ಐಪಿಎಸ್ ಸೀಮಂತ್ ಕುಮಾರ್ ವಿರುದ್ಧ ಸಿಬಿಐ ಸಹ ಸರಿಯಾದ ತನಿಖೆ ನಡೆಸಿಲ್ಲ, ಸಿಬಿಐ ಎಸ್‌ಪಿಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ

ಸೀಮಂತ್ ಕುಮಾರ್ ಸಿಂಗ್ ಪ್ರತಿ ತಿಂಗಳು ಮಾಮೂಲು ಸ್ವೀಕರಿಸಿದ್ದರೆಂದು ಸಾಕ್ಷಿಗಳ ಹೇಳಿಕೆಯಿದೆ. ಈ ಬಗ್ಗೆ ಸಿಬಿಐನಿಂದ ಆಳವಾದ ತನಿಖೆ ನಡೆದಿಲ್ಲ. ರಾಜ್ಯ ಸರ್ಕಾರದ ತನಿಖೆಗೆ ಸಿಬಿಐ ಸೂಚಿಸಿತ್ತು. ಆ ತನಿಖೆಯ ವರದಿಯನ್ನು ಸಲ್ಲಿಸಲು ಸಿಬಿಐ ವಕೀಲರಿಗೆ ಕೋರ್ಟ್​ ಸೂಚನೆ ನೀಡಿದೆ. ಇಲ್ಲವಾದರೆ ಸಿಬಿಐ ಎಸ್‌ಪಿ ಹಾಜರಿರುವಂತೆ ಕೋರ್ಟ್ ಆದೇಶಿಸಿದೆ.

ಐಪಿಎಸ್ ಸೀಮಂತ್ ಕುಮಾರ್ ವಿರುದ್ಧ ಸಿಬಿಐ ಸಹ ಸರಿಯಾದ ತನಿಖೆ ನಡೆಸಿಲ್ಲ, ಸಿಬಿಐ ಎಸ್‌ಪಿಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ
ಸೀಮಂತ್ ಕುಮಾರ್ ವಿರುದ್ಧ ಸಿಬಿಐ ಸಹ ಸರಿಯಾದ ತನಿಖೆ ನಡೆಸಿಲ್ಲ, ಸಿಬಿಐ ಎಸ್‌ಪಿಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ
TV9kannada Web Team

| Edited By: sadhu srinath

Jul 07, 2022 | 5:19 PM

ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ರ (Seemanth Kumar Singh) ಸರ್ವಿಸ್ ರೆಕಾರ್ಡ್ ದಾಖಲೆಯನ್ನು ಹೈಕೋರ್ಟ್ ಪರಿಶೀಲನೆ ನಡೆಸಿದೆ. ಸೀಮಂತ್ ಕುಮಾರ್ ಸಿಂಗ್ ಅವರು ಬಳ್ಳಾರಿ ಎಸ್‌ಪಿಯಾಗಿದ್ದಾಗ ಸಿಬಿಐ ದಾಳಿ ನಡೆಸಿದೆ. ಆದರೆ ಯಾವುದೇ ಕ್ರಮಕ್ಕೂ ಶಿಫಾರಸ್ಸು ಆಗಿರಲಿಲ್ಲ. ಅದಿರು ಸಾಗಾಟಕ್ಕೆ ಲಂಚ ಸ್ವೀಕರಿಸುತ್ತಿದ್ದರೆಂದು ಆರೋಪಿಸಲಾಗಿದೆ. ಪ್ರತಿ ತಿಂಗಳು ಮಾಮೂಲು ಸ್ವೀಕರಿಸಿದ್ದರೆಂದು ಸಾಕ್ಷಿಗಳ ಹೇಳಿಕೆಯಿದೆ. ಈ ಬಗ್ಗೆ ಸಿಬಿಐನಿಂದ ಆಳವಾದ ತನಿಖೆ ನಡೆದಿಲ್ಲ. ರಾಜ್ಯ ಸರ್ಕಾರದ ತನಿಖೆಗೆ ಸಿಬಿಐ ಸೂಚಿಸಿತ್ತು. ಆ ತನಿಖೆಯ ವರದಿಯನ್ನು ಸಲ್ಲಿಸಲು ಸಿಬಿಐ ವಕೀಲರಿಗೆ ಕೋರ್ಟ್​ ಸೂಚನೆ ನೀಡಿದೆ. ಇಲ್ಲವಾದರೆ ಸಿಬಿಐ ಎಸ್‌ಪಿ ಹಾಜರಿರುವಂತೆ ಕೋರ್ಟ್ ಆದೇಶಿಸಿದೆ. ಇದೇ ವೇಳೆ, ನ್ಯಾ ಹೆಚ್​ಪಿ ಸಂದೇಶ್​ ಅವರಿದ್ದ (Justice Hethur Puttaswamygowda Sandesh) ಏಕ ಸದಸ್ಯ ಹೈಕೋರ್ಟ್ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

