AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೆಲಸ ಕಳೆದುಕೊಂಡಿದ್ದನ್ನು ಮನೆಯಲ್ಲಿ ತಿಳಿಸದೇ ಕೆಲಸಕ್ಕೆ ಹೊರಟಂತೆ ನಟಿಸುವ ವ್ಯಕ್ತಿ

ಕೆಲಸ ಕಳೆದುಕೊಂಡವರ ಪರಿಸ್ಥಿತಿ ಹೇಳಲಾಗದು. ಜವಾಬ್ದಾರಿಯ ನಡುವೆ ವೈಯುಕ್ತಿಕ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯದ್ದು ಅದೇ ಕಥೆ. ಹೌದು, ಕೆಲಸ ಕಳೆದುಕೊಂಡು ಮನೆಯವರ ಮುಂದೆ ನಟಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ವ್ಯಕ್ತಿಯೊಬ್ಬರು ಕೆಲಸ ಕಳೆದುಕೊಂಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

Viral: ಕೆಲಸ ಕಳೆದುಕೊಂಡಿದ್ದನ್ನು ಮನೆಯಲ್ಲಿ ತಿಳಿಸದೇ ಕೆಲಸಕ್ಕೆ ಹೊರಟಂತೆ ನಟಿಸುವ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Sep 17, 2026 | 12:38 PM

Share

ಈಗಿನ ಕಾಲದಲ್ಲಿ ಜಾಬ್ (job) ಗಿಟ್ಟಿಸಿಕೊಳ್ಳೋದು ಒಂದು ರೀತಿ ಕಷ್ಟ, ಅದನ್ನು ಉಳಿಸಿಕೊಳ್ಳುವುದು ಮತ್ತೊಂದು ರೀತಿಯ ಸವಾಲು. ಏಕಾಏಕಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತವೆ. ಹೀಗಾದಾಗ ಮುಂದೇನು ಎನ್ನುವ ಪ್ರಶ್ನೆ ಕಾಡೋದು ಸಹಜ ಕೂಡ. ಆದರೆ ಇಲ್ಲೊಬ್ಬರು ಗುರುಗ್ರಾಮ್‌ನ (gurgaon) ವ್ಯಕ್ತಿ ಕೆಲಸ ಕಳೆದುಕೊಂಡು ಮನೆಗೆ ತಿಳಿಯದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಕೆಲಸದಿಂದ ವಜಾಗೊಳಿಸಿದ ವಿಷ್ಯ ಪೋಷಕರಿಗೆ ಹೇಳುವ ಧೈರ್ಯವಿರಲಿಲ್ಲ. ಹೀಗಾಗಿ ಪ್ರತಿದಿನ ಕೆಲಸಕ್ಕೆ ಹೋಗುವಂತೆ ನಟಿಸುತ್ತ ಮನೆಯಿಂದ ಹೊರಗೆ ಹೋಗುತ್ತಿದ್ದಾರಂತೆ. ಉದ್ಯೋಗ ಕಳೆದುಕೊಂಡ ಬಳಿಕ ತನಗಾದ ಅನುಭವ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲಸ ಕಳೆದುಕೊಂಡ ಈ ವ್ಯಕ್ತಿ ಮಾಡಿದ್ದೇನು?

ಆರ್ ಗುರುಗ್ರಾಮ್ (r/gurgaon) ಹೆಸರಿನ ರೆಡ್ಡಿಟ್ ಪೋಸ್ಟ್ ನಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು ಕಳೆದ ಏಳು ವರ್ಷಗಳಿಂದ ಎಂಏನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಕೆಲಸದಿಂದ ತೆಗೆದು ಹಾಕಲಾಯಿತು ಎಂದು ವೈಯಕ್ತಿಕ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್ 10 ರಂದು ನನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು. ಆದರೆ ಈ ವಿಚಾರ ಪೋಷಕರಿಗೆ ಹೇಳುವ ಧೈರ್ಯವಿಲ್ಲ. ಹೀಗಾಗಿ ದಿನಾಲು ಕೆಲಸಕ್ಕೆ ಹೋಗುವ ರೀತಿಯಲ್ಲೇ ನಟಿಸುತ್ತಿದ್ದೇನೆ. ಪ್ರತಿದಿನ ಬೆಳಿಗ್ಗೆ ನನ್ನ ವೈಯಕ್ತಿಕ ಲ್ಯಾಪ್ ಟಾಪ್ ಹಿಡಿದು ಹೋಗುತ್ತೇನೆ. ನನ್ನ ಆಫೀಸ್ ಲ್ಯಾಪ್ ಟಾಪ್ ಇಲ್ಲದಿರುವುದನ್ನು ನನ್ನ ತಾಯಿ ಗಮನಿಸಿಲ್ಲ. ಹೀಗಾಗಿ ಸ್ವಲ್ಪ ಸಮಾಧಾನವಿದೆ. ಇನ್ನು, ಸ್ಟಾರ್ಬಕ್ಸ್ ನಲ್ಲಿ ಕುಳಿತು ಬೇರೆ ಜಾಬ್‌ಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ. ಅದರ ಜತೆಗೆ ಪೈಥಾನ್ ಕಲಿಯುತ್ತಾ ದಿನ ಕಳೆಯುತ್ತಿದ್ದೇನೆ ಎಂದು ಕಹಿ ಸತ್ಯ ಬಿಚ್ಚಿಟ್ಟಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Laid Off, but Still Leaving for Work at 9 AM by u/manni1145 in gurgaon

ಇದನ್ನೂ ಓದಿ: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಖಡಕ್ ರಿಪ್ಲೈ ಕೊಟ್ಟ ಉದ್ಯೋಗಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಮನೆಯವರಿಗೆ ನೋವಾಗಬಾರದು ಎನ್ನುವ ನಿಮ್ಮ ಯೋಚನೆ ಒಳ್ಳೆಯದೇ, ಆದರೆ ವಿಷ್ಯ ತಿಳಿಸಿ ಬಿಡಿ ಎಂದಿದ್ದಾರೆ. ಇನ್ನೊಬ್ಬರು, ಜೀವನದಲ್ಲಿ ಆಗೋದೆಲ್ಲಾ ಒಳ್ಳೆಯದಕ್ಕೆ ಬೇರೆ ಕೆಲ್ಸಕ್ಕೆ ಟ್ರೈ ಮಾಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಏನೇ ಆದ್ರೂ ಪಾಸಿಟಿವ್ ಆಗಿ ತೆಗೆದುಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು