಸರ್ಕಾರಿ ಕಾರ್ಯಕ್ರಮ ಅದಕ್ಕೆ ಬಂದಿದ್ರು. ಇಲ್ಲಿ ಭೊಜನಕ್ಕೆ ಬಂದಿದ್ರು, ಸಂಜೆ ಕೂಡ ಕಾರ್ಯಕ್ರಮ ಇದೆ. ಅಲ್ಲಿಗೂ ಅವರು ಹೋಗುತ್ತಾರೆ ಎಂದು ಹೇಳಿದರು.
ಭೋಜನ ಮುಗಿಸಿ ಅಮಿತ್ ಶಾ ಸಿಎಂ ಮನೆಯಿಂದ ಜಿಂದಾಲ್ಗೆ ತೆರಳಿದ್ದು, ಜಿಂದಾಲ್ ಸಂಸ್ಥೆ ಮುಖ್ಯಸ್ಥ ಡಾ. ಸೀತಾರಾಂ ಆರೋಗ್ಯ ವಿಚಾರಿಸಲಿದ್ದಾರೆ. ಜಿಂದಾಲ್ನಿಂದ ಕೆಲವೇ ಹೊತ್ತಿನಲ್ಲಿ ಅಮಿತ್ ಷಾ ವಾಪಸಾಗಲಿದ್ದು, ಬಳಿಕ ರೆಸ್ಟ್ ಮಾಡಲು ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಲ್ಲಿದ್ದಾರೆ.
ರಾಜ್ಯ ಬಿಜೆಪಿ ಬೆಳವಣಿಗೆ ಮೇ 6 ರವರೆಗೆ ಮುಂದೂಡಿಕೆಯಾಗಿದ್ದು, ವಿದೇಶ ಪ್ರವಾಸದಿಂದ ಪ್ರಧಾನಿ ವಾಪಾಸಾದ ಬಳಿಕ ರಾಜ್ಯದ ಬೆಳವಣಿಗೆ ಬಗ್ಗೆ ಚರ್ಚೆ ನಡೆಯಲಿದೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿನ ಪಕ್ಷದ ನಿರ್ಧಾರ ಪ್ರಧಾನಿ ಮೋದಿ ಜೊತೆಯೇ ಚರ್ಚಿಸಿ ತೆಗೆದುಕೊಳ್ಳಬೇಕಿರುವ ಕಾರಣ ಮೇ 6 ರ ಬಳಿಕವೇ ಚಿತ್ರಣ ಗೊತ್ತಾಗಲಿದೆ. ಮೇ 5 ರ ರಾತ್ರಿ ವಿದೇಶದಿಂದ ವಾಪಾಸಾಗಲಿರುವ ಪ್ರಧಾನಿ ಮೋದಿ, ಮೇ 6 ರ ಬಳಿಕ ಅಮಿತ್ ಷಾ, ಜೆ.ಪಿ. ನಡ್ಡಾ ಮತ್ತು ಬಿ.ಎಲ್. ಸಂತೋಷ್ ಜೊತೆ ಚಿರ್ಚೆ ನಡೆಸಲ್ಲಿದ್ದಾರೆ. ಸದ್ಯಕ್ಕೆ ಎರಡು ಪ್ಲಾನ್ ಇಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್, ಒಂದು ಸಿಎಂ ಬದಲಾವಣೆ ಸಹಿತ ಸಂಪುಟ ಪುನಾರಚನೆ ಆದ್ರೆ, ಇನ್ನೊಂದು ಸಿಎಂ ಬದಲಾವಣೆ ಇಲ್ಲದೇ ಸಂಪುಟ ಪುನಾರಚನೆ.
ಅಮಿತ್ ಶಾ ಭೇಟಿ ಮಾಡದೇ ವಾಪಸ್ ತೆರಳಿದ ಈಶ್ವರಪ್ಪ: ಅಮಿತ್ ಶಾ ಭೇಟಿಗಾಗಿಯೇ ಶಿವಮೊಗ್ಗದಿಂದ ಆಗಮಿಸಿದ್ದ ಮಾಜಿ ಸಚಿವ ಈಶ್ವರಪ್ಪ ಭೇಟಿಯಾಗದೇ ವಾಪಸ್ ಆಗಿದ್ದಾರೆ. ಈಶ್ವರಪ್ಪ ಅಮಿತ್ ಶಾ ಕಚೇರಿ ಸೂಚನೆ ಮೇರೆಗೆ ಬಂದಿದ್ದರು. ಆದರೆ ಭೋಜನ ಕೂಟದಲ್ಲಿ ಭಾಗಿಯಾಗದೆ ವಾಪಸ್ ತೆರಳಿದ್ದಾರೆ.
ಕೇವಲ ಊಹಾಪೋಹ ಅಷ್ಟೇ; ಬಿವೈ ವಿಜಯೇಂದ್ರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಅಷ್ಟೇ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆಗಾಗಿ ಬಹಳಷ್ಟು ಶಾಸಕರು ನಿರೀಕ್ಷೆಯಲ್ಲಿದ್ದಾರೆ. ದೆಹಲಿಯಲ್ಲೂ ಸಿಎಂ ಬೊಮ್ಮಾಯಿ ಹಲವು ಬಾರಿ ಚರ್ಚಿಸಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋ ಭರವಸೆ ಇದೆ. ಸಚಿವ ಸ್ಥಾನದ ಆಸೆ ಇಟ್ಟುಕೊಂಡು ನಾನು ಕೆಲಸ ಮಾಡುತ್ತಿಲ್ಲ. ಭರವಸೆಯಿಟ್ಟು ನನಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆ ವಿಶ್ವಾಸದಲ್ಲೇ ನಾನು ಕೆಲಸ ಮಾಡ್ತಿದ್ದೇನೆ ಎಂದಿದ್ದಾರೆ.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:09 pm, Tue, 3 May 22