ಬೆಂಗಳೂರು ನಗರ ಡಿಸಿಯಿಂದ ಲಂಚಕ್ಕೆ ಬೇಡಿಕೆ ಪ್ರಕರಣವು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ವಿಚಾರಣೆಗೊಳಪಟ್ಟಿತು. ಎಸಿಬಿ ಕಾರ್ಯನಿರ್ವಹಣೆ ಬಗ್ಗೆ ಹೈಕೋರ್ಟ್ ಇಂದೂ ಅಸಮಾಧಾನ ವ್ಯಕ್ತಪಡಿಸಿತು. ಹೈಕೋರ್ಟ್ ವಿಚಾರಣೆ ಬಳಿಕವಷ್ಟೇ ಡಿಸಿಯನ್ನು ಬಂಧಿಸಲಾಗಿದೆ. ಬಿ ರಿಪೋರ್ಟ್‌ಗಳ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿಲ್ಲ. 2021, 2022ರ ಅಪೂರ್ಣ ಮಾಹಿತಿಯನ್ನು ನೀಡಿದ್ದಾರೆ. 2022ರಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ರೂ ಆ ಮಾಹಿತಿ ಹೈಕೋರ್ಟ್ ಗೆ ನೀಡಿಲ್ಲ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಕೇಸ್‌ನಲ್ಲೂ ಬಿ ರಿಪೋರ್ಟ್ ಆಗಿದೆ. ಎಸಿಬಿ ನಿಜವಾದ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿಲ್ಲ ಎಂದು ಛೀಮಾರಿ ಹಾಕಿದ ನ್ಯಾ. ಸಂದೇಶ್​ ಅವರ ನ್ಯಾಯಪೀಠವು ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳ ಮಾಹಿತಿ ನೀಡುವಂತೆ ರಿಜಿಸ್ಟ್ರಾರ್ ಜ್ಯುಡಿಷಿಯಲ್‌ಗೆ ನಿರ್ದೇಶನ ನೀಡಿ, ಪ್ರಕರಣದ ವಿಚಾರಣೆ ಜುಲೈ 11ಕ್ಕೆ ಮುಂದೂಡಿದರು.

ಇದನ್ನೂ ಓದಿ:

ಎಸಿಬಿ ಎಡಿಜಿಪಿಗೆ ಆತ್ಮಸಾಕ್ಷಿಯಿಂದ ಕೇಳಿಕೊಳ್ಳಲು ಹೇಳಿ ಎಂದು ಎಡಿಜಿಪಿಗೆ ಮತ್ತೆ ಝಾಡಿಸಿದ ನ್ಯಾ. ಹೆಚ್.ಪಿ. ಸಂದೇಶ್!

ಇದನ್ನೂ ಓದಿ:

ಎಸಿಬಿಗೆ ಚಾಟಿ -ಮುಂದೇನು? ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚೆ TV 9 Kannada Digital Live

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada