AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾರುಖ್​ ಕೇವಲ ಸಹೋದ್ಯೋಗಿ, ಅವರು ಎಂದಿಗೂ ಗೆಳೆಯರಾಗಲ್ಲ’; ಸನ್ನಿ ಡಿಯೋಲ್ 

'ಡರ್' ಸಿನಿಮಾ ಶೂಟಿಂಗ್ ವೇಳೆ ಶಾರುಖ್ ಖಾನ್ ಜೊತೆ ನಡೆದ ಗಲಾಟೆಯ ಬಗ್ಗೆ ಸನ್ನಿ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ. ನಟರಲ್ಲಿರುವ ಅಭದ್ರತೆಯೇ ಇಂತಹ ಜಗಳಕ್ಕೆ ಕಾರಣ ಎಂದಿದ್ದಾರೆ. ಶಾರುಖ್ ಖಾನ್ ತನಗೆ ಸ್ನೇಹಿತನಲ್ಲ, ಕೇವಲ ಚಿತ್ರರಂಗದ ಸಹದ್ಯೋಗಿ ಎಂದು ಸನ್ನಿ ಹೇಳಿದ್ದಾರೆ.

‘ಶಾರುಖ್​ ಕೇವಲ ಸಹೋದ್ಯೋಗಿ, ಅವರು ಎಂದಿಗೂ ಗೆಳೆಯರಾಗಲ್ಲ’; ಸನ್ನಿ ಡಿಯೋಲ್ 
ಶಾರುಖ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 18, 2026 | 7:55 AM

Share

ಮುಖ್ಯಾಂಶಗಳು

  • ಡರ್ ಸಿನಿಮಾ ಸೆಟ್‌ನಲ್ಲಿ ಜೀನ್ಸ್ ಹರಿದುಕೊಂಡಿದ್ದ ಸನ್ನಿ
  • ಶಾರುಖ್ ಖಾನ್‌ ಸ್ನೇಹಿತನಲ್ಲ ಎಂದ ಸನ್ನಿ ಡಿಯೋಲ್
  • 16 ವರ್ಷಗಳ ವೈರತ್ವ ಕೊನೆಗೊಂಡಿದ್ದು ಹೇಗೆ?
1993ರಲ್ಲಿ ತೆರೆಕಂಡ ‘ಡರ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಟ ಸನ್ನಿ ಡಿಯೋಲ್ ಹಾಗೂ ಶಾರುಖ್ ಖಾನ್ ನಡುವೆ ದೊಡ್ಡ ಜಟಾಪಟಿ ನಡೆದಿತ್ತು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಸನ್ನಿ ಡಿಯೋಲ್ ಅವರ ತೀವ್ರ ಕೋಪಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಅವರು ತಮ್ಮ ಕೈಗಳಿಂದಲೇ ಜೀನ್ಸ್ ಪ್ಯಾಂಟ್ ಹರಿದುಕೊಂಡಿದ್ದರು. ಈ ಘಟನೆಯ ನಂತರ ಇಬ್ಬರ ನಡುವೆ ಮಾತುಕತೆ ಸಂಪೂರ್ಣವಾಗಿ ನಿಂತುಹೋಗಿತ್ತು.

ಅಭದ್ರತೆಯೇ ಜಗಳಕ್ಕೆ ಮುಖ್ಯ ಕಾರಣ:

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ ಈ ಹಳೆಯ ಘಟನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ನಟರಿಗೆ ಕಾಡುವ ಅಭದ್ರತೆಯೇ ಇಂತಹ ಘಟನೆಗಳಿಗೆ ಕಾರಣ ಎಂದು ಅವರು ಹೇಳಿದ್ದಾರೆ. ‘ಸಣ್ಣ ವಯಸ್ಸಿನಲ್ಲಿ ಇಂತಹ ತಪ್ಪುಗಳು ಸಹಜವಾಗಿ ನಡೆಯುತ್ತವೆ. ನಟರು ತಮ್ಮ ಪಾತ್ರವನ್ನು ಮಾತ್ರ ನಿರ್ವಹಿಸಬೇಕು. ಆದರೆ ಕೆಲವೊಮ್ಮೆ ಅಭದ್ರತೆಯಿಂದಾಗಿ ಅನಗತ್ಯ ಗೊಂದಲಗಳು ಹಾಗೂ ಕೆಟ್ಟ ವಾತಾವರಣ ನಿರ್ಮಾಣವಾಗುತ್ತದೆ’ ಎಂದಿದ್ದಾರೆ.

ಶಾರುಖ್ ಖಾನ್ ನನ್ನ ಸ್ನೇಹಿತನಲ್ಲ, ಕೇವಲ ಸಹದ್ಯೋಗಿ:

ಶಾರುಖ್ ಖಾನ್ ಅವರೊಂದಿಗಿನ ಪ್ರಸ್ತುತ ಬಾಂಧವ್ಯದ ಬಗ್ಗೆಯೂ ಸನ್ನಿ ಸ್ಪಷ್ಟನೆ ನೀಡಿದ್ದಾರೆ. ತಾವು ಎಂದು ಶಾರುಖ್ ಅವರ ಶತ್ರುವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಶಾರುಖ್ ಖಾನ್ ತಮಗೆ ಕೇವಲ ಸಹದ್ಯೋಗಿ ಮಾತ್ರ, ಆಪ್ತ ಸ್ನೇಹಿತನಲ್ಲ ಎಂದು ಹೇಳಿದ್ದಾರೆ. ನೈಜ ಸ್ನೇಹ ಎಂಬುದು ಬಾಲ್ಯದಲ್ಲಿ ಮಾತ್ರ ಸಿಗುತ್ತದೆ. ಚಿತ್ರರಂಗದಲ್ಲಿರುವವರೆಲ್ಲರೂ ಕೇವಲ ಕೆಲಸದ ಸಹೋದ್ಯೋಗಿಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

16 ವರ್ಷಗಳ ಸುದೀರ್ಘ ಮೌನದ ನಂತರ ಆದ ಸಂಧಾನ:

‘ಡರ್’ ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕನಾಗಿದ್ದರು. ಶಾರುಖ್ ಖಾನ್ ಖಳನಾಯಕನ ಪಾತ್ರದಲ್ಲಿದ್ದರು. ಆದರೆ ನಾಯಕನಿಗಿಂತ ಖಳನಾಯಕನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದ್ದು ಸನ್ನಿ ಅವರಿಗೆ ಬೇಸರ ತಂದಿತ್ತು. ಈ ಕಾರಣದಿಂದಾಗಿ ಇಬ್ಬರೂ ಸುಮಾರು 16 ವರ್ಷಗಳ ಕಾಲ ಪರಸ್ಪರ ಮಾತನಾಡಲಿಲ್ಲ. 2023ರಲ್ಲಿ ‘ಗದರ್ 2’ ಸಿನಿಮಾ ಯಶಸ್ವಿಯಾದಾಗ ಇಬ್ಬರ ನಡುವಿನ ಸುದೀರ್ಘ ಸುದೀರ್ಘ ವೈರತ್ವ ಕೊನೆಗೊಂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