ಕಾರು ಅಪಘಾತ ಮಾಹಿತಿ ನೀಡದ ರೂಪಾ ಮೌದ್ಗಿಲ್; ಪರಿಣಾಮ‌ ನಿಗಮವೇ ಕಾರಿನ ರಿಪೇರಿಗೆ ಹಣ ಖರ್ಚು ಮಾಡಬೇಕಿದೆ- ರೂಪಾ ವಿರುದ್ಧ ಮುಗಿಬಿದ್ದ ಬೇಳೂರು ರಾಘವೇಂದ್ರ ಶೆಟ್ಟಿ

Belur Raghavendra Shetty: ರೂಪಾ ಮೌದ್ಗಿಲ್ ಎರಡು ದಿನಕ್ಕೊಮ್ಮೆ ಆಫೀಸ್ ಗೆ ಬರುತ್ತಾರೆ. ಮನೆಗೆ ಫೈಲ್ ತರಿಸಿಕೊಂಡು ಮನೆಯಲ್ಲೇ‌ ಕೆಲಸ‌ ಮಾಡ್ತಾರೆ. ರೂಪಾ ಮೌದ್ಗಿಲ್ ನಿಗಮಕ್ಕೆ ಹೊರೆ ತಂದಿದ್ದಾರೆ. ಒಂದು‌ ಮನೆಯ ಬಳಕೆಗೆ, ಮತ್ತೊಂದು ಅವರ ವೈಯಕ್ತಿಕ ಬಳಕೆಗೆ ವಾಹನಗಳ ಬಳಕೆ ಮಾಡುತ್ತಿದ್ದಾರೆ. ನಿಗಮದ ಅಧ್ಯಕ್ಷರಾದ ನನಗೇ‌ ಕಚೇರಿಯ ದಾಖಲೆಗಳನ್ನು ಕೊಡುವುದಿಲ್ಲ.

ಕಾರು ಅಪಘಾತ ಮಾಹಿತಿ ನೀಡದ  ರೂಪಾ ಮೌದ್ಗಿಲ್; ಪರಿಣಾಮ‌ ನಿಗಮವೇ ಕಾರಿನ ರಿಪೇರಿಗೆ ಹಣ ಖರ್ಚು ಮಾಡಬೇಕಿದೆ- ರೂಪಾ ವಿರುದ್ಧ ಮುಗಿಬಿದ್ದ ಬೇಳೂರು ರಾಘವೇಂದ್ರ ಶೆಟ್ಟಿ
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 02, 2022 | 7:30 PM

ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಮತ್ತು ನಿಗಮದ ಅಧ್ಯಕ್ಷ ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿದ್ದು, ಎಂಡಿ ರೂಪಾ ಮೌದ್ಗಿಲ್ (IPS D Roopa Moudgil) ಮತ್ತು ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ (Belur Raghavendra Shetty) ನಡುವಣ ಜಟಾಪಟಿ ಮುಂದುವರಿದಿದೆ. ನಿಗಮದ ಆಯಕಟ್ಟಿನ ಜಾಗದಲ್ಲಿ ಕುಳಿತು ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿರುವ ಇಬ್ಬರೂ ತೂ ತೂ ಮೈ ಮೈ ಅನ್ನುತ್ತಿದ್ದಾರೆ (Misappropriation). IPS ರೂಪಾ ಮೌದ್ಗಿಲ್ ಮತ್ತು ಜನಪ್ರತಿನಿಧಿ ಬೇಳೂರು ರಾಘವೇಂದ್ರ ಶೆಟ್ಟಿ ಇಬ್ಬರೂ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದ್ದಾರೆ (Karnataka Handicrafts Development Corporation – Cauvery Handicrafts -KSHDCL).

