ವಾಚ್ ಪ್ರಿಯರಿಗೆ ಗುಡ್ ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ

ಕನ್ನಡ ರಾಜ್ಯೋತ್ಸವಕ್ಕೆ HMT ಕನ್ನಡಿಗ ವಾಚ್‌ಗಳನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. 4 ಹೊಸ ಮಾಡೆಲ್‌ಗಳು ಜನರಲ್ಲಿ ಭಾವನಾತ್ಮಕ ಸಂಬಂಧ ಮರುಕಳಿಸಲಿದೆ. ಜೊತೆಗೆ, ಕೈಗಾರಿಕಾ ಅಭಿವೃದ್ಧಿ, 'ಮೇಕ್ ಇನ್ ಇಂಡಿಯಾ' ಯೋಜನೆ ಮತ್ತು ರಾಜ್ಯದಲ್ಲಿ ಹೂಡಿಕೆ ಆಕರ್ಷಿಸಲು ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ವಾಚ್ ಪ್ರಿಯರಿಗೆ ಗುಡ್ ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ
ಹೆಚ್​​​ಎಂಟಿ ವಾಚ್​ (ಸಂಗ್ರಹ ಚಿತ್ರ)

Updated on: Oct 31, 2026 | 3:27 PM

ಮುಖ್ಯಾಂಶಗಳು

  • ಕನ್ನಡ ರಾಜ್ಯೋತ್ಸವದ ಸ್ಮರಣಾರ್ಥ HMT ಕನ್ನಡಿಗ ವಾಚ್ ಬಿಡುಗಡೆ
  • ನಾಳೆ ಬೆಂಗಳೂರಿನಲ್ಲಿ HMT ಕನ್ನಡಿಗ ವಾಚ್ ಬಿಡುಗಡೆ
  • ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರು, ಅಕ್ಟೋಬರ್​​ 31: ಇತ್ತೀಚೆಗೆ ಸ್ವಾತಂತ್ರ್ಯೋತ್ಸವ ಅಂಗವಾಗಿ ಬಿಡುಗಡೆ ಆಗಿದ್ದ ಹೆಚ್​ಎಂಟಿ ವಾಚ್​ ಅನ್ನು ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತು ಮುಗಿಬಿದ್ದು ಜನರು ಖರೀದಿ ಮಾಡಿದ್ದರು. ಆ ಮೂಲಕ ಭರ್ಜರಿ ಸ್ಪಂದನೆ ದೊರೆತಿತ್ತು. ಇದೀಗ ವಾಚ್ ಪ್ರಿಯರಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ನಾಳೆ ಬೆಂಗಳೂರಿನಲ್ಲಿ 4 ಹೊಸ ಮಾಡೆಲ್ HMT ಕನ್ನಡಿಗ ವಾಚ್​ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯೋತ್ಸವ ಸ್ಮರಣಾರ್ಥ ಹೊಸ ಹೆಚ್​​​ಎಂಟಿ ವಾಚ್​

ನವ ದೆಹಲಿಯಲ್ಲಿ ಈ ಕುರಿತಾಗಿ ಮಾಹಿತಿ ನೀಡಿರುವ ಹೆಚ್​.ಡಿ.ಕುಮಾರಸ್ವಾಮಿ, ‘71ನೇ ಕನ್ನಡ ರಾಜ್ಯೋತ್ಸವದ ಸ್ಮರಣಾರ್ಥ ನಾಳೆ ಬೆಂಗಳೂರಿನಲ್ಲಿ 4 ಹೊಸ ಮಾದರಿಯ ಹೆಚ್​​​ಎಂಟಿ ಕನ್ನಡಿಗ ವಾಚ್ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ಅಂಗವಾಗಿ HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ

‘ಈ ಹಿಂದೆ ಹೆಚ್​ಎಂಟಿ ವಾಚ್​​ ಬಗ್ಗೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದರು. ಆ ರೀತಿಯ ಭಾವನಾತ್ಮಕ ಸಂಬಂಧ ಮರುಕಳಿಸುವ ಯೋಜನೆ ಮಾಡಿದ್ದೇವೆ. ಮೊದಲು ಹೆಚ್​ಎಂಟಿ ವಾಚ್​ಗಳನ್ನು ಹೆಚ್ಚು ಜನರು ಖರೀದಿಸುತ್ತಿದ್ದರು. ಇನ್ಮುಂದೆ ಕೂಡ ಅದೇ ರೀತಿ ವಾಚ್ ಖರೀದಿಸುವಂತೆ ಕ್ರಮ ಕೈಗೊಳ್ಳುವುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರೆಂಡಿಂಗ್​ನಲ್ಲಿದೆ ಎಚ್​ಎಂಟಿ ಗಂಡಬೇರುಂಡ ವಾಚು; ಕನ್ನಡಿಗರ ಈ ಅಚ್ಚುಮೆಚ್ಚಿನ ಕೈಗಡಿಯಾರದ ವಿಶೇಷತೆ ಏನು ಗೊತ್ತಾ?

‘ಹೆಚ್​ಎಂಟಿ ವಾಚ್​​​ನ ಹೊಸ ಆವಿಷ್ಕಾರದ ಮಾಡೆಲ್ ತಂದಿದ್ದೇವೆ. ದೀಪಂ ಕಂಪನಿಯ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ನಾಳೆ ಬೆಂಗಳೂರಿನಲ್ಲೂ ಜನರಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ನಡೆಯುತ್ತಿದೆ. ಕಡಿಮೆ ಬೆಲೆಯಲ್ಲಿ ಬ್ರಾಂಡೆಡ್ ವಾಚ್​​ಗಳ ತಯಾರಿ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ. 1800 ರಿಂದ 3500 ರೂ. ವರೆಗೆ ಬ್ರಾಂಡೆಡ್ ವಾಚ್​ಗಳು ಸಿಗಲಿವೆ’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:27 pm, Sat, 31 October 26

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us