ಬೆಂಗಳೂರು: ಎ ಖಾತಾ ಪರಿವರ್ತನೆ ಹೆಸರಿನಲ್ಲಿ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ (Aam Aadmi Party) ನಗರಾಧ್ಯಕ್ಷ ಮೋಹನ್ ದಾಸರಿ ಹೇಳಿಕೆ ನೀಡಿದ್ದಾರೆ. 8 ಲಕ್ಷ ಬಿ ಖಾತಾ ಆಸ್ತಿಗಳು ಈ ಹಿಂದೆ ಬೆಂಗಳೂರಿನಲ್ಲಿ ಇತ್ತು. ಇದೀಗಾ 6 ಲಕ್ಷಾ ಮಾತ್ರ ಇದೆ ಎಂದು ಬಿಬಿಎಂಪಿ ಹೇಳ್ತಾ ಇದೆ. ಇದುವರೆಗೂ 2 ಲಕ್ಷಕ್ಕೂ ಅಧಿಕ ಆಸ್ತಿಗಳು ಅಕ್ರಮವಾಗಿ ಬಿ ಖಾತೆಯಿಂದ ಎ ಖಾತೆ ಪಡೆದಿದ್ದಾರೆ. ಇಷ್ಟು ದಿನ ಗುಟ್ಟಾಗಿ ನಡೆಯುತ್ತಿದ್ದ ಖಾತೆ ಮಾರ್ಪಾಡು ಮಾಡುವ ದಂದೆ ಇದೀಗ ಖುಲಂ ಖುಲಂ ನಡೆಯುತ್ತಿದ್ದೆ. ಬಿ ಖಾತೆದಿಂದ ಎ ಖಾತೆ ಕನ್ವರ್ಟ್ ಹೆಸರಿನಲ್ಲಿ ಬಿಬಿಎಂಪಿ ವಲಯಗಳನ್ನು ಲಂಚಾವತರ ಹೆಚ್ಚಾಗಿದೆ. ಈಗಾಗ್ಲೇ ಖಾತೆ ವರ್ಗಾವಣೆ ವಿಚಾರವಾಗಿ ಆನ್ಲೈನ್ ವ್ಯವಸ್ಥೆ ಬಿಬಿಎಂಪಿಯಲ್ಲಿದೆ. ಇದೇ ವ್ಯವಸ್ಥೆಯನ್ನು ಎ ಖಾತೆ ಕನ್ವರ್ಷನ್ ಆನ್ಲೈನ್ ವ್ಯವಸ್ಥೆಗೆ ಬರಬೇಕು ಎಂದು ನಾವು ಆಗ್ರಹಿಸುತ್ತೇದೇವೆ. ಖಾತೆ ಪರಿವರ್ತನೆ ಬಗ್ಗೆ ಜನರಲ್ಲಿ ಜಾಗೃತಿಗೊಳಿಸಿ. ಈ ಬಗ್ಗೆ ಅರಿವು ಮೂಡಿಸಲು ಮೇಳಗಳನ್ನ ನಡೆಸಿ. ಇದಾದ ನಂತರವಷ್ಟೇ ಖಾತಾ ಪರಿವರ್ತನೆ ವಿಚಾರಕ್ಮೆ ಕೈಹಾಕಿ. ಖಾತಾ ಪರಿವರ್ತನೆ ಹೆಸರಿನಲ್ಲಿ ಮೂರು ಪಕ್ಷದ ನಾಯಕರು ಲೂಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಖಾತೆ ಪರಿವರ್ತನೆ ಮಾಡ್ತಿರೋದು ಒಳ್ಳೆಯ ವಿಚಾರ. ಆದ್ರೇ ಇದು ಬಿಬಿಎಂಪಿ ಕಚೇರಿಯಲ್ಲಿ ಮಾಡಬಾರ್ದು. ಆನ್ಲೈನ್ ಮೂಲಕ ಖಾತ ಪರಿವರ್ತನೆ ಮಾಡಬೇಕು ಎಂದು ಆಪ್ ಮುಖಂಡ ಅಶೋಕ್ ಮೃತ್ಯುಂಜಯ ಹೇಳಿಕೆ ನೀಡಿದ್ದಾರೆ. ಮೇಳಗಳನ್ನು ಆಯೋಜನೆ ಮಾಡುವ ಮೂಲಕ ಖಾತ ಪರಿವರ್ತನೆ ಮಾಡಬೇಕು. ಸಾರ್ವಜನಿಕರಿಗೆ ಇರುವ ಸಮಸ್ಯೆಗಳನ್ನು ಗೊಂದಲಗಳನ್ನು ಪರಿಹರಿಸಲು ಸಹಾಯವಾಣಿ ತೆರೆಯ ಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಹಿಡಿದು ಲಂಚದ ಬೇಡಿಕೆ ಮಾಡೋದನ್ನು ನಿಲ್ಲಿಸ ಬೇಕು ಎಂಬುದು ನಮ್ಮ ಆಗ್ರಹ. ಖಾತ ಪರಿವರ್ತನೆ ಮಾಡೋ ಮೂಲಕ ಸರ್ಕಾರ ಎಲೆಕ್ಷನ್ಗಾಗಿ ಹಣ ಸಂಗ್ರಹಣೆ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ;
ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಬಾಲಕನ ಮೇಲೆ ನಾಯಿ ದಾಳಿ; ಚಿಕಿತ್ಸೆ ಫಲಿಸದೇ ಬಾಲಕ ಸಾವು
ಕೊವಿಡ್ 4ನೇ ಅಲೆಯ ಭೀತಿ; ಪಾಟ್ನಾದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ BA.2.12 ಮೊದಲ ಪ್ರಕರಣ ಪತ್ತೆ
Published On - 3:49 pm, Thu, 28 April 22