ಬೆಂಗಳೂರು: ಚಿನ್ನಾಭರಣ ಅಂಗಡಿಗೆ ನುಗ್ಗಿದ ಖದೀಮರು, ಗುಂಡು ಹಾರಿಸಿ ಕೆಜಿಗಟ್ಟಲೇ ಚಿನ್ನದೊಂದಿಗೆ ಪರಾರಿ
ಎರಡು ಬೈಕ್‌ಗಳಲ್ಲಿ ಬಂದಿದ್ದ ಮೂರು-ನಾಲ್ಕು ದರೋಡೆಕೋರರು ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್‌ಗೆ ನುಗ್ಗಿ ಅಂಗಡಿಯಲ್ಲಿದ್ದ ಮಾಲೀಕ ಮನೋಜ್ ಅವರಿಗೆ ಬಂದೂಕು ತೋರಿಸಿ ಬೆದರಿಸಿ ಹಣ ನೀಡಲು ಹೇಳಿದ್ದಾರೆ. ಇದಕ್ಕೆ ಹೆದರದಿದ್ದಾಗ ಮನೋಜ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಶಾಪ್‌ನಲ್ಲಿದ್ದ ಚಿನ್ನಾಭರಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.

ಬೆಂಗಳೂರು, ಅ.12: ಸಿನಿಮೀಯ ರೀತಿಯಲ್ಲಿ ಕೈಯಲ್ಲಿ ಬಂದೂಕು ಹಿಡಿದು ಚಿನ್ನಾಭರಣ ಮಾರಾಟ ಮಳಿಗೆಗೆ ನುಗ್ಗಿ ಗುಂಡು ಹಾರಿಸಿ ದರೋಡೆ ಮಾಡಲಾಗಿರುವ ದುಷ್ಕೃತ್ಯ ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ (Robbery). ಘಟನೆಯಲ್ಲಿ ಮನೋಜ್ ಎಂಬ ವ್ಯಕ್ತಿಗೆ ಗುಂಡು ತಗುಲಿದೆ. ಜನ ಓಡಾಡುವ ಸಮಯದಲ್ಲೇ ಕೊಂಚವೂ ಭಯವಿಲ್ಲದೆ 3-4 ದರೋಡೆಕೋರರು ವಿನಾಯಕ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ ಮನೋಜ್ ಮೇಲೆ ಗುಂಡುಹಾರಿಸಿ ಕೆಜಿಗಟ್ಟಲೆ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಹತ್ತಿರ ಬಂದವರಿಗೆ ಗನ್ ತೋರಿಸಿ ಬೆದರಿಸಿದ್ದಾರೆ. ಸದ್ಯ ಗಾಯಾಳು ಮನೋಜ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗುರುವಾರ (ಅ.12) ಬೆಳಗ್ಗೆ 10.45ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಂದಿದ್ದ ಮೂರು-ನಾಲ್ಕು ದರೋಡೆಕೋರರು ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್‌ಗೆ ನುಗ್ಗಿ ಅಂಗಡಿಯಲ್ಲಿದ್ದ ಮಾಲೀಕ ಮನೋಜ್ ಅವರಿಗೆ ಬಂದೂಕು ತೋರಿಸಿ ಬೆದರಿಸಿ ಹಣ ನೀಡಲು ಹೇಳಿದ್ದಾರೆ. ಇದಕ್ಕೆ ಹೆದರದಿದ್ದಾಗ ಮನೋಜ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಶಾಪ್‌ನಲ್ಲಿದ್ದ ಚಿನ್ನಾಭರಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಸುಮಾರು 1 ಕೆಜಿಗೂ ಹೆಚ್ಚು ಚಿನ್ನಾಭರಣ ದರೋಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ದರೋಡೆಕೋರರು ಪರಾರಿಯಾಗುವಾಗ ಖದೀಮರನ್ನು ತಡೆಯಲು ಬಂದವರಿಗೂ ಬಂದೂಕು ತೋರಿಸಿ ಹೆದರಿಸಿದ್ದಾರೆ. ಸದ್ಯ ಗಾಯಾಳು ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಘಟನೆ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಪ್ರತಿಕ್ರಿಯೆ ನೀಡಿದ್ದು, ಇದುವರೆಗೂ ಒಂದು ಕೆಜಿಗೂ ಅಧಿಕ ಚಿನ್ನಾಭರಣ ದರೋಡೆ ಆಗಿರುವ ಬಗ್ಗೆ ಮಾಹಿತಿ ಇದೆ. ನಾಲ್ವರು ಬಂದು ಈ ಕೃತ್ಯವನ್ನು ಮಾಡಿದ್ದಾರೆ. ಎರಡು ಬೈಕ್‌ನಲ್ಲಿ ಬಂದಿದ್ದು ಒಂದು ಬೈಕ್ ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದ್ದು ಪತ್ತೆ ಕಾರ್ಯ ನಡೀತಾ ಇದೆ. ಚಿನ್ನಾಭರಣ ದೋಚಿ ಪರಾರಿಯಾಗುವಾಗ ಮಾಲೀಕ ಹಿಡಿಯಲು ಹೋಗಿದ್ದಾನೆ. ಈ ವೇಳೆ ತಮ್ಮ ಬಳಿ ಇದ್ದ ಗನ್‌ನಿಂದ ಫೈರ್ ಮಾಡಿದ್ದಾರೆ. ತೊಡೆ ಭಾಗಕ್ಕೆ ಫೈರ್ ಮಾಡಿದ್ದು ಚಿಕಿತ್ಸೆ ಪಡೀತಾ ಇದ್ದಾರೆ. ನಾಲ್ವರು ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಬಲ್ ಡೇಟಿಂಗ್ ಆ್ಯಪ್ನಲ್ಲಿ ಭೇಟಿ, ವ್ಯಕ್ತಿಯಿಂದ ಚಿನ್ನ, ನಗದು, ಐಫೋನ್ ಕದ್ದು ಮಹಿಳೆ ಪರಾರಿ
ATMಗೆ ನುಗ್ಗಿ 6.50 ಲಕ್ಷ ರೂ. ದೋಚಿದ ಖದೀಮರು
ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಹರ್ಷಾ ಕಾಂಪ್ಲೆಕ್ಸ್ ಬಳಿಯ ATMಗೆ ಖದೀಮರು ಕನ್ನ ಹಾಕಿದ್ದಾರೆ. ಎಟಿಎಂ ಮಶೀನ್ ಮುರಿದು 6.50 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಬೆಳಗಿನ ಜಾವ ಕರ್ನಾಟಕ ಬ್ಯಾಂಕ್ನ ATMಗೆ ನುಗ್ಗಿದ ಖದೀಮರು ಗ್ಯಾಸ್ ಕಟರ್ ಬಳಸಿ ATM ಮುರಿದು ಕಳ್ಳತನ ಮಾಡಿದ್ದಾರೆ. 10 ನಿಮಿಷದಲ್ಲಿ ATM ನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:32 pm, Thu, 12 October 23



