ಇನ್ಮುಂದೆ ಒಂದೇ ಸೂರಿನಡಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳು ಲಭ್ಯ
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗಾರಿಕೆಗಳಿಗೆ ಪರಿಸರ ಅನುಮತಿಗಳನ್ನು ಸುಲಭಗೊಳಿಸಲು ಹೊಸ ಆನ್‌ಲೈನ್ ವ್ಯವಸ್ಥೆಯನ್ನು ಆರಂಭಿಸಿದೆ. ಈ ವ್ಯವಸ್ಥೆಯು ಮಧ್ಯವರ್ತಿಗಳಿಲ್ಲದೆ, ಪಾರದರ್ಶಕವಾಗಿ ಅನುಮತಿಗಳನ್ನು ಪಡೆಯಲು ಸಹಾಯವಾಗಲಿದೆ. ಪರಿಸರ ಕಾಯ್ದೆಗಳ ಅನುಷ್ಠಾನವನ್ನು ಸುಧಾರಿಸುವುದು ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು, ಜನವರಿ 20: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ತರುವ ಮುಖಾಮಖಿ ರಹಿತ ಆನ್ ಲೈನ್ ವ್ಯವಸ್ಥೆಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (eshwara khandre) ಇಂದು ಚಾಲನೆ ನೀಡಿದ್ದಾರೆ. ಪರಿಸರ ಕಾಯ್ದೆ, ಜಲ ಮಾಲಿನ್ಯ ವಾಯು ಮಾಲಿನ್ಯ ಕಾಯ್ದೆ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗಳ ಪ್ರಾರಂಭಕ್ಕೆ ಅನುಮತಿ ಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಬೇಕು. ಅದಕ್ಕೆ ಸುಲಭ ಅನುಮತಿಗೆ ಇದು ಅವಶ್ಯಕ. ಈ ಸೇವೆಯ ಮೂಲಕ ಪಡೆಯಬಹುದು. ಹೆಚ್ಚಿನ ಅಭಿವೃದ್ಧಿಗೆ ಕೈಗಾರಿಕೆಗಳು ಮುಖ್ಯ. ನಿಯಮಗಳನ್ನ ಸರಳೀಕರಣ ಮಾಡಬೇಕು. ಹಾಗಾಗಿ ಈ ತಂತ್ರಾಶ ಅನುಕೂಲವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಶಿರೂರು, ವಯನಾಡ್ ಭೂಕುಸಿತದಿಂದ ಎಚ್ಚೆತ್ತ ಸರ್ಕಾರ, ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ತೆರವಿಗೆ ಸೂಚನೆ
ಒಂದೇ ಸೂರಿನಡಿ ಅನುಮತಿ ಪಡೆಯಬಹುದು. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಕಾಯ್ದೆಗಳ ಅನುಷ್ಠಾನ ಸರಿಯಾಗಿ ಆಗಬೇಕು. ಮಧ್ಯವರ್ತಿಗಳ ಕಾಟವಿಲ್ಲದೆ ಅನುಮತಿ ಪಡೆಯಬಹುದು. ಎಕ್ಸ್ ಜಿಎನ್ ತಂತ್ರಾಶ ಈಗಾಗಲೇ ಇತ್ತು. ಬೇಕಾದ ಕಾಗದ ಪತ್ರಗಳನ್ನ ಇದರಲ್ಲಿ ಪಡೆಯಬಹುದು. ಕೈಗಾರಿಕೆ, ಉದ್ಯಮ ನಡೆಸಲು ಪಡೆಯಬಹುದಾಗಿದೆ ಎಂದರು.
ಐಐಟಿ ನಿರ್ದೇಶಕ, ಎನ್ಐಸಿ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ ತಂತ್ರಾಂಶ ಅಭಿವೃದ್ಧಿಪಡಿಸಿದ್ದೇವೆ. ಇದರಿಂದ ರಾಜ್ಯಕ್ಕೆ ನಿರುದ್ಯೋಗ ಸಮಸ್ಯೆ, ಹೆಚ್ಚಿನ ಹೂಡಿಕೆ ಆಕರ್ಷಣೆ ತಂತ್ರಾಂಶ ಉಪಯುಕ್ತ ಆಗುತ್ತೆ. ಸುಸ್ತಿರ ಅಭಿವೃದ್ಧಿಗೆ ಪೂರಕವಾಗಲಿದೆ. ಬೇರೆ ದೇಶ ಅಥವಾ ರಾಜ್ಯದಲ್ಲಿ ಈ ಯೋಜನೆ ಇರುವ ಬಗ್ಗೆ ಮಾಹಿತಿ ಇಲ್ಲ. ನಾವು ಪರಿಣಾಮಕಾರಿಯಾಗಿ ಈ ಉಪಯುಕ್ತ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಫೆಬ್ರವರಿ ಮೊದಲವಾರ ಅರ್ಜುನ ಸ್ಮಾರಕ ಉದ್ಘಾಟನೆ
ಹಾಸನ ಜಿಲ್ಲೆಯ ಯಸಳೂರು ಅರಣ್ಯದಲ್ಲಿ 2023 ಡಿ.4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಅಂಬಾರಿ ಹೊರುತ್ತಿದ್ದ ಗಜಶ್ರೇಷ್ಠ ಅರ್ಜುನನ ಸ್ಮಾರಕವನ್ನು ಫೆಬ್ರವರಿ ಮೊದಲ ವಾರ ಉದ್ಘಾಟಿಸುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ರಾತ್ರಿ ವೇಳೆ ಬಸ್, ಆ್ಯಂಬುಲೆನ್ಸ್ಗೆ ಮಾತ್ರ ಅವಕಾಶ; ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ
ಹುತಾತ್ಮ ಅರ್ಜುನನ ಸ್ಮಾರಕ ಸಂಪೂರ್ಣ ಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಫೆಬ್ರವರಿ ಮೊದಲ ವಾರದಲ್ಲಿ ಉದ್ಘಾಟಿಸಲಾಗುವುದು ಎಂದಿದ್ದಾರೆ. ಇನ್ನು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂಪರ್ವೇಜ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಐಐಐಟಿಬಿಯ ನಿರ್ದೇಶಕ ದೇಬಬ್ರತ ದಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.