ರೂಪಾ ಮೌದ್ಗಿಲ್ ಆರೋಪಕ್ಕೆ ಬೇಳೂರು ರಾಘವೇಂದ್ರ ಶೆಟ್ಟಿ ಪ್ರತ್ಯುತ್ತರ ನೀಡಿದ್ದು, ಅದರ ಪೂರ್ಣ ಪಾಠ ಇಲ್ಲಿದೆ:

ಐಪಿಎಸ್​ ಅಧಿಕಾರಿ ಡಿ.ರೂಪಾ 2 ದಿನಕ್ಕೊಮ್ಮೆ ಕಚೇರಿ​ಗೆ ಬರ್ತಾರೆ. ಫೈಲ್​​ಗಳನ್ನು ತರಿಸಿಕೊಂಡು ಮನೆಯಲ್ಲೇ‌ ಕೆಲಸ‌ ಮಾಡ್ತಾರೆ ಎಂದು ವಿಧಾನಸೌಧದಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪ ಮಾಡಿದ್ದಾರೆ. ನಿಗಮದ ಅಧ್ಯಕ್ಷರಾದ ನನಗೆ ಕಚೇರಿ ದಾಖಲೆಗಳನ್ನು ಕೊಡುವುದಿಲ್ಲ. ನನ್ನ ಕಚೇರಿಯಲ್ಲಿ ಸಿಸಿ ಕ್ಯಾಮರಾ ಕನೆಕ್ಷನ್ ಕಡಿತಗೊಳಿಸಿದ್ದಾರೆ. 5 ಕೋಟಿ ರೂಪಾಯಿ ಅವ್ಯವಹಾರ‌ ನನ್ನ ಅವಧಿಯಲ್ಲಿ ಆಗಿಲ್ಲ. ಇದರಿಂದ ರೂಪಾ ಅವರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

Also Read:

‘ಎತ್ತಿಕೊಂಡು ಹೋದ’ ಕಲಾಕೃತಿಗಳ ವೆಚ್ಚ ಭರಿಸುವಂತೆ ಬೇಳೂರು ರಾಘವೇಂದ್ರ ಶೆಟ್ಟಿಗೆ ನೋಟಿಸ್ ಕಳಿಸಿದ ರೂಪಾ ಮೌದ್ಗಿಲ್

ರೂಪಾ ಮೌದ್ಗಿಲ್ ಎರಡು ದಿನಕ್ಕೊಮ್ಮೆ ಆಫೀಸ್ ಗೆ ಬರುತ್ತಾರೆ. ಮನೆಗೆ ಫೈಲ್ ತರಿಸಿಕೊಂಡು ಮನೆಯಲ್ಲೇ‌ ಕೆಲಸ‌ ಮಾಡ್ತಾರೆ. ರೂಪಾ ಮೌದ್ಗಿಲ್ ನಿಗಮಕ್ಕೆ ಹೊರೆ ತಂದಿದ್ದಾರೆ. ಒಂದು‌ ಮನೆಯ ಬಳಕೆಗೆ, ಮತ್ತೊಂದು ಅವರ ವೈಯಕ್ತಿಕ ಬಳಕೆಗೆ ವಾಹನಗಳ ಬಳಕೆ ಮಾಡುತ್ತಿದ್ದಾರೆ. ನಿಗಮದ ಅಧ್ಯಕ್ಷರಾದ ನನಗೇ‌ ಕಚೇರಿಯ ದಾಖಲೆಗಳನ್ನು ಕೊಡುವುದಿಲ್ಲ. ಈ ಬಗ್ಗೆ ‌ನಾನು ಮಾಧ್ಯಮಗಳ ಮುಂದೆ ಹೋಗ್ತೇನೆ ಅನ್ನೋ‌ ಭಯ‌ ಅವರಿಗಿದೆ. ಹೀಗಾಗಿ ನನ್ನ ವಿರುದ್ಧ ಅವರೇ ಮೊದಲು ಮಾಧ್ಯಮದ ಮುಂದೆ ಹೋಗಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಸಣ್ಣ ಮಟ್ಟಕ್ಕೆ ಇಳಿದಿದ್ದಾರೆ. ನಾನು ರೂಪಾ‌ ಅವರಿಗೆ‌ ಚಾಲೆಂಜ್ ಮಾಡುತ್ತೇನೆ… ಆರೋಪ ಕೇಳಿ ಬಂದಿರುವ ಕಿಶೋರ್ ನನ್ನ‌ ಸಂಪರ್ಕದಲ್ಲಿ ಇಲ್ಲ. ರೂಪಾ‌ ಮೌದ್ಗಿಲ್‌ ವಿರುದ್ಧ ನಾನು 75 ನೋಟಿಸ್ ನೀಡಿದ್ದೇನೆ. ದುರುದ್ದೇಶದಿಂದ ನಿಗಮಕ್ಕೆ 10.7 ಲಕ್ಷ ರೂಪಾಯಿ ಹೊರೆ ಮಾಡಿದ್ದಾರೆ. ಕಾರು ಅಪಘಾತವಾದ‌ ನಂತರ‌ ಇನ್ ಶ್ಯೂರೆನ್ಸ್ ಕಂಪನಿಗೆ ಮಾಹಿತಿ ನೀಡಿಲ್ಲ. ಪರಿಣಾಮ‌ ನಿಗಮವೇ ಕಾರಿನ ರಿಪೇರಿಗೆ ಹಣ ಖರ್ಚು ಮಾಡಬೇಕಿದೆ.

