AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಮರ್ ಖಾಲಿದ್​​ ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು: ಬಿ.ಕೆ. ಹರಿಪ್ರಸಾದ್​​

ಎನ್‌ಎಲ್‌ಎಸ್‌ಐಯುನಲ್ಲಿ ಉಮರ್ ಖಾಲಿದ್ ಡಾಕ್ಯುಮೆಂಟರಿ ವಿವಾದಕ್ಕೆ ಸಂಬಂಧಿಸಿದಂತೆ ಖಾಲಿದ್ ಪರ ಮತ್ತೆ ಬ್ಯಾಟ್ ಬೀಸಿರುವ ಬಿ.ಕೆ. ಹರಿಪ್ರಸಾದ್, ವಿದ್ಯಾವಂತ ಚಳವಳಿಗಾರ ಉಮರ್ ಖಾಲಿದ್‌ನನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದು ಬಿಜೆಪಿ ವಿರುದ್ಧ ಹರಿದಾಯ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ರಾಜಕೀಯವಾಗಿ ಉತ್ತರ ಕೊಡಬೇಕಾದ ಪ್ರಶ್ನೆಗಳಿಗೆ ‘ದೇಶದ್ರೋಹ’ ಎಂಬ ಪದವನ್ನು ಬಳಸುತ್ತಿದ್ದಾರೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ ಎಂದವರು ಕಿಡಿ ಕಾರಿದ್ದಾರೆ.

ಉಮರ್ ಖಾಲಿದ್​​ ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು: ಬಿ.ಕೆ. ಹರಿಪ್ರಸಾದ್​​
ಉಮರ್ ಖಾಲಿದ್​​ರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದ ಬಿ.ಕೆ.ಹರಿಪ್ರಸಾದ್​​ Image Credit source: PTI
ಪ್ರಸನ್ನ ಗಾಂವ್ಕರ್​
| Edited By: |

Updated on:Sep 17, 2026 | 1:06 PM

Share

ಬೆಂಗಳೂರು, ಸೆಪ್ಟೆಂಬರ್​​ 17: ಎನ್‌ಎಲ್‌ಎಸ್‌ಐಯುನಲ್ಲಿ ಉಮರ್ ಖಾಲಿದ್ ಕುರಿತ ಡಾಕ್ಯುಮೆಂಟರಿ ಪ್ರದರ್ಶನ ವಿವಾದದ ನಡುವೆ ಖಾಲಿದ್ ಒಬ್ಬ ‘ದೇಶಪ್ರೇಮಿ’ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಬಣ್ಣಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ವಿಪಕ್ಷ ಬಿಜೆಪಿಗರು ಕೆಪಿಸಿಸಿ ಅಧ್ಯಕ್ಷರ ಮೇಲೆ ಮುಗಿಬಿದ್ದಿದ್ದರೂ. ಹೀಗಿದ್ದರೂ ಹರಿಪ್ರಸಾದ್​​ ಮಾತ್ರ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ದೇಶದ ಜನರ ಪರವಾಗಿ ಮಾತನಾಡಿದ ವಿದ್ಯಾವಂತ, ಜನಪರ ಚಳವಳಿಗಾರ ಉಮರ್ ಖಾಲಿದ್​​ರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದು ಆರೋಪಿಸಿದ್ದಾರೆ.

