ಪಾರ್ಕ್‌ಗಳ ಶೇ.5ರಷ್ಟು ಭೂಮಿ ಪರಭಾರೆಗೆ ಅವಕಾಶ ಮಾಡಿಕೊಡುವ ವಿಧೇಯಕ ಅಂಗೀಕಾರ: ಮರುಪರಿಶೀಲನೆಗೆ ಸೂಚಿಸುವಂತೆ ರಾಜ್ಯಪಾಲರಿಗೆ ಸೂರ್ಯ ಪತ್ರ

ವಿಧಾನಮಂಡಲದಲ್ಲಿ ಕರ್ನಾಟಕ ಉದ್ಯಾನವನಗಳ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿದ್ದು, ಉದ್ಯಾನವನಗಳ ಶೇ. 5ರಷ್ಟು ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸಿದೆ. ಆದರೆ ಸಂಸದ ತೇಜಸ್ವಿ ಸೂರ್ಯ ರಾಜ್ಯಪಾಲರಿಗೆ ಪತ್ರ ಬರೆದು ವಿಧೇಯಕವನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ. ಹಸಿರು ಪ್ರದೇಶಗಳ ರಕ್ಷಣೆ ನಮ್ಮ ಹೋರಾಟವಾಗಿದೆ.

ಪಾರ್ಕ್‌ಗಳ ಶೇ.5ರಷ್ಟು ಭೂಮಿ ಪರಭಾರೆಗೆ ಅವಕಾಶ ಮಾಡಿಕೊಡುವ ವಿಧೇಯಕ ಅಂಗೀಕಾರ: ಮರುಪರಿಶೀಲನೆಗೆ ಸೂಚಿಸುವಂತೆ ರಾಜ್ಯಪಾಲರಿಗೆ ಸೂರ್ಯ ಪತ್ರ
ತೇಜಸ್ವಿ ಸೂರ್ಯ, ಥಾವರ್‌ಚಂದ್ ಗೆಹ್ಲೋಟ್​​
Image Credit source: tv9 kannada
Edited By:

Updated on: Aug 24, 2026 | 10:53 PM

ಬೆಂಗಳೂರು, ಆಗಸ್ಟ್​​ 24: ರಾಜ್ಯದ ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಭೂಮಿಯನ್ನು ಇತರೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತವಾಗಿತ್ತು. ವಿರೋಧದ ಮಧ್ಯೆ ಇಂದು ವಿಧಾನಮಂಡಲದಲ್ಲಿ ಕರ್ನಾಟಕ ಉದ್ಯಾನವನಗಳ ವಿಧೇಯಕ ಅಂಗೀಕರಿಸಲಾಗಿದೆ. ಈ ಕುರಿತಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್​​ಗೆ ಪತ್ರ ಬರೆದಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya), ‘ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಧೇಯಕವನ್ನು ಸರ್ಕಾರಕ್ಕೆ ಮರುಪರಿಶೀಲನೆಗೆ ವಾಪಸ್ ಕಳುಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ಉದ್ಯಾನವನಗಳ ವಿಧೇಯಕ ಅಂಗೀಕಾರವಾಗಿರುವುದು ದುರದೃಷ್ಟಕರ: ತೇಜಸ್ವಿ ಸೂರ್ಯ

ಈ ಕುರಿತಾಗಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ‘ಕರ್ನಾಟಕದಾದ್ಯಂತ ಶೇ. 5ರಷ್ಟು ಉದ್ಯಾನವನದ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ ವಿಧೇಯಕವು ಇಂದು ಅಂಗೀಕಾರವಾಗಿರುವುದು ದುರದೃಷ್ಟಕರ’ ಎಂದಿದ್ದಾರೆ.

ತೇಜಸ್ವಿ ಸೂರ್ಯ ಟ್ವೀಟ್ 

‘ಲಾಲ್‌ಬಾಗ್ ಮೂಲಕ ಹಾದುಹೋಗುವ ಸುರಂಗ ರಸ್ತೆಯಂತಹ ಯೋಜನೆಗಳಿಗೆ ಅನುಕೂಲ ಮಾಡಿಕೊಡಲು ವಿಶೇಷವಾಗಿ ಈ ವಿಧೇಯಕವನ್ನು ತರಲಾಗಿದ್ದು, ನಮ್ಮ ಪರಿಸರ, ನಮ್ಮ ಉದ್ಯಾನವನಗಳು ಮತ್ತು ನಮ್ಮ ನಗರಗಳಲ್ಲಿ ಕ್ಷಿಪ್ರವಾಗಿ ಕುಗ್ಗುತ್ತಿರುವ ಹಸಿರು ಪ್ರದೇಶಗಳನ್ನು ರಕ್ಷಿಸಲು ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ಇದು ಅತ್ಯಂತ ದುಃಖದ ದಿನವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯಾನವನಗಳ ಮೇಲೆ ಸರ್ಕಾರದ ಕಣ್ಣು: ಶೇ 5ರಷ್ಟು ಜಾಗ ಸಾರ್ವಜನಿಕ ಬಳಕೆಗೆ, ಬೆಂಗಳೂರಿಗರ ತೀವ್ರ ವಿರೋಧ

‘ಈ ವಿಧೇಯಕವನ್ನು ಮರುಪರಿಶೀಲನೆಗಾಗಿ ಶಾಸನಸಭೆಗೆ ವಾಪಸ್ ಕಳುಹಿಸುವಂತೆ ಕೋರಿ ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಏನೇ ಆದರೂ, ಲಾಲ್‌ಬಾಗ್ ಮತ್ತು ಬೆಂಗಳೂರಿನ ಹಸಿರು ಪ್ರದೇಶಗಳನ್ನು ರಕ್ಷಿಸುವ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದಿದ್ದಾರೆ.

ವಿಧಾನಮಂಡಲದಲ್ಲಿ ಅಂಗೀಕಾರಗೊಂಡ ಪ್ರಮುಖ ಮಸೂದೆಗಳು

  • ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ – 2026
  • ಕರ್ನಾಟಕ ಜಿಎಸ್‌ಟಿ (ಸರಕು ಮತ್ತು ಸೇವೆಗಳ ತೆರಿಗೆ) ತಿದ್ದುಪಡಿ ಮಸೂದೆ–2026
  • ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ
  • ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆ
  • ಕರ್ನಾಟಕ ಕೃಷಿಕರ ಕಲ್ಯಾಣ ತಿದ್ದುಪಡಿ ಮಸೂದೆ
  • ಕರ್ನಾಟಕ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಮಸೂದೆ
  • ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ
  • ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಸೆಸ್ (2ನೇ ತಿದ್ದುಪಡಿ)ಮಸೂದೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us