ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸು 60ಕ್ಕೇರಿಸುವ ಸರ್ಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಸರ್ಕಾರದ ಆದೇಶ ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್ನ ಹರಿಹರ್ ಘಟಕ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ಆಲಿಸಿದ ನ್ಯಾಯಪೀಠವು ಪ್ರಮಾಣೀಕೃತ ಆದೇಶಗಳ ಕಲಂ 29ರ ಪ್ರಕಾರ ಕಂಪನಿಯ ನೌಕರರು 60 ವರುಷದವರೆಗೆ ಮುಂದುವರಿಯಬಹುದಾಗಿದೆ
ಧಾರವಾಡ: ಖಾಸಗಿ ಕೈಗಾರಿಕೆ ವಲಯದಲ್ಲಿರುವ ನೌಕರರ ವಯಸ್ಸನ್ನು 58ರಿಂದ 60ಕಕ್ಕೆ ಏರಿಸುವ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka high court) ಧಾರವಾಡ ಪೀಠ ಎತ್ತಿ ಹಿಡಿದಿದೆ. ಮಾರ್ಚ್ 28, 2017ರ ಗಜೆಟ್ ಮಾಡಲಾದ ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ (ತಿದ್ದುಪಡಿ) ನಿಯಮಗಳ ಮಾದರಿ ಸ್ಥಾಯಿ ಆದೇಶಗಳು 2017ರ ಪ್ರಕಾರ ಸರ್ಕಾರ ನಿವೃತ್ತಿ ವಯಸ್ಸು ಏರಿಕೆ ಮಾಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್ನ ಹರಿಹರ್ ಘಟಕ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ಆಲಿಸಿದ ನ್ಯಾಯಪೀಠವು ಪ್ರಮಾಣೀಕೃತ ಆದೇಶಗಳ ಕಲಂ 29ರ ಪ್ರಕಾರ ಕಂಪನಿಯ ನೌಕರರು 60 ವರುಷದವರೆಗೆ ಮುಂದುವರಿಯಬಹುದಾಗಿದೆ ಎಂದು ಹೇಳಿದೆ. ಈ ಹಿಂದೆಯೂ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯನ್ನು ಏಕ ಸದಸ್ಯರ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ವಿಭಾಗೀಯ ಪೀಠದ ಮೊರೆ ಹೋಗಿದೆ. ವೈದ್ಯಕೀಯ ಪರೀಕ್ಷೆಗೊಳಡಿಸಿದಾಗ ಅವರು ಮರುಉದ್ಯೋಗ ಮಾಡಲು ಅರ್ಹರು ಅಲ್ಲ ಎಂದು ತೋರಿದಲ್ಲಿ ಅರ್ಜಿಯನ್ನು ವಜಾಗೊಳಿಸಿದ ದಿನಾಂಕವಾದ 2021 ಸೆಪ್ಟೆಂಬರ್ 17ರಂದು ಅಥವಾ ನಂತರ ನಿವೃತ್ತರಾದ ನೌಕರರಿಗೆ ಪೂರ್ತಿ ಸಂಬಳ ಮರುಪಾವತಿ ಮಾಡುವಂತೆ ವಿಭಾಗೀಯ ಪೀಠ ಮೇಲ್ಮನವಿದಾರರರಿಗೆ ನಿರ್ದೇಶಿಸಿದೆ.
ಹಿಂದಿನ ಷರತ್ತಿನ ಅಡಿಯಲ್ಲಿ ಬರುವ ನಿವೃತ್ತರು ಆದರೆ ಮರು ಉದ್ಯೋಗಕ್ಕೆ ಅರ್ಹರು ಅಲ್ಲ ಎಂದಾದರೆ ಅವರಿಗೆ ನಿವೃತ್ತಿಯ ದಿನಾಂಕ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ದಿನಾಂಕ ನಡುವಿನ ಅವಧಿಯಲ್ಲಿ ಅವರಿಗೆ ಶೇ 50ರಷ್ಟು ಸಂಬಳ ಮರುಪಾವತಿ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.
ಮಾರ್ಚ್ 17, 2018 ರಂದು ಅಥವಾ ಅದರ ನಂತರ 58 ವರ್ಷಗಳನ್ನು ಪೂರೈಸಿದ ನಂತರ ಸೇವೆಯಿಂದ ನಿವೃತ್ತರಾದ ಅಂತಹ ಉದ್ಯೋಗಿಗಳಿಗೆ, ನಿವೃತ್ತಿ ದಿನಾಂಕ ಮತ್ತು ಅವರು 60 ವರ್ಷಗಳನ್ನು ತಲುಪಿದ ದಿನಾಂಕದ ನಡುವಿನ ಅವಧಿಗೆ ಮೇಲ್ಮನವಿದಾರರು ಶೇ 50 ಮರುಪಾವತಿ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.
ಈ ಯಾವುದೇ ಷರತ್ತುಗಳಿಗೆ ಹೊಂದಿಕೆಯಾಗದಿದ್ದರೆ ಉಪ ಕಾರ್ಮಿಕ ಆಯುಕ್ತರನ್ನು ಸಂಪರ್ಕಿಸಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಬಹುದು ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ದೀಕ್ಷಿತ್ ಮತ್ತು ಭಟ್, ಶುಕ್ರ ನೀತಿಯನ್ನು (ಆಡಳಿತದ ಕುರಿತಾದ ಒಪ್ಪಂದ) ಉಲ್ಲೇಖಿಸಿದ್ದು, ಕಡಿಮೆ ಸಂಬಳ, ಕಷ್ಟಕರ ರೀತಿಯಲ್ಲಿ ವರ್ತನೆ, ಅವಮಾನಗಳು ಮತ್ತು ದಂಡಗಳನ್ನು ವಿಧಿಸುವುದು ನೌಕರರಲ್ಲಿ ಅಶಾಂತಿಗೆ ಕಾರಣವಾಗಿದೆ. ಸಾಕಷ್ಟು ನೌಕರರು ವೇತನದಿಂದ ತೃಪ್ತರಾಗಿ, ಗೌರವಾನ್ವಿತವಾಗಿ ಬಡ್ತಿ ಪಡೆದಿದ್ದಾರೆ. ಸೌಮ್ಯವಾದ ಮಾತುಗಳಿಂದ ಹುರಿದುಂಬಿಸಿದ ನೌಕರರು ತಮ್ಮ ಮಾಲೀಕರನ್ನು ಎಂದಿಗೂ ತೊರೆಯುವುದಿಲ್ಲ ಎಂದು ಹೇಳಿದ್ದಾರೆ
Published On - 5:51 pm, Thu, 7 July 22