RSS, ಮೋದಿ ಬಗ್ಗೆ ಉಲ್ಲೇಖಿಸಿ ಹರಿಪ್ರಸಾದ್​​ ವ್ಯಂಗ್ಯ

ಉಮರ್ ಖಾಲಿದ್ ಆರ್ಎಸ್​​ಎಸ್​​​ನಂತೆ ಪಾಕಿಸ್ತಾನದ ಜೊತೆ ಗುಪ್ತ ಚರ್ಚೆ ನಡೆಸಿಲ್ಲ. ಸಂಘಪರಿವಾರದವರಂತೆ ಐಎಸ್ಐ ಏಜೆಂಟ್​​ಗಳ ಜೊತೆ ಮಾತುಕತೆಯನ್ನೂ ನಡೆಸಿಲ್ಲ. ಕನಿಷ್ಟಪಕ್ಷ ಆಮಂತ್ರಣವೇ ಇಲ್ಲದೆ ಪಾಕ್ ಪ್ರಧಾನಿಯ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿ ಬಿರಿಯಾನಿ ತಿಂದಿಲ್ಲ ಎಂದವರು ವ್ಯಂಗ್ಯವಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ರಾಜಕೀಯವಾಗಿ ಉತ್ತರ ಕೊಡಬೇಕಾದ ಪ್ರಶ್ನೆಗಳಿಗೆ ‘ದೇಶದ್ರೋಹ’ ಎಂಬ ಪದವನ್ನು ಬಳಸುತ್ತಿದ್ದಾರೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ ಎಂದವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ‘ಉಮರ್ ಖಾಲಿದ್ ದೇಶ ಪ್ರೇಮಿ’: ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಬಣ್ಣನೆ, ಎಬಿವಿಪಿ ವಿರುದ್ಧ ವಾಗ್ದಾಳಿ

‘ವಿಜಯೇಂದ್ರ ಕೆಪಿಸಿಸಿಯ ವಾಚ್ ಮೆನ್ ಆಗಿದ್ದಾರೆಯೇ?’

ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು ಎಂದು ಹೇಳುವ ವಿಜಯೇಂದ್ರ ಮೊದಲು ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ. ಕಾಂಗ್ರೆಸ್ ಮನೆಗೆ ಮೂರು ಬಾಗಿಲುಗಳಿವೆ ಎಂದು ಹೇಳುವ ಬಿಜೆಪಿಯ ಮನೆ ಈಗ ‘ನೂರು ಬಾಗಿಲು’ ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷದ ಕಚೇರಿಯ ಬಾಗಿಲು, ಕಿಟಕಿಗಳನ್ನು ಎಣಿಸುತ್ತಾ ಕೂರಲು ವಿಜಯೇಂದ್ರ ಕೆಪಿಸಿಸಿಯ ವಾಚ್ ಮೆನ್ ಆಗಿದ್ದಾರೆಯೇ? ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಮನೆಯ ಬಾಗಿಲು ಎಣಿಸುವುದನ್ನು ಬಿಟ್ಟು, ಮೊದಲು ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳಿಗೆ ಉತ್ತರಿಸಲಿ. ಕೆಪಿಎಸ್ಸಿಯ ಅಧ್ಯಕ್ಷರನ್ನು ಪೇಮೆಂಟ್ ಮೇಲೆ ಆಯ್ಕೆಮಾಡಿ ಅದೇ ಹಣದಲ್ಲೇ ಬಿಜೆಪಿಯ ಅಧ್ಯಕ್ಷನಾಗಿದ್ದಾರೆ ಎಂದು hELiruv ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗಳಿಗೆ ಉತ್ತರ ನೀಡಲಿ. ಆಮೇಲೆ ಕೆಪಿಸಿಸಿ ಕಚೇರಿಯ ಸುತ್ತ ಅಲೆದು ನಮ್ಮ ಕಚೇರಿಯ ಬಾಗಿಲಿನ ಲೆಕ್ಕ ಹಾಕುತ್ತಿರಲಿ. ಮುಂದಿನ ಐದು ವರ್ಷವೂ ವಿಜಯೇಂದ್ರಗೆ ಇದೇ ಕೆಲಸವನ್ನು ನಾವು ವಹಿಸಲಿದ್ದೇವೆ ಎಂದು ಹರಿಪ್ರಸಾದ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:05 pm, Thu, 17 September 26

Follow Us
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ
ಪುರಿಯಲ್ಲಿ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಅರಳಿದ ಮೋದಿ ಮರಳು ಕಲಾಕೃತಿ
ಪುರಿಯಲ್ಲಿ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಅರಳಿದ ಮೋದಿ ಮರಳು ಕಲಾಕೃತಿ
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