AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​ನಲ್ಲಿ ಅನಿರುದ್ಧ್ ಮತ್ತು ಕಾವ್ಯ ಮಾರನ್ ಮದುವೆ? ವಿವಾಹ ನಡೆಯೋದು ಯಾವ ದೇಶದಲ್ಲಿ?

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡೆಯೆ ಕಾವ್ಯ ಮಾರನ್ ನವೆಂಬರ್ 10 ರಂದು ಗ್ರೀಸ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಿರಿಯ ನಟ ವೈ.ಜಿ. ಮಹೇಂದ್ರನ್ ನೀಡಿದ ಸುಳಿವು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ಬಗ್ಗೆ ಚರ್ಚೆಗಳು ಶುರುವಾಗಿದೆ.

ನವೆಂಬರ್​ನಲ್ಲಿ ಅನಿರುದ್ಧ್ ಮತ್ತು ಕಾವ್ಯ ಮಾರನ್ ಮದುವೆ? ವಿವಾಹ ನಡೆಯೋದು ಯಾವ ದೇಶದಲ್ಲಿ?
ಕಾವ್ಯಾ-ಅನಿರುದ್ಧ್
ರಾಜೇಶ್ ದುಗ್ಗುಮನೆ
|

Updated on: Aug 18, 2026 | 7:37 AM

Share

ಮುಖ್ಯಾಂಶಗಳು

  • ಗ್ರೀಸ್‌ನಲ್ಲಿ ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?
  • ಹಿರಿಯ ನಟ ವೈ.ಜಿ. ಮಹೇಂದ್ರನ್ ನೀಡಿದ ಮದುವೆ ಸುಳಿವು
  • ಐಪಿಎಲ್ ಸುಂದರಿ ಮತ್ತು ಮ್ಯೂಸಿಕ್ ಸೆನ್ಸೇಷನ್ ಜೋಡಿ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudhdh Ravichandar) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡೆಯೆ ಕಾವ್ಯ ಮಾರನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ತಮಿಳು ಮಾಧ್ಯಮಗಳ ಪ್ರಕಾರ ಇವರಿಬ್ಬರ ಅದ್ದೂರಿ ಮದುವೆ ನವೆಂಬರ್ 10 ರಂದು ಗ್ರೀಸ್ ದೇಶದಲ್ಲಿ ನಡೆಯಲಿದೆ. ಅಭಿಮಾನಿಗಳು ಈ ಜೋಡಿಯ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ವದಂತಿಗೆ ರೆಕ್ಕೆಪುಕ್ಕ ನೀಡಿದ ಸಂಬಂಧಿಯ ಹೇಳಿಕೆ:

ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ. ಜಿ. ಮಹೇಂದ್ರನ್ ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇಬ್ಬರ ಪ್ರೇಮ ಸಂಬಂಧದ ಬಗ್ಗೆ ಇಂಗಿತ ವ್ಯಕ್ತಪಡಿಸಿರುವ ಅವರು ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ. ಇದರಿಂದಾಗಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಈ ಮದುವೆ ವದಂತಿಗೆ ಮತ್ತೆ ಜೀವ ಬಂದಂತಾಗಿದೆ.

ವರ್ಷದಿಂದ ಹರಿದಾಡುತ್ತಿರುವ ಮದುವೆ ಗಾಸಿಪ್:

ಅನಿರುದ್ಧ್ ಮತ್ತು ಕಾವ್ಯ ಮಾರನ್ ಪ್ರೀತಿಯಲ್ಲಿದ್ದಾರೆ ಎಂಬ ವರದಿಗಳು ಕಳೆದ ಒಂದು ವರ್ಷದಿಂದ ಹರಿದಾಡುತ್ತಿವೆ. ಈ ಹಿಂದೆ ಅನಿರುದ್ಧ್ ಈ ರೀತಿಯ ಸುದ್ದಿಗಳನ್ನು ನಿರಾಕರಿಸಿದ್ದರು. ಆದರೆ ಈಗ ಗ್ರೀಸ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯಲಿದೆ ಎಂಬ ಸುದ್ದಿ ಮತ್ತೆ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.

ಇದನ್ನೂ ಓದಿ: ಈ ವರ್ಷವೇ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ? ಜೋರಾಗಿದೆ ಗಾಸಿಪ್

ಸ್ಟಾರ್ ಸೆಲೆಬ್ರಿಟಿಗಳ ಈ ಜೋಡಿಗೆ ಅಭಿಮಾನಿಗಳ ಕಾಯುವಿಕೆ:

ಕಾವ್ಯ ಮಾರನ್ ಐಪಿಎಲ್ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅವರು ಸನ್ ಟಿವಿ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿಯಾಗಿದ್ದಾರೆ. ಇತ್ತ ಅನಿರುದ್ಧ್ ಕೂಡ ಭಾರತೀಯ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಸಂಗೀತ ನೀಡುತ್ತಿದ್ದಾರೆ. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸಿನ ತುದಿಯಲ್ಲಿದ್ದು ಈ ಹೈಪ್ರೊಫೈಲ್ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