ಇನ್ನು, ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಡಿ.ರೂಪಾ ಆರೋಪ ವಿಚಾರ ಪ್ರಸ್ತಾಪಿಸಿದ ಬೇಳೂರು ರಾಘವೇಂದ್ರ ಶೆಟ್ಟಿ, ಶ್ರೀಕಾಂತ್ ಎಂಬ ಪಿಎ ನನ್ನ ಬಳಿ ಇದ್ದಿದ್ದು ನಿಜ. ಆತನ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ವಜಾ ಮಾಡಿದ್ದೇನೆ. ತನಿಖೆಗೆ ಒಳಪಡಿಸಿದಾಗ ಆತ ಭಾಗಿಯಾಗಿಲ್ಲ ಅಂತಾ ಗೊತ್ತಾಗಿದೆ. ಆದರೆ ಈಗ ರೂಪಾ ನನ್ನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಈ ರೀತಿಯ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲಎಂದು ಸ್ಪಷ್ಟನೆ ನೀಡಿದ್ದಾರೆ.

ನನ್ನ ವಿರುದ್ಧ 5 ಕೋಟಿ ರೂ. ಅವ್ಯವಹಾರ ಆರೋಪ ಮಾಡಿದ್ದಾರೆ. ಡಿ.ರೂಪಾ ಬಳಿ ಒಂದೇ ಒಂದು ದಾಖಲೆಯಿದ್ರೆ ಬಿಡುಗಡೆ ಮಾಡಲಿ. ಮಹಿಳಾ ಸಿಬ್ಬಂದಿ ನೇಮಿಸಲು ಕೇಳಿದ್ದೇನೆ ಅಂತ ಆರೋಪಿಸಿದ್ದಾರೆ. ಕಚೇರಿಗೆ ಟೈಪಿಸ್ಟ್ ನೇಮಕ‌ ಮಾಡುವಂತೆ ಕೇಳಿದ್ದು ತಪ್ಪಾ? ಇದರ‌ ಬಗ್ಗೆಯೂ ಇಷ್ಟು ಕೀಳಾಗಿ ಮಾತಾಡಿರೋದು ಎಷ್ಟು ಸರಿ? ಬೆಲೆಬಾಳುವ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಿಲ್ಲ. ಬದಲಿಗೆ ನಾನೇ ನಿಗಮಕ್ಕೆ ಒಂದಷ್ಟು ವಸ್ತುಗಳನ್ನು ಕೊಟ್ಟಿದ್ದೇನೆ. ಅದಕ್ಕೆ ಬೇಕಾದ ಸ್ಲಿಪ್ ಗಳೂ ನನ್ನ ಬಳಿ ಇವೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದ್ದಾರೆ.

Published On - 4:12 pm, Thu, 2 June 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?