AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮ, ಮಗನನ್ನ ಅಪಹರಿಸಿ ಕಿರುಕುಳ; ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳ ಬಂಧನ

ಇತ್ತೀಚೆಗೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಅಮ್ಮ, ಮಗನನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ನಗರದ ಚಂದ್ರಾಲೇಔಟ್​​ ಪೊಲೀಸರು(Chandra Layout Police) ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ.

ಅಮ್ಮ, ಮಗನನ್ನ ಅಪಹರಿಸಿ ಕಿರುಕುಳ; ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳ ಬಂಧನ
ಅಮ್ಮ, ಮಗನನ್ನ ಅಪಹರಿಸಿ ಕಿರುಕುಳ; ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳ ಬಂಧನ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Aug 18, 2024 | 9:51 PM

Share

ಬೆಂಗಳೂರು, ಆ.18: ಅಮ್ಮ, ಮಗನನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ಚಂದ್ರಾಲೇಔಟ್​​ ಪೊಲೀಸರು(Chandra Layout Police) ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಆ.13 ರಂದು ಇಬ್ಬರನ್ನು ಕಿಡ್ನಾಪ್ ಮಾಡಿದ್ದ ರೌಡಿಶೀಟರ್ಸ್​ ಜೋಸೇಫ್ ಮತ್ತು ಶ್ರೀನಿವಾಸ್ ಅಲಿಯಾಸ್​ ಪಾಗಲ್ ಸೀನಾ, ನಂತರ ಪರಿಚಯಸ್ಥ ಪ್ರತಾಪ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಇರಿಸಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಕಿಡ್ನ್ಯಾಪ್​ಗೆ ಕಾರಣವೇನು?

ವರುಣ್​ ಮತ್ತು ಆತನ ತಾಯಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ವರುಣ್ ಹಾಗೂ ಆತನ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಹೀಗಾಗಿ ಈ ಆರೋಪಿಗಳು, ಕಳ್ಳತನ ಮಾಡಿರುವ 2 ಲಕ್ಷ ರೂ. ಹಣ ನೀಡುವಂತೆ ಅಮ್ಮ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಆದರೂ ಹಣ ನೀಡದಿದ್ದಕ್ಕೆ ಕೋಪಗೊಂಡ ಬಂಧಿತ ಆರೋಪಿಗಳು ತಾಯಿ, ಮಗನನ್ನು ಅಪಹರಿಸಿ, ಮಹಿಳೆಯೊಬ್ಬರ ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಅಶ್ಲೀಲ ಮೆಸೇಜ್​ ಮಾಡಿ ಕಿರುಕುಳ ಆರೋಪ; ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು

ಪ್ರಕರಣ ಸಂಬಂಧ 9 ಆರೋಪಿಗಳ ಬಂಧನ

ಬಳಿಕ ಇಬ್ಬರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ. ನಂತರ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದರು. ಪ್ರಕರಣ ಸಂಬಂಧ ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನಾ (ರೌಡಿ ಶೀಟರ್), ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